ವೀರಮಂಗಲ ಶಾಲೆಯಲ್ಲಿ ಭರತನಾಟ್ಯ ತರಗತಿ ಶುಭಾರಂಭ

0

 

 

ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿ ಸಾಂಸ್ಕೃತಿಕ ಕ್ಲಬ್ ನ ವತಿಯಿಂದ ಭರತನಾಟ್ಯ ತರಗತಿ ಶುಭಾರಂಭಗೊಂಡಿತು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ವಿದ್ಯುಕ್ತವಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಭರತನಾಟ್ಯವು ನಮ್ಮ ದೇಶದ ಸನಾತನ ಕಲೆ. ಇದರಲ್ಲಿ ಸಂಗೀತ, ಅಭಿನಯ, ಅಭಿವ್ಯಕ್ತಿ ಪೂರಕವಾಗಿ ವಸ್ತ್ರ ವಿನ್ಯಾಸಗಳು ಈ ಕಲೆಯನ್ನು ಶ್ರೀಮಂತವಾಗಿಸಿದೆ. ಒಂದು ಕಾಲಘಟ್ಟದಲ್ಲಿ ಒಂದು ಜನಾಂಗ ಅಥವಾ ಕುಲ ಕಸುಬನ್ನಾಗಿ ಸ್ವೀಕರಿಸಿದ ಜನರಿಗೆ ಮಾತ್ರ ಸೀಮತವಾಗಿದ್ದ, ಈ ಕಲೆಯು ಆರಾದನಾ ಕುಣಿತವಾಗಿತ್ತು. ಕಾಲ ಕ್ರಮೇಣ ಈ ನಾಟ್ಯಕಲೆ ಶಿಷ್ಟ ಜನಾಂಗದ ಆಕರ್ಷಣೆಗೆ ಒಳಪಟ್ಟು ರಾಜಾಶ್ರಯದೊಂದಿಗೆ ಶಾಸ್ರೀಯ ನೆಲೆಗಟ್ಟಿನಲ್ಲಿ ದಾಸರ ಕೀರ್ತನೆಗಳಿಗೆ ಜೀವ ತುಂಬಿತು. ಆಂಗೀಕ, ವಾಚಿಕ,ಆಹಾರ್ಯ,ಸಾತ್ವಿಕ ಗುಣಗಳನ್ನು ಹೊಂದಿದ ಈ ಸನಾತನ ಕಲೆಯ ಆರಾದನೆ ಎಳವೆಯಲ್ಲೆ ದೊರೆತಾಗ ಮಾತ್ರ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತದೆ. ದೇಸಿ ಕಲೆಗಳಾದ ಸಂಗೀತ ಯಕ್ಷಗಾನ ಜನಪದ ಕಲೆಯ ಅಧ್ಯಯನಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ ಎಂದರು. ಹಿರಿಯ ಶಿಕ್ಷಕಿ  ಹರಿಣಾಕ್ಷಿ ಇವರು ಶುಭಾ ಶಂಸನೆಗೈದು ಕಳೆದ 20 ವರ್ಷಗಳಿಂದ ನಮ್ಮ ಶಾಲೆಯಲ್ಲಿ ವಿದ್ವಾನ್ ಗೋಪಾಲಕೃಷ್ಣ ಇವರು ನಾಟ್ಯತರಬೇತಿಯನ್ನು ಮಾಡುತ್ತಿರುವುದು ಆಸಕ್ತ ಮಕ್ಕಳಿಗೆ ಉತ್ತಮ ಅವಕಾಶ ಕಲ್ಪಿಸಿ ಕೊಟ್ಟಿದೆ ಈ ಕಾರ್ಯಕ್ರಮವು ನಮ್ಮ ಶಾಲೆಯಲ್ಲಿ ಯಶಸ್ವಿಯಾಗಲಿ ಎಂದರು. ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ಇವರು ಹಾಡಿದ ದೇವರನಾಮಕ್ಕೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಪ್ರತಿ ಆದಿತ್ಯವಾರ ಮತ್ತು ರಜಾದಿನಗಳಲ್ಲಿ ಭರತನಾಟ್ಯ ತರಗತಿಗಳು ನಡೆಯಲಿದ್ದು ಆಸಕ್ತರು ಸೇರಲು ಅವಕಾಶ ಕಲ್ಪಿಸಲಾಯಿತು. ಶಾಲಾ ಶಿಕ್ಷಕಿಯರಾದ ಶ್ರೀಲತಾ, ಕವಿತಾ ಶೋಬಾ,ಹೇಮಾ ಗಾಯತ್ರಿ. ಇವರು ಉಪಸ್ಥಿತರಿದ್ದರು.ಸಾಂಸ್ಕೃತಿಕ ಕ್ಲಬ್ ನ ನಾಯಕಿ ನಾವಿನ್ಯ ಕಾರ್ಯಕ್ರಮ ಸಂಘಟಿಸಿದರು

LEAVE A REPLY

Please enter your comment!
Please enter your name here