ಪ್ರಧಾನಿ ನರೇಂದ್ರ ಮೋದಿ ಸರಕಾರದ 8 ವರ್ಷ ಆಡಳಿತ ಪೂರೈಸಿದ ಹಿನ್ನೆಲೆ – ಪುತ್ತೂರಿನಿಂದ ಬಿ.ಸಿ ರೋಡ್‌ಗೆ ಬಿಜೆಪಿ ಯುವ ಮೋರ್ಚಾದಿಂದ ಬೈಕ್ ರ್‍ಯಾಲಿ

0

  • ಪ್ರಧಾನಿಯವರ ಕಾರ್ಯಕ್ರಮದೊಂದಿಗೆ ರಾಷ್ಟ್ರಾಭಿಮಾನ ಮೂಡಿಸಿ- ಸಂಜೀವ ಮಠಂದೂರು

 

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ 8 ವರ್ಷ ಯಶಸ್ವಿ ಆಡಳಿತ ಪೂರೈಸಿದ ಸಂಭ್ರಮಾಚರಣೆಯಾಗಿ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಜೂ. 12ಕ್ಕೆ ಬೆಳಿಗ್ಗೆ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಬಿಜೆಪಿ ಯುವ ಮೋರ್ಚಾದಿಂದ ಪುತ್ತೂರಿನಿಂದ ಬಿಸಿರೋಡ್ ತನಕ ಬೈಕ್ ರ್‍ಯಾಲಿ ನಡೆಯಿತು. ಶಾಸಕ ಸಂಜೀವ ಮಠಂದೂರು ಪಕ್ಷದ ಧ್ವಜವನ್ನು ಯುವ ಮೋರ್ಚಾದ ಗ್ರಾಮಾಂತರ ಮಂಡಲದ ಅಧ್ಯಕ್ಷ ನವೀನ್ ಪಡ್ನೂರು ಮತ್ತು ನಗರ ಮಂಡಲದ ಅಧ್ಯಕ್ಷ ಸಚಿನ್ ಶೆಣೈ ಅವರಿಗೆ ಹಸ್ತಾಂತರಿಸುವ ಮೂಲಕ ರ್‍ಯಾಲಿಗೆ ಚಾಲನೆ ನೀಡಿದರು.


ಪ್ರಧಾನಿಯವರ ಕಾರ್ಯಕ್ರಮದೊಂದಿಗೆ ರಾಷ್ಟ್ರಾಭಿಮಾನ ಮೂಡಿಸಿ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪ್ರಧಾನಿ ಮೋದಿಯವರ ೮ ವರ್ಷದ ಜನ ಕಲ್ಯಾಣ ಯೋಜನೆಯನ್ನು ಸಾಮಾನ್ಯ ಜನರ ಮನೆಗೆ ತಲುಪಿಸುವ ಕಾರ್ಯ ಮತ್ತು ಜನರು ಸರಕಾರದ ಸವಲತ್ತು ಪಡೆಯುವ ಜೊತೆಯಲ್ಲಿ ಬಿಜೆಪಿಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕೆನ್ನುವ ದೃಷ್ಟಿಯಿಂದ ಹತ್ತು ಹದಿನೈದು ಕಾರ್ಯಕ್ರಮ ಹಾಕಿಕೊಂಡು ಕಾರ್ಯಕ್ರಮ ನಡೆಯುತ್ತಿದೆ. ಯುವ ಸಮಾಜವನ್ನು ಜಾಗೃತ ಗೊಳಿಸುವ ನಿಟ್ಟಿನಲ್ಲಿ ವಾಹನ ರ್‍ಯಾಲಿ ನಡೆಯುತ್ತಿದೆ. ಯುವ ಶಕ್ತಿ ರಾಷ್ಟ್ರಶಕ್ತಿಯಾಗಬೇಕು. ಆ ಮೂಲಕ ರಾಷ್ಟ್ರೋತ್ಥಾನ ಆಗಬೇಕೆಂಬ ಕಲ್ಪಣೆಯಡಿಯಲ್ಲಿ ಯುವ ಮೋರ್ಚಾದಿಂದ ನಡೆಯುವ ಕಾರ್ಯಕ್ರಮದಲ್ಲಿ ದೇಶದ ಶೇ೬೦ ಮಂದಿ ಯುವಕರು ದೇಶದ ಪ್ರಧಾನಿಯವರ ಕಾರ್ಯಕ್ರಮದ ಜೊತೆಯಲ್ಲಿ ರಾಷ್ಟ್ರಾಭಿಮಾನ ಮೂಡಿಸಬೇಕೆಂದರು. ಬಳಿಕ ಅವರು ತೆಂಗಿನ ಕಾಯಿ ಒಡೆದು ವಾಹನ ಜಾಥಾಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಯುವ ಮೋರ್ಚಾದ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ರತನ್ ರೈ, ನಗರ ಯುವ ಮೋರ್ಚಾದ ಕಾರ್ಯದರ್ಶಿ ಸವಿನ್ ಬಿ.ಎಸ್, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್, ಜಯಶ್ರೀ ಎಸ್ ಶೆಟ್ಟಿ, ಬನ್ನೂರು ಗ್ರಾ.ಪಂ ಸದಸ್ಯೆ ರಮಣಿ ಗಾಣಿಗ, ಶ್ರೀನಿವಾಸ್ ಪೆರ್‍ವೋಡಿ, ಪೂವಪ್ಪ, ಉಷಾ ಮುಳಿಯ, ಸುರೇಶ್ ಆಳ್ವ, ಮಾಜಿ ಪುರಸಭೆ ಅಧ್ಯಕ್ಷ ಯು ಲೋಕೇಶ್ ಹೆಗ್ಡೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಬಜತ್ತೂರು, ತಾ.ಪಂ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಮನೀಶ್ ಕುಲಾಲ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಬೆಳ್ಳಾರೆ ಕಡೆಯಿಂದ ಬೈಕ್ ರ್‍ಯಾಲಿ ಜೊತೆ ಪುತ್ತೂರಿನ ಬೈಕ್ ರ್‍ಯಾಲಿ ಜೊತೆಯಾಗಿ ಬಿ.ಸಿ.ರೋಡ್‌ಗೆ ತೆರಳಿದರು.

LEAVE A REPLY

Please enter your comment!
Please enter your name here