ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’- ಕೃಷಿ ಇಲಾಖೆಯ ‘ಕೃಷಿ ಅಭಿಯಾನ ರಥ’ಕ್ಕೆ ಚಾಲನೆ

0

ಪುತ್ತೂರು: ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಧ್ಯೇಯ ವಾಕ್ಯದಡಿಯಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಮಾಹಿತಿ ನೀಡುವ ಸಮೂಹ ಜಾಗೃತಿ ಕಾರ್ಯಕ್ರಮ ‘ಕೃಷಿ ಅಭಿಯಾನ’ ರಥ ಯಾತ್ರೆಗೆ ಜೂ.13ರಂದು ಚಾಲನೆ ನೀಡಲಾಯಿತು.

ಶಾಸಕ ಸಂಜೀವ ಮಠಂದೂರು ಅಭಿಯಾನ ರಥ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳನ್ನು ಮಾಹಿತಿ ನೀಡುವ ಮೂಲಕ ಸಂಪರ್ಕದ‌ ಕೊಂಡಿಯಾಗಿ ಕಾರ್ಯ ನಿರ್ವಹಿಸಿ, ಇಲಾಖೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಅಭಿಯಾನವು ಸಹಕಾರಿಯಾಗಲಿದೆ . ಜೊತೆಗೆ ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡ ಅಧಿಕ ಇಳುವರಿ ಪಡೆದು ವಿದೇಶಗಳಿಗೆ ರಪ್ತು ಮಾಡುವ ಮೂಲಕ ಕೃಷಿಯಲ್ಲಿ ಪರಿವರ್ತನೆಗೆ ಸಹಕಾರಿಯಾಗಲಿದೆ ಎಂದರು.

ಕಳೆದ ಅವದಿಯಲ್ಲಿ ಸುಮಾರು110 ಎಕ್ರೆ ಹಡಿಲು ಗದ್ದೆಯಲ್ಲಿ ಬೇಸಾಯ ಮಾಡಿ ಆಹಾರದಲ್ಲಿ ಸ್ವಾವಲಂಬನೆ ಜೊತೆಗೆ ಮುಂದಿನ ಪೀಳಿಗೆಗೆ ಪ್ರೇರಣೆ ನೀಡಲಾಗಿದೆ. ಈ ಬಾರಿ ಹಡೀಲು ಗದ್ದೆಯಲ್ಲಿ ಮತ್ತೆ ನಾಟಿ ಮಾಡುವ ಮೂಲಕ ಸ್ಥಳೀಯ ಸಂಘ ಸಂಸ್ಥೆಗಳು ಸೇರಿಸಿಕೊಳ್ಳಲಾವುದು ಎಂದ ಅವರು, ಕೃಷಿಕ ಸಮಾಜಕ್ಕೆ ನಿವೇಶನವಿದ್ದು ಅದರಲ್ಲಿ ಕಟ್ಟಡಕ್ಕೆ ಅನುದಾನ ಕ್ಕೆ ಮನವಿ ಮಾಡಲಾಗಿದೆ. ಜೊತೆಗೆ ಶಾಸಕರ ನಿಧಿಯೊಂದ ರೂ.10 ಲಕ್ಷ ಜೋಡಿಸಿಕೊಳ್ಳಾಲಾಗುವುದು ಎಂದು ಹೇಳಿದರು.

ಭ್ರಷ್ಟಾಚಾರ ರಹಿತ ಸೇವೆ ದೊರೆಯಬೇಕು:
ಇಲಾಖೆ ಸವಲತ್ತು ಪಡೆದುಕೊಳ್ಳುವ ಲಾಭಿಯು ನಡೆಯುತ್ತಿದೆ. ಇಲಾಖೆ ಸೌಲಭ್ಯಗಳು ಪ್ರತಿಯೊಬ್ಬ ರೈತರಿಗೂ ಆಧಯತೆಯಲ್ಲಿ ದೊರೆಯಬೇಕು. ಒಂದು ಸೌಲಭ್ಯವನ್ನು ಒಂದು ಬಾರಿ ಪಡೆದವರು ಮತ್ತೆ ಮತ್ತೆ ಪಡೆದುಕೊಳ್ಳಬಾರದು. ಇಲಾಖೆ ಸೇವೆಗಳು ಜನತೆಗೆ ಪಾರದರ್ಶಕವಾಗಿ, ಭ್ರಷ್ಟಾಚಾರ ರಹಿತವಾಗಿ ದೊರೆಯಬೇಕು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.

ಕೃಷಿ ಇಲಾಖೆಯ ಉಪನಿರ್ದೇಶಕ ಶಿವಶಂಕರ ದಾನಗೊಂಡರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಅವಶ್ಯವಿರುವ ತಂತ್ರ ಜ್ಞಾನವನ್ನು ರೈತರಿಗೆ ತಲುಪಿಸಲು ಏಕಗವಾಕ್ಷಿ ವಿಸ್ತರಣಾ ಪದ್ದತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ತಲುಪಿಸಲು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸಮೂಹ ಕಾರ್ಯಕ್ರಮವಾಗಿ ಕೃಷಿ ಅಭಿಯಾನ ನಡೆಯಲಿದ್ದು ಪುತ್ತೂರು, ಉಪ್ಪಿನಂಗಡಿ ಹಾಗೂ ಕಡಬ ವಲಯಗಳ ಎಲ್ಲಾ ಗ್ರಾಮಗಳಲ್ಲಿ ರಥ ಸಂಚರಿಸಲಿದೆ ಎಂದರು.

ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಸದಸ್ಯರಾದ ಐ.ಸಿ ಕೈಲಾಸ್, ರಾಕೇಶ್ ರೈ ಕೆಡೆಂಜಿ, ಮೂಲಚಂದ್ರ, ರಾಜರಾಮ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕೃಷಿ ಅಧಿಕಾರಿ ಯಶಸ್ ಮಂಜುನಾಥ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here