ಕುಂತೂರುಪದವು: ಕಡಬ ತಾ| ಕಸಾಪ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ದತ್ತಿನಿಧಿ ಉಪನ್ಯಾಸ

0

  • ಶೈಕ್ಷಣಿಕ ಸಾಧಕರಿಗೆ ಸಮಾಜದಲ್ಲಿ ವಿಪುಲ ಅವಕಾಶಗಳಿವೆ: ಕೆ.ಸೇಸಪ್ಪ ರೈ


    ಕಡಬ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕ ಹಾಗೂ ಸೈಂಟ್ ಜಾರ್ಜ್ ಹೈಸ್ಕೂಲ್ ಕುಂತೂರು ಪದವು ಇದರ ಸಹಯೋಗದಲ್ಲಿ ಪುತ್ತೂರು ತಾಲೂಕು 17ನೇಯ ಸಾಹಿತ್ಯ ಸಮ್ಮೇಳನದ ದತ್ತಿನಿಧಿ ಉಪನ್ಯಾಸ ಹಾಗೂ 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಸಾರ್ವತ್ರಿಕ ಪರೀಕ್ಷೆಯ ಪ್ರಥಮ ಭಾಷೆ ಕನ್ನಡದಲ್ಲಿ 125ರಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜೂ.11ರಂದು ಕುಂತೂರು ಪದವು ಸೈಂಟ್ ಜಾರ್ಜ್ ಪ್ರೌಢಶಾಲೆಯಲ್ಲಿ ನಡೆಯಿತು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ರಾಮಕುಂಜ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆಯಲ್ಲಿ ಉನ್ನತ ಅಂಕಗಳನ್ನು ಪಡೆಯುವುದು ಅತ್ಯಗತ್ಯ. ಶೈಕ್ಷಣಿಕ ಸಾಧಕರಿಗೆ ಸಮಾಜದಲ್ಲಿ ವಿಪುಲ ಅವಕಾಶಗಳಿವೆ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಶಿಕ್ಷಣ ಅಗತ್ಯ. ಪಠ್ಯೇತರ ಚಟುವಟಿಕೆಗಳೊಂದಿಗೆ ಪರೀಕ್ಷೆಗಳಲ್ಲಿ ಉನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಯಾವುದೇ ಮೀಸಲಾತಿಯ ಹಂಗಿಲ್ಲದೆ ಉನ್ನತ ಅವಕಾಶಗಳನ್ನು ಪಡೆದುಕೊಳ್ಳಬಹುದು ಎಂದರು. ದತ್ತಿ ನಿಧಿ ಉಪನ್ಯಾಸ ನೀಡಿದ ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಪಿ.ಎಸ್.ನಾರಾಯಣ ಅವರು ಶಿಕ್ಷಣ ಎನ್ನುವುದು ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗಬಾರದು. ಸುದೃಢ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದ ಎಲ್ಲಾ ಬಗೆಯ ಕಲಿಕೆಯೂ ಶಿಕ್ಷಣದಲ್ಲಿರಬೇಕು. ಜೀವನದಲ್ಲಿ ಸನ್ಮಾರ್ಗದಲ್ಲಿ ದುಡಿಯುವ ಯಾವ ಕೆಲಸವೂ ಕೀಳಲ್ಲ. ನಾವು ಮಾಡುವ ಕೆಲಸವನ್ನು ಪ್ರೀತಿ ಮತ್ತು ಶ್ರದ್ಧೆಯಿಂದ ಮಾಡಿದಾಗ ಯಶಸ್ಸನ್ನು ಪಡೆಯಬಹುದು ಎಂದರು.

    ಕುಂತೂರುಪದವು ಸೈಂಟ್ ಜಾರ್ಜ್ ಪ್ರೌಢಶಾಲೆಯ ಸಂಚಾಲಕ ರೋಯಿ ಅಬ್ರಹಾಂರವರು ಸಂದರ್ಭೋಚಿತವಾಗಿ ಮಾತನಾಡಿದರು. ಕಸಾಪ ಕಡಬ ತಾಲೂಕು ಘಟಕದ ನಿಕಟಪೂರ್ವಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಹಾಗೂ ಸೈಂಟ್ ಜಾರ್ಜ್ ಪ್ರೌಢಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ವಿ.ವಿ.ವರ್ಗೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕ ಹರಿಶ್ಚಂದ್ರ ಕೆ. ಸ್ವಾಗತಿಸಿ, ಕಸಾಪ ಕಡಬ ತಾಲೂಕು ಘಟಕದ ಕಾರ್ಯದರ್ಶಿ ವಸಂತಕುಮಾರ್ ನಿರೂಪಿಸಿದರು. ಬಾಲಚಂದ್ರ ಎಂ. ವಂದಿಸಿದರು.


