ನೃತ್ಯಾಂತರಂಗ – 90 ನೇ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ

0

ಪುತ್ತೂರು: ದರ್ಬೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 90ನೇ ಸರಣಿಯಲ್ಲಿ ಸಂಸ್ಥೆಯ ಭೈರವಿ ತಂಡದ ವಿದ್ಯಾರ್ಥಿನಿಯರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.


ವಿದ್ಯಾರ್ಥಿನಿಯರಾದ ನಿಶಿ, ಆಪ್ತ, ಚಂದ್ರಮತಿ ಮುಳಿಯ, ಪ್ರೀತಿ ಪ್ರಭು, ಲಾಸ್ಯ ಎನ್.ವಿ., ಸಿಯಾ, ಗ್ರೀಷ್ಮಾ ಮತ್ತು ರಿಶಿಕಾ ಇವರಿಂದ ಭರತನಾಟ್ಯ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ಶೆಟ್ಟಿಯವರು ಅಭ್ಯಾಗತರಾಗಿ ಶುಭಹಾರೈಸಿದರು. ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ಶ್ಯಾಂ ಭಟ್ ಸುಳ್ಯ ಹಾಗೂ ಪಿಟೀಲಿನಲ್ಲಿ ಕು. ತನ್ಮಯಿ ಉಪ್ಪಂಗಳ ಸಹಕರಿಸಿದ್ದರು.

LEAVE A REPLY

Please enter your comment!
Please enter your name here