ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಐಸಿಎಆರ್ ಡಿಸಿಆರ್ ರೀಸರ್ಚ್ ಅಡ್ವೆಸರಿ ಕಮಿಟಿ ಭೇಟಿ

0

 

ಪುತ್ತೂರು: ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ 9ನೇ `ರೀಸರ್ಚ್ ಅಡ್ವೈಸರಿ ಕಮಿಟಿ’ ಜೂ. 8ರಂದು ಭೇಟಿ ನೀಡಿ ಕಡಮಜಲು ಸುಭಾಸ್ ರೈಯವರ ಸಮಗ್ರ ಕೃಷಿ ದರ್ಶನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

 

ಐಸಿಎಆರ್ ಸಿಪಿಸಿಆರ್‌ಐ ಕಾಸರಗೋಡಿನ ಮಾಜಿ ನಿರ್ದೇಶಕ ಡಾ. ಜಾರ್ಜ್ ವಿ. ಥೋಮಸ್ ರವರು `ಸಿರಿಕಡಮಜಲಿನ ಸಮಗ್ರ ಕೃಷಿಯನ್ನು ನೋಡಿ ನಾನು ಅತ್ಯಂತ ಖುಷಿಪಟ್ಟಿದ್ದೇನೆ. ಇವರ ಪ್ರಗತಿಪರ ಕೃಷಿ ಮತ್ತು ತಂತ್ರಜ್ಞಾನಾಧಾರಿತ ಸಮಗ್ರ ಕೃಷಿ ಮಾದರಿಯಾಗಿದೆ’ ಎಂದರು. ಒಡಿಶಾ ರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಆನಂದ ಪ್ರಕಾಶ್ ರವರು `ಸಮಗ್ರ ಕೃಷಿಯಲ್ಲಿ ಕಡಮಜಲು ಸುಭಾಸ್ ರೈಯವರ ಕೃಷಿ ಅತ್ಯಂತ ಉದಾಹರಿಸಬಹುದಾದ ಕೃಷಿಯಾಗಿದೆ’ ಎಂದರು. ಒಡಿಶಾ ದ ಭುವನೇಶ್ವರ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ತೋಟಗಾರಿಕಾ ವಿಭಾಗದ ನಿವೃತ್ತ ಅಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥರಾದ ಡಾ. ಪ್ರಭಚರಣ್ ಲೆಂಕಾ ರವರು `ಕೃಷಿ ಉತ್ಪನ್ನಗಳನ್ನು ಬೆಳೆಯುವಲ್ಲಿ ಕಡಮಜಲುರವರ ಪ್ರಾಯೋಗಿಕ ಜ್ಞಾನ ಇಲ್ಲಿ ಸಾಕಷ್ಟು ಅನುಷ್ಠಾನಗೊಂಡಿದೆ. ಉತ್ತಮ ಸಮಗ್ರ ಕೃಷಿಯಾಗಿದೆ’ ಎಂದರು. ತ್ರಿಶೂರ್‌ನ ಕೇರಳ ಕೃಷಿ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಆರ್.ಎಂ. ಪ್ರಸಾದ್ ರವರು `ಕಡಮಜಲು ರವರ ಸಮಗ್ರ ಕೃಷಿ ನೋಡಿ ಸಂತಸವಾಗಿದೆ. ಸಮಗ್ರ ಕೃಷಿಕನಾಗಿ ಡಿಸಿಆರ್‌ನ ಐಎಂಸಿ ಮೆಂಬರ್ ಆಗಿರುವುದು ಮತ್ತಷ್ಟು ಶ್ಲಾಘನೀಯ’ ಎಂದರು. ಪುತ್ತೂರು ಡಿಸಿಆರ್ ನ ಪ್ರಭಾರ ನಿರ್ದೇಶಕ ಟಿ.ಎನ್. ರವಿಪ್ರಸಾದ್, ಪುತ್ತೂರು ಡಿಸಿಆರ್‌ನ ಹಿರಿಯ ವಿಜ್ಞಾನಿ ಡಾ. ಈರದಾಸಪ್ಪ ಇದೇ ವೇಳೆ ಉಪಸ್ಥಿತರಿದ್ದರು. ಕಡಮಜಲು‌ ಸುಭಾಸ್ ರೈ ಸ್ವಾಗತಿಸಿದರು. ಪ್ರೀತಿ ಎಸ್. ರೈ ಸತ್ಕರಿಸಿದರು.

LEAVE A REPLY

Please enter your comment!
Please enter your name here