ಬನ್ನೂರು ಚರ್ಚ್‌ನಲ್ಲಿ ಸಂತ ಅಂತೋನಿಯವರ ವಾರ್ಷಿಕ ಹಬ್ಬ

  • ಮಾನವೀಯತೆಯ ಸಮುದಾಯ ಕಟ್ಟುವುದು ಇಂದಿನ ಅಗತ್ಯತೆ-ವಂ|ಪ್ರವೀಣ್ ಹೆನ್ರಿ

ಪುತ್ತೂರು: ಕ್ರೈಸ್ತ ಧರ್ಮವು ಪ್ರೀತಿ ಮತ್ತು ಕ್ಷಮೆ ಎಂಬ ತಳಹದಿಯ ಮೇಲೆ ನಿಂತಿದೆ. ದೇವರ ಮೇಲೆ ನಂಬಿಕೆ ಮತ್ತು ವಿಶ್ವಾಸ ಇರಿಸಿದವರಿಗೆ ದೇವರು ಎಂದೂ ಕೈ ಬಿಡಲಾರನು. ಪ್ರೀತಿ, ಕ್ಷಮೆ, ನಂಬಿಕೆ, ವಿಶ್ವಾಸವನ್ನು ಮೈಗೂಡಿಸಿಕೊಂಡು ಮಾನವೀಯತೆಯ ಸಮುದಾಯ ಕಟ್ಟುವುದು ಇಂದಿನ ಅಗತ್ಯತೆಯಾಗಿದೆ ಎಂದು ಬೆಂಗಳೂರಿನ ಸಂತ ಫ್ರಾನ್ಸಿಸ್ಕನ್ ಸಭೆಯ ಪ್ರಾಂತ್ಯಾಧಿಕಾರಿ ವಂ|ಪ್ರವೀಣ್ ಹೆನ್ರಿ ಡಿ’ಸೋಜರವರು ಹೇಳಿದರು.


