ಕುಂತೂರುಪದವು ಶಾಲಾ ಮಂತ್ರಿಮಂಡಲ

0

ಕಡಬ: ಕುಂತೂರುಪದವು ಸರಕಾರಿ ಹಿ.ಪ್ರಾ.ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ನಾಯಕಿಯಾಗಿ 7ನೇ ತರಗತಿಯ ಸಮೀಕ್ಷಾ ಕೆ.ಎಸ್., ಹಾಗೂ ಉಪನಾಯಕನಾಗಿ 6ನೇ ತರಗತಿಯ ಲಿಖಿತ್ ಕೆ.,ಆಯ್ಕೆಯಾದರು.

 


ಶಾಲಾ ಮಕ್ಕಳಿಗೆ ಅಣುಕು ಮತದಾನ ಮಾಡುವ ಮೂಲಕ ಮಂತ್ರಿ ಮಂಡಲ ರಚನೆ ಮಾಡಲಾಯಿತು. ಶಾಲಾ ಗೃಹ(ರಕ್ಷಣಾ)ಮಂತ್ರಿಯಾಗಿ ಮೋಕ್ಷಿತ್ 7ನೇ, ಮನ್ವಿತ್ 6ನೇ, ಶಿಕ್ಷಣ ಮಂತ್ರಿಯಾಗಿ ಸ್ವಪ್ನ 7ನೇ, ಲಿಖಿತ್ ಕೆ.ಎನ್.6ನೇ, ಆರೋಗ್ಯ ಮಂತ್ರಿಯಾಗಿ ಪ್ರಜ್ಞಾ 7ನೇ, ಅಶ್ವಿನ್ ಆರ್.6ನೇ, ಸಾಂಸ್ಕೃತಿಕ ಮಂತ್ರಿಯಾಗಿ ನಿಶ್ಮಿತಾ 7ನೇ, ಅಪೂರ್ವ 6ನೇ, ತೋಟಗಾರಿಕಾ ಮಂತ್ರಿಯಾಗಿ ಶ್ರವಣ್ 7ನೇ, ಉಪಮಂತ್ರಿಯಾಗಿ ಪಜ್ವಲ್ 6ನೇ, ಸ್ವಚ್ಛತಾ ಮಂತ್ರಿಯಾಗಿ ನಿತಿನ್‌ಕುಮಾರ್ 7ನೇ, ರಮ್ಯ 6ನೇ, ನೀರಾವರಿ ಮಂತ್ರಿಯಾಗಿ ಚರಣ್ 7ನೇ, ಗಗನ್ 6ನೇ, ಆಹಾರ ಮಂತ್ರಿಯಾಗಿ ಧನ್ಯ 7ನೇ, ಜ್ಞಾನೇಶ್ 6ನೇ, ವಾರ್ತಾ ಮಂತ್ರಿಯಾಗಿ ಅನನ್ಯ 7ನೇ, ದೀಕ್ಷಿತ್ 5ನೇ, ಕ್ರೀಡಾ ಮಂತ್ರಿಯಾಗಿ ಅಲೆನ್ 7ನೇ, ನಿಖಿಲ್‌ಕುಮಾರ್, ಸಾತ್ವಿಕಾ 5ನೇ, ಸಭಾಪತಿಯಾಗಿ ಆಸ್ತಿಕ್ 7ನೇ, ವಿರೋಧ ಪಕ್ಷದ ನಾಯಕಿಯಾಗಿ ರಕ್ಷಿತ 7ನೇ ಮತ್ತು ಜೀವಿತ್ 5ನೇ ಆಯ್ಕೆಯಾದರು, ಶಾಲಾ ಸಹಶಿಕ್ಷಕರಾದ ಕೇಶವ, ಶಿವಣ್ಣ, ಕುಸುಮ, ಗಾಯತ್ರಿಯವರು ಚುನಾವಣಾ ಕಾರ್ಯ ನಡೆಸಿಕೊಟ್ಟರು. ಶಾಲಾ ಮುಖ್ಯಗುರು ಗಿರಿಜ ವಿ.,ಮಾರ್ಗದರ್ಶನ ನೀಡಿ ಪ್ರಮಾಣ ವಚನ ಬೋಧಿಸಿದರು.

LEAVE A REPLY

Please enter your comment!
Please enter your name here