ಪಾಣಾಜೆ ಕೋಡಿಯಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ

0

  • ಗ್ರಾಮವನ್ನು ರಾಮರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಅನುದಾನ ಒದಗಿಸಲಾಗುತ್ತಿದೆ: ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

 


ವಿಟ್ಲ: ಮಕ್ಕಳಿಗೆ ಬಾಲ್ಯದ ಪೂರ್ವ ಪ್ರಥಮ ಶಿಕ್ಷಣದ ಜೊತೆ ದೈಹಿಕ ಮಾನಸಿಕ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸರಕಾರ ಅಂಗನವಾಡಿ ಮೂಲಕ ಹಲವಾರು ಯೋಜನೆ ಗಳನ್ನು ಜಾರಿಮಾಡಿದ್ದು,ಗ್ರಾಮೀಣ ಭಾಗದ ಪ್ರತಿ ಮಕ್ಕಳು ಇದರ ಪ್ರಯೋಜನ ಪಡೆಯಲು ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ಹೇಳಿದರು. ಅವರು ಜೂ.13ರಂದು ಕೊಳ್ನಾಡು ಗ್ರಾ.ಪಂ.ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಪಾಣಾಜೆಕೋಡಿಯಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಅಂಗನವಾಡಿಯಲ್ಲಿ ಶಿಕ್ಷಣ ಪಡೆಯುವ ಪ್ರತಿ ಮಕ್ಕಳ ಬಗ್ಗೆ ಮನೆಯ ಮಕ್ಕಳ ರೀತಿಯಲ್ಲಿ ನಿಗಾವಹಿಸಬೇಕು ಎಂದು ಅವರು ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ಗ್ರಾಮವು ರಾಮರಾಜ್ಯವಾಗಬೇಕು ಎಂಬ ಉದ್ದೇಶದಿಂದ ಉದ್ಯೋಗ ಖಾತರಿ ಯೋಜನೆಯಲ್ಲಿ ಅನುದಾನಗಳನ್ನು ಒದಗಿಸುತ್ತಿದ್ದು, ಗ್ರಾಮದ ಅಭಿವೃದ್ಧಿ ಯಲ್ಲಿ ಗ್ರಾಮದ ಜನರ ಸಹಕಾರ ಜೊತೆಯಿರಲಿ ಎಂದರು.

ಕೊಳ್ನಾಡು ಗ್ರಾ.ಪಂ. ಅಧ್ಯಕ್ಷೆ ನೇಬಿಸಾ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸದಸ್ಯರಾದ ಕಿಶೋರ್ ದೇವಾಡಿಗ, ಮಹಮ್ಮದ್ ಮಂಚಿ, ಲವೀನಾ, ವಸಂತಿ, ರಾಜಾರಾಮ್ ಹೆಗ್ಡೆ, ಲೋಹಿತ್, ಪ್ರಶಾಂತ್ , ಜಯಂತಿ ಎಸ್.ಪೂಜಾರಿ, ವಿಟ್ಲ ಸಿ.ಡಿ.ಪಿ.ಒ ಉಷಾ, ಗುತ್ತಿಗೆದಾರ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಶುಭಾಶ್ವಂಧ್ರ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು‌.ಪಿ.ಡಿ.ಒ ರೋಹಿಣಿ ಬಿ ಸ್ವಾಗತಿಸಿದರು.ಮೇಲ್ವಿಚಾರಕಿ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here