ಎಸ್.ಎಸ್.ಎಲ್. ಸಿ. ಪರೀಕ್ಷೆಯಲ್ಲಿ 612 ಅಂಕ‌ ಪಡೆದ ಶಾಂತಿನಗರ ಪ್ರೌಢಶಾಲಾ ವಿದ್ಯಾರ್ಥಿನಿ ಮಾನಸರವರಿಗೆ ಉಪ್ಪಿನಂಗಡಿ ಜೆಸಿಐಯಿಂದ ಸನ್ಮಾನ

0

 


ಪುತ್ತೂರು: ಜೇಸಿಐ ಉಪ್ಪಿನಂಗಡಿ ಘಟಕದ ಆಡಳಿತ ಮಂಡಳಿಯ ಸಭೆ ಘಟಕದ ಕಾರ್ಯದರ್ಶಿಯಾಗಿರುವ ಶಿಕ್ಷಕಿ ಲವೀನಾ ಪಿಂಟೊರವರ ನೆಕ್ಕಿಲಾಡಿ ಬೇರಿಕೆ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬೇರಿಕೆ ಕಾರ್ನೋಜಿ ನಿವಾಸಿಗಳಾದ ಮಮತಾ ಮತ್ತು ನಾರಾಯಣರವರ ಪುತ್ರಿ, ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ 612 ಅಂಕ ಪಡೆದಿರುವ ಕೋಡಿಂಬಾಡಿ ಶಾಂತಿನಗರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾನಸರವರನ್ನು ಜೆಸಿಐ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜೆಸಿಐ ಉಪ್ಪಿನಂಗಡಿ‌ ಘಟಕದ ಪೂರ್ವಾಧ್ಯಕ್ಷರಾದ ಮಧುರಾ ಡ್ರೈವಿಂಗ್ ಸ್ಕೂಲ್ ಮುಖ್ಯಸ್ಥ ಆನಂದ ರಾಮಕುಂಜ ಮತ್ತು ಹರೀಶ್ ನಟ್ಟಿಬೈಲು ಸನ್ಮಾಸಿ ಶುಭ ಹಾರೈಸಿದರು. ಜೆಸಿಐ ಘಟಕದ ಮಾಜಿ ಅಧ್ಯಕ್ಷರಾದ ಮೋನಪ್ಪ ಗೌಡ ಪಮ್ಮನಮಜಲು, ಶಶಿಧರ್ ನೆಕ್ಕಿಲಾಡಿ ಮತ್ತು ಕಾರ್ಯದರ್ಶಿ ಲವಿನಾ ಪಿಂಟೊರವರು ನಗದು ಬಹುಮಾನ ನೀಡಿ ಗೌರವಿಸಿದರು. ಘಟಕ ಅಧ್ಯಕ್ಷ ಮೋಹನ್ ಚಂದ್ರ ತೋಟದಮನೆ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಕೆ.ವಿ.ಕುಲಾಲ್ ಮತ್ತು ಕೋಶಾಧಿಕಾರಿ ಸುರೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here