ವಿವೇಕಾನಂದ ಕಾಲೇಜಿನಲ್ಲಿ ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆ

  • ಯಕ್ಷಗಾನ ಎಂದಿಗೂ ಬಡವಾಗಿಲ್ಲ – ಕ್ಯಾ.ಮಹೇಶ್ ರೈ
ಪುತ್ತೂರು: ಯಕ್ಷಗಾನ ಎಂಬುವುದು ಒಂದು ಅದ್ಭುತವಾದ ಕಲೆ. ನಾವು ಪರಿಪೂರ್ಣವಾದ ಯಕ್ಷಗಾನ ಕಲಾವಿದನಾಗಬೇಕಾದರೆ ಪ್ರಸಂಗದ ನಡೆಗಳನ್ನು ಇಷ್ಟಪಟ್ಟು ನೋಡಬೇಕು ಹಾಗೂ ಸಂಪೂರ್ಣವಾಗಿ ಅರಿತುಕೊಂಡ ನಂತರವಷ್ಟೇ ವೇಷಧಾರಿಗಳಾಗಬೇಕು ಎಂದು ವಿವೇಕಾನಂದ ಮಹಾವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಕ್ಯಾ.ಪ್ರೊ. ಮಹೇಶ್ ರೈ. ಡಿ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ ದಯಾನಂದ ಪೈ ಮತ್ತು ಶ್ರೀ ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಪುತ್ತೂರಿನ ವಿವೇಕಾನಂದ ಸಂಶೋಧನ ಕೇಂದ್ರ, ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ, ಲಲಿತ ಕಲಾ ಸಂಘ ಹಾಗೂ ಐಕ್ಯೂಎಸಿ ಇವುಗಳ ಸಹಯೋಗದಲ್ಲಿ ನಡೆದ `ಪ್ರಕ್ಷುಬ್ಧ ರಾಧೇಯ’ ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ದೀಪೋಜ್ವಲನೆ ಮಾಡಿ ಮಾತಾನಾಡಿದ ಅವರು, ವಿವೇಕಾನಂದ ಕಾಲೇಜಿನಲ್ಲಿ ಯಕ್ಷಗಾನ ಎನ್ನುವುದು ದಿನನಿತ್ಯ ನಡೆಯುವಂತ ಕಲೆ. ಇದಕ್ಕೆ ಕಾರಣ ಇಲ್ಲಿ ಪ್ರತಿ ವರ್ಷ ಯಕ್ಷಗಾನ ತಪ್ಪದೇ ನಡೆಯುತ್ತಿರುವುದು. ಈ ನೆಲದಲ್ಲಿ ಎಂದಿಗೂ ಯಕ್ಷಗಾನ ಬಡವಾಗಿಲ್ಲ, ಬಡವಾಗುವುದೂ ಇಲ್ಲ ಎಂದು ಹೇಳಿದರು.
ನಂತರ `ಪ್ರಕ್ಷುಬ್ಧ ರಾಧೇಯ’ ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆ ನಡೆಯಿತು ಭಾಗವತರಾಗಿ ವಿದ್ವಾನ್ ಗಣಪತಿ ಭಟ್‌ಯಲ್ಲಾಪುರ, ಮದ್ದಳೆಯಲ್ಲಿ ಎ.ಪಿ.ಪಾಠಕ್, ಅರ್ಥಗಾರಿಕೆಯಲ್ಲಿ ದಿವಾಕರ್ ಹೆಗಡೆ ಮೈಸೂರು ಸಹಕರಿಸಿದರು.
ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಮನಮೋಹನ ಎಂ ಕಾರ್‍ಯಕ್ರಮ ನಿರ್ವಹಿಸಿದರು. ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ. ಶ್ರೀಶ ಕುಮಾರ್ ಎಂ.ಕೆ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.