ಅವರು ಜೂ.೧೩ ರಂದು ಬನ್ನೂರು ಸಂತ ಆಂತೋನಿ ಚರ್ಚ್‌ನಲ್ಲಿ ಜರಗಿದ ಸಂತ ಅಂತೋನಿಯರವರ ವಾರ್ಷಿಕ ಮಹೋತ್ಸವದ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿ, ಭಕ್ತಾಧಿಗಳಿಗೆ ಪವಿತ್ರ ಬೈಬಲ್ ಮೇಲೆ ಸಂದೇಶ ನೀಡಿದರು. ಧರ್ಮ-ಧರ್ಮ ಅಂತ ಕಿತ್ತಾಡಿದರೆ ಏನೂ ಪ್ರಯೋಜನವಿಲ್ಲ. ನಮ್ಮ ವೈರಿಗಳಿಗೆ ಶಿಕ್ಷೆಯಾಗಲಿ, ಕಠಿಣ ತೀರ್ಪು ಸಿಗಲಿ ಎಂಬ ಹಠಮಾರಿ ಜೀವನದ ಬದಲು ಅವರಿಗೆ ದೇವರು ಒಳ್ಳೆಯ ಸದ್ಭುದ್ಧಿ ಕೊಡಲಿ, ಕ್ಷಮೆಯಿರಲಿ ಎಂದು ಭಾವಿಸಿದಾಗ ಯೇಸುಕ್ರಿಸ್ತರ ಜೀವನವನ್ನು ಪರಿಪಾಲಿಸಿದಂತಾಗುತ್ತದೆ. ಮಾನವನ ಹೃದಯ ಹಾಗೂ ಮನಸ್ಸಿನಲ್ಲಿ ದೇವರನ್ನು ಹೊಂದುವಂತಾಗಬೇಕು. ನಮ್ಮ ಜೀವನದಲ್ಲಿ ಯಾವುದು ಬೇಡ ಅದನ್ನು ದೂರವಿಡಿ. ಎಲ್ಲಿ ಕೆಟ್ಟದ್ದು ಇದೆಯೋ ಅಲ್ಲಿ ಒಳ್ಳೆಯದನ್ನು ಭಿತ್ತುವ ಮನಸ್ಸು ನಮ್ಮದಾಗಲಿ ಎಂದ ಅವರು ದೇವರ ಮಾತನ್ನು ಭಕ್ತಿಪೂರ್ವಕವಾಗಿ ಆಲಿಸಿದವನಿಗೆ ಎಂದೂ ಸೋಲಿಲ್ಲ. ದೇವರ ಮಾತು ಕುಟುಂಬವನ್ನು ಒಂದಾಗಿ ಬಾಳಲು ಹಾಗೂ ಸಮಾನತೆಯಿಂದ ಇರಲು ಕಲಿಸುತ್ತದೆ. ಅಧ್ಯಾತ್ಮಿಕತೆಯ ಗುಣವುಳ್ಳ ಸಂತ ಅಂತೋನಿಯವರು ಯಾವುದೇ ಜಾತಿ-ಧರ್ಮದ ನೆರಳಲ್ಲಿ ಬದುಕಿಲ್ಲ. ಸಂತ ಅಂತೋನಿಯವರಿಗೆ ಎಲ್ಲರೂ ಒಂದೇ. ಯಾರು ಅವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೋ ಅವರಿಗೆ ಫಲ ಖಂಡಿತಾ ಸಿಗುತ್ತದೆ ಎಂದರು. ಸಂತ ಅಂತೋನಿಯವರು ನಮ್ಮ ಜೀವನದಲ್ಲಿ ಹಸಿವು, ದಣಿವು ಲೆಕ್ಕಿಸದೆ ಕಷ್ಟದಲ್ಲಿದ್ದವರಿಗೆ ನೆರವಾದವರು. ದೇವರು ಮನುಷ್ಯರಲ್ಲಿ ವಾಸ ಮಾಡುತ್ತಾರೆ ಎಂದು ಯೇಸುಕ್ರಿಸ್ತರು ನಮಗೆ ಕಲಿಸಿಕೊಟ್ಟಿದ್ದಾರೆ. ಮನುಷ್ಯನ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ದೇವರ ಮೆಚ್ಚುಗೆಗೆ ಪಾತ್ರರಾಗೋಣ ಎಂದ ಅವರು ಹೇಳಿದರು.


ಪುತ್ತೂರು ವಲಯದ ಚರ್ಚುಗಳ ಪ್ರಧಾನ ಧರ್ಮಗುರುಗಳಾಗಿರುವ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ನಿಡ್ಪಳ್ಳಿ ಚರ್ಚ್‌ನ ವಂ|ಜೇಸನ್ ಲೋಬೋ, ಸುಳ್ಯ ಚರ್ಚ್‌ನ ವಂ|ವಿಕ್ಟರ್ ಡಿ’ಸೋಜ, ಮನೆಲ ಚರ್ಚ್‌ನ ವಂ|ಪ್ರಕಾಶ್ ಡಿ’ಸೋಜ, ನಿತ್ಯಾಧರ್ ನಗರ್ ಚರ್ಚ್‌ನ ವಂ|ಆಂಟನಿ ಲಸ್ರಾದೋ, ಕಡಬ ಚರ್ಚ್‌ನ ವಂ|ಅರುಣ್ ಲೋಬೋರವರು ಭಕ್ತಾಧಿಗಳೊಂದಿಗೆ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.


ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್‌ರವರು ಆಗಮಿಸಿದ ಧರ್ಮಗುರುಗಳಿಗೆ, ಧರ್ಮಭಗಿನಿಯರಿಗೆ ಹಾಗೂ ಭಕ್ತಾಧಿಗಳಿಗೆ ಮತ್ತು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಸಿರಿಲ್ ವಾಸ್, ವಿವಿಧ ವಾಳೆಯ ಗುರಿಕಾರರು, ಚರ್ಚ್‌ನ ಸ್ಯಾಕ್ರಿಸ್ಟಿಯನ್ ಜೋನ್ ಡಿ’ಮೆಲ್ಲೊ, ಸ್ಟಾಲಿನ್ ಗೊನ್ಸಾಲ್ವಿಸ್, ವೇದಿ ಸೇವಕರು, ಸಂತ ವಿನ್ಸೆಂಟ್ ದೇ ಪಾವ್ಲ್ ಸಭಾ ಹಾಗೂ ಐ.ಸಿ.ವೈ.ಎಂ.ನ ಪದಾಧಿಕಾರಿಗಳು ಹಾಗೂ ಸದಸ್ಯರು, ಚರ್ಚ್ ಪಾಲನಾ ಸಮಿತಿಯ ಸದಸ್ಯರು, ಗಾಯನ ಮಂಡಳಿಯ ಸದಸ್ಯರು ವಿವಿಧ ರೀತಿಯಲ್ಲಿ ಸಹಕರಿಸಿದರು. ಸಾವಿರಾರು ಭಕ್ತಾಧಿಗಳು ಆಗಮಿಸಿ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.