    61 ವಿದ್ಯಾರ್ಥಿಗಳಿಗೆ ಸನ್ಮಾನ:
    ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 125ರಲ್ಲಿ 125 ಅಂಕಗಳಿಸಿದ 51 ವಿದ್ಯಾರ್ಥಿಗಳು ಹಾಗೂ ಒಟ್ಟು 620ಕ್ಕಿಂತ ಹೆಚ್ಚು ಅಂಕ ಗಳಿಸಿ ಸಾಧನೆಗೈದ 10 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕನ್ನಡದಲ್ಲಿ ಪೂರ್ಣ ಅಂಕ ಪಡೆದಿರುವ ಆತೂರು ಬದ್ರಿಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ತೃಷಾ, ಮಹಮ್ಮದ್ ಶಿಹಾನ್, ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢಶಾಲೆಯ ಹಮಿದಾ ವಫ, ಖದೀಜಾ ನಿಹಾಲ, ಹಮ್ನ ಝೈನಬ, ಸೈಪುನ್ನಿಸ, ಕಡಬ ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯ ಗೌತಮಿ, ತೃಪ್ತಿ, ಸಿಂಚನಾ, ಕುಂತೂರು ಪದವು ಸೈಂಟ್ ಜಾರ್ಜ್ ಹೈಸ್ಕೂಲ್‌ನ ಯದುಶ್ರೀ, ಸುಜಿತ್, ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ತೃಪ್ತಾ, ಶ್ರಾವಣಿ, ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ಪ್ರೀತಾ, ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ ಸೌಮ್ಯ, ಆಶಾ, ಎಡಮಂಗಲ ಸರಕಾರಿ ಪ್ರೌಢಶಾಲೆಯ ಪೂಜಿತಾ, ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ತೃಪ್ತಿ, ವರ್ಷ, ಸಮೀದಾ, ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಅಂಜಲಿ, ಅಂಜಲಿ ಭಟ್, ಜಿತೇಶ್, ಜ್ಞಾನೇಶ್, ಧೀಮಂತ ಹೆಬ್ಬಾರ್, ಸೃಜನ್, ಭೂಮಿಕಾ, ಸುಬ್ರಹ್ಮಣ್ಯ, ಸುಕೃತಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಭವಹರಿ, ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಹೇಮಂತ್, ಮಾನ್ಯ, ಪ್ರಾರ್ಥನಾ, ಶ್ರಾವ್ಯ, ವರುಣ್, ಕಡಬ ಸರಸ್ವತಿ ವಿದ್ಯಾಲಯದ ಚೈತನ್ಯ, ನವ್ಯ, ಕಡಬ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸ್ಪೂರ್ತಿ, ಕಾಣಿಯೂರು ಪ್ರಗತಿ ಆಂಗ್ಲಮಾಧ್ಯಮ ಶಾಲೆಯ ಅಪರ್ಣ, ಭೂಮಿಕಾ, ದೀಪ್ತಿ, ಚೈತನ್ಯ, ಜನನಿ, ನಿಧಿ ರೈ, ರಕ್ಷಾ, ಸೌಭಾಗ್ಯ, ಕಾಣಿಯೂರು ಪ್ರಗತಿ ಕನ್ನಡ ಮಾಧ್ಯಮ ಶಾಲೆಯ ಹಂಸಿನಿ, ಸುಶಾಂತ್, ವನ್ಯಶ್ರೀ, ಅರ್ಜುನ್, ಕೃತಿಯವರಿಗೆ ಗೌರವಾರ್ಪಣೆ ಮಾಡಲಾಯಿತು. ೬೨೦ ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಜೀವನ್, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಧೀಮಂತ್ ಹೆಬ್ಬಾರ್, ಭೂಮಿಕಾ, ಜ್ಞಾನೇಶ್, ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅನನ್ಯ, ಮಾನ್ಯ, ಪ್ರಾರ್ಥನ, ಶ್ರಾವ್ಯ, ಕಾಣಿಯೂರು ಪ್ರಗತಿ ಆಂಗ್ಲಮಾಧ್ಯಮ ಶಾಲೆಯ ರಕ್ಷಾ, ಸೌಭಾಗ್ಯರವರಿಗೆ ಗೌರವಾರ್ಪಣೆ ಮಾಡಲಾಯಿತು.

LEAVE A REPLY

Please enter your comment!
Please enter your name here