ವಿಶ್ವ ಪರಿಸರ ದಿನಾಚರಣೆ ಸ್ಪರ್ಧೆಯ ವಿಜೇತ ಮಕ್ಕಳಿಗೆ ಕಾಮಧೇನು ಚಾರಿಟೇಬಲ್ ಟ್ರಸ್ಟ್‌ನಿಂದ ಸಸಿ ವಿತರಣೆ

0

ಪುತ್ತೂರು : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಜಲ್ಪಡ್ಪು ಬಿಇಎಂ ಹಿ.ಪ್ರಾ. ಶಾಲೆಯ 1 ರಿಂದ 7 ನೇ ತರಗತಿ ವರೆಗಿನ ಮಕ್ಕಳಿಗೆ ಏರ್ಪಾಡಿಸಲಾಗಿದ್ದ ಚಿತ್ರಕಲೆ, ಭಾಷಣ ಸ್ಪರ್ದೆಯ ವಿಜೇತ ಪ್ರಥಮ, ದ್ವೀತಿಯ ಸ್ಥಾನ ಪಡೆದ ಮಕ್ಕಳಿಗೆ ಸುಳ್ಯದ ಕಾಮಧೇನು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಸಿಗಳನ್ನು ವಿತರಿಸೋ ಮೂಲಕ ಪರಿಸರ ಪ್ರೇಮ ಮೂಡಿಸುವಂಥ ಕಾರ್ಯಕ್ರಮವನ್ನು ಜೂ.13 ರಂದು ಶಾಲೆಯ ಸಭಾಭವನದಲ್ಲಿ ನಡೆಯಿತು. ಟ್ರಸ್ಟ್‌ನ ಅಧ್ಯಕ್ಷೆ ದಿವ್ಯಾಪ್ರಭಾ ಚಿಲ್ತಡ್ಕ ಮಾತನಾಡಿ ಬಿಇಎಂ ಶಾಲೆಯೂ ತುಂಬಾ ಪ್ರಸಿದ್ಧಿ, ಇತಿಹಾಸ ಇರುವಂತಹ ಶಾಲೆಯೆಂಬ ಪ್ರತೀತಿಯಿದೆ. ಸರಕಾರಿ ಶಾಲೆಗಿಂತಲೂ ಈ ಅನುದಾನಿತ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಯೂ ಆತ್ಯಾಧಿಕವಾಗಿರುವುದೂ ಸಂತಸದ ವಿಚಾರ. ಈ ಭವ್ಯ, ಬಲಿಷ್ಠ ಸಮಾಜಕ್ಕೆ ಮಕ್ಕಳನ್ನೂ ಕೇವಲ ಒಂದು ಯಂತ್ರವನ್ನಾಗಿ ಮಾಡಿ ನೀಡುವ ಕೆಲಸನ್ನೂ ಮಾಡದೇ, ಅವರಿಗೆ ಶಿಕ್ಷಣದ ಜೊತೆಗೆ ವಿನಯ, ಮೌಲ್ಯ, ಪ್ರೀತಿ, ಗೌರವಿಸೋ ಗುಣವನ್ನು ಬೋಧಿಸಿದರೆ, ಉತ್ತಮ ಪ್ರಜೆಗಳಾಗಿ ಬರುತ್ತಾರೆ. ಮುಂದಿನ ವನಮಹೋತ್ಸವ ದಿನದಂದೂ ಈ ಶಾಲೆಯಾ ಪ್ರತಿ ಮಗುವಿಗೂ ಸಸಿಗಳನ್ನು ನೀಡೋ ಕೆಲಸವನ್ನೂ ಮಾಡುತ್ತೇವೆ. ಅವಕಾಶ ನೀಡಿದ ಶಾಲಾ ಅಭಿವೃದ್ಧಿ ಮಂಡಳಿ, ಬೋಧಕ ವೃಂದ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಧನ್ಯವಾದಗಳು ಎಂದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಪ್ರಶಾಂತ್ ಮುರ ಮಾತನಾಡಿ ಸುತ್ತಲಿನ ಪರಿಸರವನ್ನು ಯಾಕೆ ಹೇಗೆ, ರಕ್ಷಿಸಬೇಕೂ? ಇದರಿಂದ ಸಿಗುವ ಲಾಭ, ಪ್ರಯೋಜನವೇನು ಎಂಬುದನ್ನು ತಿಳಿಸಿದರು. ಕಾಮಧೇನು ಚಾರಿಟೇಬಲ್ ಟ್ರಸ್ಟ್‌ನ ಸದಸ್ಯ ಅಮರ್‌ನಾಥ ಗೌಡ ಹಾಗೂ ಮುಖ್ಯ ಶಿಕ್ಷಕರಾದ ಶಿವಾನಂದ ಪಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಚಾರಿತ್ರ್ಯ, ಪ್ರಜ್ವಿತಾ ಹಾಗೂ ನಾಗಮ್ಮ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಶಿವಾನಂದ ಪಟ್ಟಿ ಸ್ವಾಗತಿಸಿ, ಶಾಲಾ ಅಭಿವೃದ್ಧಿಯಲ್ಲಿ ಸಹಕಾರ ನೀಡುವಂತೆ ಮನವಿಯೊಂದನ್ನು ಚಾರಿಟೇಬಲ್ ಇದರ ಅಧ್ಯಕ್ಷರಿಗೆ ನೀಡಿದರು. ಶಿಕ್ಷಕಿ ಕುಶಾಲವತಿ ವಂದಿಸಿದರು. ಶಾಲಾ ಶಿಕ್ಷಕ ವೃಂದದವರು ಹಾಗೂ
ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here