ಅರಿಯಡ್ಕ: ಕೋಳಿ ಫಾರ್ಮ್‌ನಲ್ಲಿ ಕೆಲಸಕ್ಕಿದ್ದ ಮಹಿಳೆಯ ಮಾನಭಂಗ ಮಾಡಿ ಬೆದರಿಕೆಯೊಡ್ಡಿದ ರೈಟರ್ -ಪ್ರಕರಣ ದಾಖಲು

0

ಪುತ್ತೂರು: ಅರಿಯಡ್ಕ ಗ್ರಾಮದ ಮಡ್ಯಂಗಳದಲ್ಲಿರುವ ಕೋಳಿ ಫಾರ್ಮ್‌ನಲ್ಲಿ ಕೆಲಸಕ್ಕಿರುವ ಮಹಿಳೆಯೊಬ್ಬರಿಗೆ ಅದೇ ಅಂಗಡಿಯಲ್ಲಿನ ರೈಟರ್‌ರೊಬ್ಬರು ಬಲತ್ಕಾರವಾಗಿ ಮಾನಭಂಗ ಮಾಡಿ ಬೆದರಿಯೊಡ್ಡಿದ ಘಟನೆ ಕುರಿತು ನೊಂದ ಮಹಿಳೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಡ್ಯಂಗಳದಲ್ಲಿರುವ ಕೋಳಿ ಫಾರ್ಮ್‌ನಲ್ಲಿ ರೈಟರ್ ಆಗಿರುವ ಉಮ್ಮರ್ ಎಂಬವರು ಅದೇ ಅಂಗಡಿಯಲ್ಲಿ ಕೆಲಸಕ್ಕಿದ್ದು ಗಂಡ ಮತ್ತು ಮಗುವಿನೊಂದಿಗೆ ವಾಸ್ತವ್ಯ ಇರುವ ಮಹಿಳೆಯೊಬ್ಬರನ್ನು ಮಾನಭಂಗ ಮಾಡಿದ್ದಲ್ಲದೆ ಮಹಿಳೆಯ ಆಶ್ಲೀಲ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಆಕೆಯ ಗಂಡನಿಗೆ ಕಳುಹಿಸಿ ಕೊಲೆ ಬೆದರಿಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ವಿವರ: ಮೇ 5ರಂದು ನೊಂದ ಮಹಿಳೆ ಕೋಳಿ ಫಾರ್ಮಿನಲ್ಲಿರುವ ಬಾತ್‌ರೂಮ್‌ನಲ್ಲಿದ್ದ ವೇಳೆ ಉಮ್ಮರ್ ಎಂಬವರು ಏಕಾಏಕಿ ಬಂದು ಆಕೆಯ ಮೇಲೆ ಬಲತ್ಕಾರವಾಗಿ ಲೈಂಗಿಕ ಸಮಪರ್ಕಕ್ಕೆ ಯತ್ನಿಸಿದಾಗ ಆಕೆ ಬೊಬ್ಬೆ ಹೊಡೆದಾಗ ಆಕೆಯ ಬಾಯಿ ಮುಚ್ಚಿದ್ದಾರೆ. ನೊಂದ ಮಹಿಳೆ ತನ್ನ ಗಂಡನಲ್ಲಿ ಹೇಳುವುದಾಗಿ ಹೇಳಿದಾಗ ಉಮ್ಮರ್ ಅವರು ವೇಳೆ ವಿಡಿಯೋ ರೆಕಾರ್ಡ್ ಮಾಡಿ ಆಕೆಯ ಗಂಡನಿಗೆ ಕಳುಹಿಸಿದ್ದಲ್ಲದೆ ಯಾರಲ್ಲಿ ಹೇಳಿದರೆ ಆಶ್ಲೀಲ ವಿಡಿಯೋ ರೇಕಾರ್ಡ್ ಅನ್ನು ಬೇರೆಯವರಿಗೆ ಕಳುಹಿಸುವುದಾಗಿ ಮತ್ತು ಮುಂದೆಯೂ ದೈಹಿಕ ಸಂಪರ್ಕಕ್ಕೆ ಸಹಮತ ನೀಡದಿದ್ದರೆ ಮಹಿಳೆಯ ಗಂಡನನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಭಯಪಟ್ಟ ಮಹಿಳೆ ತಡವಾಗಿ ಜೂ. 14ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ನೊಂದ ಮಹಿಳೆಯ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here