ಶಿವಳ್ಳಿ ಸಂಪದದ ರಜತ ಸಂಪದ ಬಿಡುಗಡೆ, ಶಿವಳ್ಳಿ ವಿಭೂಷಣ, ಶಿವಳ್ಳಿ ಪ್ರಶಸ್ತಿ, ಕೃಷಿಕ ಪ್ರಶಸ್ತಿ ಪ್ರದಾನ

ಪುತ್ತೂರು:ಶಿವಳ್ಳಿ ಸಂಪದ ಪುತ್ತೂರು ಇದರ 27ನೇ ವಾರ್ಷಿಕ ಮಹಾಸಭೆ, ರಜತ ಸಂಪದ ಬಿಡುಗಡೆ, ಶಿವಳ್ಳಿ ವಿಭೂಷಣ ಪ್ರಶಸ್ತಿ, ಶಿವಳ್ಳಿ ಪ್ರಶಸ್ತಿ, ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಜೂ.12ರಂದು ಕೆಮ್ಮಾಯಿ ಶ್ರೀವಿಷ್ಣು ಮಂಟಪದಲ್ಲಿ ನಡೆಯಿತು.


ಕಾರ್ಯಕ್ರಮದ ಪ್ರಾರಂಭದಲ್ಲಿ ಸುರೇಶ್ ನಕ್ಷತ್ರಿತ್ತಾಯರವರ ನೇತೃತ್ವದಲ್ಲಿ ಧನ್ವಂತರಿ ಹೋಮ ನಡೆಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ಚವನ ನೀಡಿದ ಎಡನೀರು ಮಠದ ಸಚ್ಚಿದಾನಂದ ಭಾರತಿ ಮಹಾಸ್ವಾಮಿಜಿಯವರು ಮಾತನಾಡಿ, ಹಿಂದು ಸಮಾಜ ಸದೃಡವಾಗಿರಬೇಕಾದರೆ ತಳಮಟ್ಟದಲ್ಲಿ ಒಗ್ಗಟ್ಟಿನಲ್ಲಿರಬೇಕು. ಇದಕ್ಕಾಗಿ ನಮ್ಮ ಮನೆಯ ಪರಿಸರ ಒಗ್ಗಟ್ಟಿನಲ್ಲಿರಬೇಕು. ತಳಮಟ್ಟದಲ್ಲಿ ಶಕ್ತಿಯುತವಾಗಿ ಬೆಳೆದಾಗ ಹಿಂದು ಸಮಾಜ ಸದೃಡ ಸಮಾಜವಾಗಿ ಬೆಳೆಯಲು ಸಾಧ್ಯ ಎಂದರು. ಶಿವಳ್ಳಿ ಸಂಪದವು ಸಾಮಾಜಿಕ ಅತ್ಯಂತ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ರಜತ ಸಂಪದದಲ್ಲಿ ಸಮಾಜದ ಎಲ್ಲಾ ಮಾಹಿತಿಗಳನ್ನು ಒಳಗೊಂಡಿದೆ. ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ನಮ್ಮ ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು ಎಂದ ಅವರು ಸಂಘಕ್ಕೆ ಸ್ವಂತ ಕಟ್ಟಡಗಳಿದ್ದಾಗ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ನೀಡಲು ಸಾಧ್ಯ. ಶಿವಳ್ಳಿ ಸಂಪದಕ್ಕೆ ಸ್ವಂತ ನಿವೇಶನವಿದ್ದು ಅದರಲ್ಲಿ ಸುಸಜ್ಜಿತ ಭವನ ನಿರ್ಮಾಣವಾಗಬೇಕು ಎಂದರು. ಪ್ರಶಸ್ತಿ ಸ್ವೀಕರಿಸಿದ ನ್ಯಾಯವಾದಿ ಎನ್ ಸುಬ್ರಹ್ಮಣ್ಯಂ ಮಾತನಾಡಿ, ನಾವು ದುಡಿಯು ಕ್ಷೇತ್ರ ಯಾವುದೇ ಇರಲಿ. ಅದರಲ್ಲಿ ಆಸಕ್ತಿ ಮತ್ತು ಪ್ರೀತಿ ಇದ್ದಾಗ ಯಶಸ್ಸು ಸಾಧ್ಯ. ಸಮಾಜ ಸೇವೆ ಮಾಡುವ ಮನೋಭಾವನೆ ನಮ್ಮಲ್ಲಿರಬೇಕು ಎಂದರು.


ರಜತ ಸಂಪದ ಬಿಡುಗಡೆ:
ಶಿವಳ್ಳಿ ಸಂಪದದ ಪರಿಸ್ಕೃತ ಮಾಹಿತಿ ಕೋಶ `ರಜತ ಸಂಪದ’ವನ್ನು ಶ್ರೀ ಸಚ್ಚಿದಾನಂದ ಸ್ವಾಮಿಜಿಯವರು ಬಿಡುಗಡೆ ಮಾಡಿದರು.


