ಬೆಟ್ಟಂಪಾಡಿ ಶ್ರೀ ವರಮಹಾಲಕ್ಷ್ಮಿ  ವ್ರತ ಪೂಜಾ ಸಮಿತಿ ರಚನೆ:  ಅಧ್ಯಕ್ಷರಾಗಿ ಪ್ರೇಮಲತಾ ಜೆ.ರೈ ಆನಡ್ಕ, ಕಾರ್ಯದರ್ಶಿಯಾಗಿ ಸ್ನೇಹಲತಾ ರೈ ಬಾಜುವಳ್ಳಿ

0

ನಿಡ್ಪಳ್ಳಿ: ಬೆಟ್ಟಂಪಾಡಿ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿಯ ಅಧ್ಯಕ್ಷರಾಗಿ ಪ್ರೇಮಲತಾ ಜೆ.ರೈ ಆನಡ್ಕ ಮತ್ತು ಕಾರ್ಯದರ್ಶಿಯಾಗಿ ಸ್ನೇಹಲತಾ ರೈ ಆಯ್ಕೆಯಾದರು. ಜೂ.13 ರಂದು ಬೆಟ್ಟಂಪಾಡಿ ಹಾಲುತ್ಪಾದಕರ ಸಹಕಾರ ಸಂಘದಲ್ಲಿ ನಡೆದ ಪೂಜಾ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಪುರೋಹಿತ ವೇದಮೂರ್ತಿ ರಾಧಾಕೃಷ್ಣ ಭಟ್ ಕಕ್ಕೂರು, ಕೋಶಾಧಿಕಾರಿಯಾಗಿ ಸವಿತಾ ಚಂದ್ರನ್ ತಲೆಪ್ಪಾಡಿ,  ಉಪಾಧ್ಯಕ್ಷರಾಗಿ ಸುಲೋಚನಾ ಜೆ. ರೈ, ಪಾರ್ವತಿ ಲಿಂಗಪ್ಪ ಗೌಡ,ಅನಿತಾ ಕೂವೆಂಜ ಜತೆಕಾರ್ಯದರ್ಶಿಯಾಗಿ ಅನನ್ಯ ಶೆಟ್ಟಿ, ಸುಪ್ರೀತ ರೈ, ಜತೆ ಕೋಶಾಧಿಕಾರಿಯಾಗಿ ಶಂಕರ ಗುಂಡ್ಯಡ್ಕ ಇವರನ್ನು ಆರಿಸಲಾಯಿತು.ಈ ಸಲದ ಪೂಜೆಯನ್ನು ಅ.8 ರಂದು ಶ್ರೀ ವರಮಹಾಲಕ್ಷ್ಮಿ ಪೂಜೆಯನ್ನು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು. ಸಭೆಯಲ್ಲಿ ಸೇವಾ ಪ್ರತಿನಿಧಿಗಳಾದ ಪದ್ಮಾವತಿ. ಡಿ, ಶಾಲಿನಿ.ಕೆ, ಸುಮ.ಬಿ, ಲೀಲಾವತಿ.ಡಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here