ಬಳಿಕ ಚರ್ಚ್‌ನಲ್ಲಿ ಭಕ್ತಾಧಿಗಳು ಪವಿತ್ರ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಹಾಗೂ ಅವರ ಪತ್ನಿ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಶ್ರೀಮತಿ ಮೋಲಿ ಫೆರ್ನಾಂಡೀಸ್‌ರವರ ಸೇವಾ ರೂಪವಾಗಿ ಪ್ರಸಾದ ಭೋಜನ ನೆರವೇರಿತು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ..
ಚರ್ಚ್ ವ್ಯಾಪ್ತಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್ ಗಳಿಸಿದ ಅನುಷಾ ಜೇನ್ ಪಾಸ್(೬೨೪ ಅಂಕ), ಡಿಸ್ಟಿಂಕ್ಷನ್ ಗಳಿಸಿದ ಹೇಝೆಲ್ ಪಾಸ್, ಆಲ್ವಿಟ ಗ್ಲ್ಯಾನಿ ಸಿಕ್ವೇರಾ, ಪಾಯಲ್ ಡಿ’ಕೋಸ್ಟ, ಲೆನಿಶ ಕ್ಯಾರನ್ ಡಿ’ಸೋಜ, ಮಂಗಳೂರು ವಿಶ್ವವಿದ್ಯಾಲಯದ ಬ್ಯಾಚಲರ್ ಇನ್ ಹೊಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ದ್ವಿತೀಯ ರ್‍ಯಾಂಕ್ ಗಳಿಸಿದ ಫ್ರೀಮಾ ಫೆರ್ನಾಂಡೀಸ್, ಎಂಸಿಎ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಬೆಂಝಿಲ್ ಜೋಸ್ಟನ್ ಪಾಸ್, ಎಂಟೆಕ್‌ನಲ್ಲಿ ಫೆಮಿನ್ ಲೋಬೋ, ಬಿಎಯಲ್ಲಿ ಮೆಲಿಶಾ ಡಿ’ಸೋಜರವರಿಗೆ ಪುತ್ತೂರು ವಲಯದ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಹೂ ನೀಡಿ ಗೌರವಿಸಿದರು.

ಮೊಂಬತ್ತಿ ವಿತರಣೆ..
ದಿವ್ಯಬಲಿಪೂಜೆ ಮುನ್ನ ಹಬ್ಬದ ಪ್ರಯುಕ್ತ ಹಣದ, ವಸ್ತುಗಳ ರೂಪದಲ್ಲಿ ನೀಡಿದ ದಾನಿಗಳಿಗೆ ಶುದ್ಧೀಕರಿಸಿದ ಮೊಂಬತ್ತಿಯನ್ನು ಸ್ಮರಣಿಕೆಯನ್ನಾಗಿ ವಿತರಿಸಲಾಯಿತು. ಫ್ರಾನ್ಸಿಸ್ಕನ್ ಸಭೆಯ ಪ್ರಾಂತ್ಯಾಧಿಕಾರಿ ವಂ|ಪ್ರವೀಣ್ ಹೆನ್ರಿ ಡಿ’ಸೋಜರವರು ಪವಿತ್ರ ಮೊಂಬತ್ತಿಯನ್ನು ವಿತರಿಸಿ, ಆಶೀರ್ವಾದ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.