ಸರ್ವೆ : ಹಿಂದೂ ಜಾಗರಣ ವೇದಿಕೆಯಿಂದ ಪುಸ್ತಕ ವಿತರಣೆ,ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

0

ಸವಣೂರು : ಸರ್ವೆ ಹಿಂದೂ ಜಾಗರಣ ವೇದಿಕೆ ರಕ್ತೇಶ್ವರಿ ಶಾಖೆಯ ವತಿಯಿಂದ  ಸರ್ವೆ ಗ್ರಾಮದ 125 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮತ್ತು ಎಸೆಸೆಲ್ಸಿಯಲ್ಲಿ ಸಾಧನೆಗೈದ ಪ್ರತಿಭಾನ್ವಿತ 9 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಸರ್ವೆಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರ ದಲ್ಲಿ ಜೂ.11ರಂದು ನಡೆಯಿತು .


ವೇದಿಕೆಯಲ್ಲಿ, ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಮಾತೃ ಸುರಕ್ಷ ಸಂಯೋಜಕ ಸ್ವಸ್ತಿಕ್ ಮೇಗಿನಗುತ್ತು ಹಿಂದು ಜಾಗರಣ ವೇದಿಕೆ ರಕ್ತೇಶ್ವರಿ ಶಾಖೆ ಸರ್ವೆ ಇದರ ಅಧ್ಯಕ್ಷರಾದ ಜಯಂತ್ ಭಕ್ತಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮಂಡಳಿ ,ಮುಂಡೂರು ಗ್ರಾ.ಪಂ.ಸದಸ್ಯರಾದ ಚಂದ್ರಶೇಖರ್ ಎನ್.ಎಸ್.ಡಿ ಮಾತನಾಡಿ,ವಿದ್ಯಾರ್ಥಿಗಳಿಗೆ ಸಂಘಟನೆಯವರು ಮಾಡಿದ ಈ ಕಾರ್ಯಕ್ರಮ  ಊರಿಗೆ ಮಾದರಿಯಾಗಿದೆ ವಿದ್ಯಾರ್ಥಿಗಳು ಇದನ್ನು ನಿಮ್ಮ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಿದಾಗ  ಈ ಕಾರ್ಯಕ್ರಮದ ಯಶಸ್ವಿಯಾಗಲು ಸಾಧ್ಯ ಎಂದರು.
 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಹಿಂದೂ ಜಾಗರಣ ವೇದಿಕೆಯ ಮಾರ್ಗದರ್ಶಕರು ಹಿರಿಯ ಸ್ವಯಂಸೇವಕರಾದ ಸದಾಶಿವ ಭಂಡಾರಿ ಬೊಟ್ಯಾಡಿ ಮಾತನಾಡಿ ,ಭಾರತ ಮಾತೆ ವಿಶ್ವಮಾತೆ ಆಗಬೇಕಾದರೆ ಇಂದಿನ ಯುವಪೀಳಿಗೆಗಳಿಂದ ಒಳ್ಳೆಯ ಕಾರ್ಯವಾಗಬೇಕು. ವಿದ್ಯಾರ್ಥಿಗಳು ಧರ್ಮ ಶಿಕ್ಷಣವನ್ನು ಚಿಕ್ಕವಯಸ್ಸಿನಲ್ಲಿ ಪಡೆದಲ್ಲಿ ಭಾರತ ವಿಶ್ವ ಗುರುವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ವಿದ್ಯಾರ್ಥಿಗಳು ತಂದೆ-ತಾಯಿಗುರುಗಳು ಹಿರಿಯರನ್ನು ಗೋಮಾತೆಯನ್ನು ಗೌರವಿಸಿದಲ್ಲಿ ನಡೆ-ನುಡಿಯಲ್ಲಿ ಗೌರವ ವಿದ್ದಲ್ಲಿ ತಮ್ಮ ಶಿಕ್ಷಣ ಇನ್ನಷ್ಟು ಪ್ರಜ್ವಲಿಸುವುದು ಎಂದರು.

ಕಾರ್ಯಕ್ರಮದಲ್ಲಿ ಸರ್ವೆ ಗ್ರಾಮದ ಎಸ್ಸೆಸೆಲ್ಸಿ  ಪರೀಕ್ಷೆಯಲ್ಲಿ ಸಾಧನೆಗೈದ ಕೌಶಿಕ್ ಬಿ ಪಿ,ಶಮನ್ ಕೃಷ್ಣ,ಕೀರ್ತನ್,ಕೃತಿಕಾ ಎ, ವರ್ಷಿತ್ ಹೆಚ್,ವಿನ್ಯಾ ವಿ,ಪ್ರತಿಕ್ಷಾ ಬಿ,ಸಂಜನಾ ವಿ,ರಶ್ಮಿತಾ ಅವರನ್ನು ಅಭಿನಂದಿಸಲಾಯಿತು.

ಮುಂಡೂರು ಗ್ರಾ.ಪಂ.ಸದಸ್ಯರಾದ ಕರುಣಾಕರ ಗೌಡ ಎಲಿಯ,ಪ್ರವೀಣ್ ನಾಯ್ಕ್ ನೆಕ್ಕಿತಡ್ಕ, ಅಶೋಕ್ ಕುಮಾರ್ ಸೊರಕೆ ,ವಸಂತ ಕೈಪಂಗಳ ದೋಲ, ನವೀನ್ ರೈ ಸರ್ವೆ, ಯೋಗೀಶ್ ಟಿ, ಪದ್ಮನಾಭ ಗೌಡ, ಕೀರ್ತಿ ಗೌಡ ,ಜಿತೇಶ್ ,ಶಿವರಾಮ್ ಭಟ್,ಆನಂದ ಭಂಡಾರಿ, ಅಶೋಕ್ ಗೌಡ,ರೋಷನ್,ದೇವಪ್ಪ ಪೂಜಾರಿ,ಪ್ರದೀಪ್ ರೈ, ದೇವಪ್ಪ ಕೆ,ಸುಂದರ್ ಸರ್ವೆ,ವಾಸು ಬಿ,ಉಮೇಶ್ ಎಸ್.ಡಿ,ಗಣೇಶ್ ಭಕ್ತಕೋಡಿ,ಲೋಕೇಶ್ ಗೌಡ ಸರ್ವೆ ಉಪಸ್ಥಿತರಿದ್ದರು.

ವಿನಯ್ ಕುಮಾರ್ ಸರ್ವೆ ಸ್ವಾಗತಿಸಿದರು ಗೌತಮ ರೈ ಸರ್ವೆ ವಂದಿಸಿದರು ಅಶೋಕ್ ಜನಾರ್ಧನ ಸರ್ವೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here