ಪ್ರಶಸ್ತಿ ಪ್ರದಾನ:
ಶಿವಳ್ಳಿ ಸಂಪದದ ಪೂರ್ವ ಗೌರವಾಧ್ಯಕ್ಷ ದಿ.ಜಿ.ಎಲ್ ಆಚಾರ್ಯರವರಿಗೆ ನೀಡುವ ಮರಣೋತ್ತರ ಶಿವಳ್ಳಿ ವಿಭೂಷಣ ಪ್ರಶಸ್ತಿಯನ್ನು ಅವರ ಪುತ್ರ ಬಲರಾಮ ಆಚಾರ್ಯರವರಿಗೆ ಹಾಗೂ ಹಿರಿಯ ನ್ಯಾಯವಾದಿ ಎನ್ ಸುಬ್ರಹ್ಮಣ್ಯಂ ಕೊಳ್ಳತ್ತಾಯ ಶಿವಳ್ಳಿ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆದಿತ್ಯ ಕಲ್ಲೂರಾಯರವರಿಗೆ ಶಿವಳ್ಳಿ ಶ್ರೀ ಪ್ರಶಸ್ತಿ, ಜಯಗುರು ಆಚಾರ್ ಹಿಂದಾರು ಹಾಗೂ ಶಿವಪ್ರಸಾದ್ ಇಜ್ಜಾವುರವರಿಗೆ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಮಟ್ಟದ ವಿಜ್ಞಾನ ಸಂಶೋಧನಾ ಮೇಳದಲ್ಲಿ ಬೆಳ್ಳಿ ಪದಕ ಪಡೆದ ಮಿಥುನ್ ಕುದ್ದಣ್ಣಾಯ, ಪತ್ರಾಂಕಿತ ಅಧಿಕಾರಿಗಳಾದ ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್, ಸುಳ್ಯ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಎಂ.ಎಚ್ ಸುಧಾಕರ್, ಮಂಗಳೂರು ಡಿಡಿಪಿಐ ಸುಧಾಕರ ಪುತ್ತೂರಾಯ, ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ, ಮಂಗಳೂರು ಡಿಡಿಪಿಐ ಕಚೇರಿ ಅಧೀಕ್ಷಕಿ ಸ್ವರ್ಣಲತಾ ಬಾರ್ಯ, ರಜತ ಸಂಪದದ ಸಂಪಾದಕೀಯರಾದ ಆನಂದ ಉಡುಪ, ಶರತ್ ಕುಮಾರ್ ರಾವ್, ಸಂಜಯ ಉಪ್ಪಾರ್ಣ ಹಾಗೂ ಶಿವಳ್ಳಿ ಸಂಪದದ ಮಾಜಿ ಅಧ್ಯಕ್ಷರುಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಶಿವಳ್ಳ ಸಂಪದದ ಅಧ್ಯಕ್ಷ ನ್ಯಾಯವಾದಿ ದಿವಾಕರ ನಿಡ್ವಣ್ಣಾಯ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಹರೀಶ್ ಪುತ್ತೂರಾಯ, ಯುವ ಸಂಪದದ ಅಧ್ಯಕ್ಷ ಜಯಗುರು ಆಚಾರ್, ಮಹಿಳಾ ಸಂಪದದ ಗೌರವಾಧ್ಯಕ್ಷೆ ವತ್ಸಲಾ ರಾಜ್ಞಿ, ಅಧ್ಯಕ್ಷ ಪ್ರೇಮಲತಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಜಯ ನೆಲ್ಲಿತ್ತಾಯ ಪ್ರಾರ್ಥಿಸಿದರು. ಸಂಪದದ ಅಧ್ಯಕ್ಷ ದಿವಾಕರ ನಿಡ್ವಣ್ಣಾಯ ಸ್ವಾಗತಿಸಿದರು. ಆನಂದ ಉಡುಪ, ಸುಧೀಂದ್ರ ಕುದ್ದಣ್ಣಾಯ, ಎ.ವಿ ನಾರಾಯಣ, ಕೆ.ಆರ್ ಆಚಾರ್ಯ, ಸೂರ್ಯಪ್ರಕಾಶ ಉಡುಪ, ಯದುಕುಮಾರ್ ಕೊಳತ್ತಾಯ, ರಂಗನಾಥ ರಾವ್, ಶರತ್ ಕುಮಾರ್ ಶಿಬರೂರಾಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ರವೀಂದ್ರ ಟಿ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಸತೀಶ್ ಕೆದಿಲಾಯ ವಂದಿಸಿದರು.

ಮಹಾಸಭೆ:
ಸಭಾ ಕಾರ್ಯಕ್ರಮದ ಬಳಿಕ ಶಿವಳ್ಳಿ ಸಂಪದದ ೨೭ನೇ ವಾರ್ಷಿಕ ಮಹಾಸಭೆಯು ಸಂಪದದ ಅಧ್ಯಕ್ಷ ದಿವಾಕರ ನಿಡ್ವಣ್ಣಾಯರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಪದದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಪದ ವಿವಿಧ ವಲಯಗಳ ಉಸ್ತವಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.