ಗ್ರಾಪಂ ಅಂಗಡಿಕೋಣೆಯಲ್ಲಿ ವ್ಯಾಪಾರಕ್ಕೆ ಸಿದ್ದತೆ ವಲಯ ಕಾಂಗ್ರೆಸ್‌ನಿಂದ ಪಿಡಿಒಗೆ ದೂರು

ಪುತ್ತೂರು; ಒಳಮೊಗ್ರು ಗ್ರಾಪಂ ಅಧೀನದಲ್ಲಿ ಕುಂಬ್ರ ಪೇಟೆಯಲ್ಲಿರುವ ಅಂಗಡಿ ಕೋಣೆಯನ್ನು ಏಲಂ ನಡೆಸಿಲ್ಲ ಆದರೂ ಆ ಕೋಣೆಯಲ್ಲಿ ವ್ಯಾಪಾರಕ್ಕೆ ಸಿದ್ದತೆಗಳು ನಡೆದಿದೆ ಎಂದು ಆರೋಪಿಸಿ ಒಳಮೊಗ್ರು ವಲಯ ಕಾಂಗ್ರೆಸ್ ವತಿಯಿಂದ ಗ್ರಾಪಂ ಅಭಿವೃದ್ದಿ ಅಧಿಕಾರಿಗೆ ದೂರು ಸಲ್ಲಿಸಲಾಯಿತು.


ಈ ಕುರಿತು ಹೇಳಿಕೆ ನೀಡಿದ ವಲಯ ಅಧ್ಯಕ್ಷ ಅಶೋಕ್‌ಪೂಜಾರಿ ಬೊಳ್ಳಾಡಿ ಕುಂಬ್ರ ಪೇಟೆಯಲ್ಲಿರುವ ಅಂಗಡಿ ಕೋಣೆ ಸಂಖ್ಯೆ 1-631 ನ್ನು ಯಾವುದೇ ಏಲಂ ಮಾಡಲಾಗಿಲ್ಲ ಆ ಕೋಣೆಯಲ್ಲಿ ವ್ಯಾಪಾರಕ್ಕೆ ಸಿದ್ದತೆ ನಡೆಯುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದ್ದು ಆ ಕೋಣೆಯನ್ನು ಏಲಂ ಮಾಡದೆ ಯವುದೇ ವ್ಯಾಪಾರಕ್ಕೆ ಅನುಮತಿ ನೀಡಬಾರದೆಂದು ಪಿಡಿಒಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ವಲಯ ಕಾಂಗ್ರೆಸ್ ಕಾರ್ಯದರ್ಶಿ ಸಲಾಮುದ್ದೀನ್ ಕುಂಬ್ರ, ಉಪಾಧ್ಯಕ್ಷ ಮಹಮ್ಮದ್ ಬೊಳ್ಳಾಡಿ, ಹಂಝ ಉಜಿರೋಡಿ ಉಪಸ್ತಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.