ಬಿಸಿಯೂಟ ಸಿಬ್ಬಂದಿಯ ಆಕಸ್ಮಿಕ ಮರಣಕ್ಕೆ ಪರಿಹಾರ ನೀಡಿ, ಸಿಬ್ಬಂದಿಗಳ ಆತಂಕಕ್ಕೆ ಸ್ಪಂದಿಸುವಂತೆ ಬಿ.ಎಂ.ಭಟ್ ಮನವಿ

0

ಪುತ್ತೂರು: ತಾಲೂಕು ಅಕ್ಷರದಾಸೊಹ ಯೋಜನೆಯ ಸೈಂಟ್ ವಿಕ್ಟರ್ ಶಾಲೆಯ ಬಿಸಿಯೂಟ ಸಿಬ್ಬಂದಿಯಾದ ಕುರಿಯ ಗ್ರಾಮದ ಶ್ರೀಮತಿ ಪ್ರಮೀಳಾ ಡಿ’ಸೋಜ(37) ಅವರು ಬಿಸಿ ಸಾಂಬರಿಗೆ ಬಿದ್ದು ಮೃತಪಟ್ಟಿರುವುದರಿಂದ ಅವರ ಕುಟುಂಬಕ್ಕೆ ಉಂಟಾದ ನಷ್ಟಕ್ಕೆ ಕನಿಷ್ಟ ರೂ. 25ಲಕ್ಷ ಪರಿಹಾರ ನೀಡಬೇಕೆಂದು ಪುತ್ತೂರು ತಾಲೂಕು ಅಕ್ಷರದಾಸೋಹ ನೌಕರರ ಸಂಘ ಸರಕಾರವನ್ನು ಒತ್ತಾಯಿಸುತ್ತದೆ ಎಂದು ಸಂಘದ ಕಾನೂನು ಸಲಹೆಗಾರರೂ ಹಿರಿಯಕಾರ್ಮಿಕ ಮುಖಂಡ ಬಿ.ಎಂ.ಭಟ್ ಮತ್ತು ಸಂಘದ ಅದ್ಯಕ್ಷೆ ಸುಧಾ ಎಕ್ಕಡ್ಕ, ಅವರುಗಳು ತಿಳಿಸಿದ್ದಾರೆ.

ಶಾಲೆಯಲ್ಲಿ ಬಿಸಿ ಬಿಸಿ ಸಾಂಬಾರು ತಯಾರಿಸಿ ಇಟ್ಟಿದ್ದ ಪಾತ್ರೆಗೆ ಕಾಲು ಜಾರಿ ಬಿದ್ದು ಜೀವ ಕಳಕೊಂಡ ಪ್ರಮೀಳಾ ಡಿ’ಸೋಜ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ ಅವರುಗಳು ಆಕೆಯನ್ನೇ ನಂಬಿದ್ದ ಮನೆಯವರಿಗೆ ಪರಿಹಾರ ಒದಗಿಸುವುದು ಸರಕಾರದ ಕರ್ತವ್ಯವಾಗಿದೆ ಎಂದ ಅವರು ಹೇಳಿದರು. ಬಿಸಿಯೂಟ ಸಿಬ್ಬಂದಿಗಳಿಗೆ ಸೂಕ್ತ ಕೆಲಸದ ಭದ್ರತೆ ಒದಗಿಸುವುದು ಕೂಡಾ ಸರಕಾರದ ಆದ್ಯಜವಬ್ದಾರಿಯಾಗಿದೆ ಎಂದರು. ಮೊದಲೇ ಮಾಸಿಕ ರೂ.3500 ಸಂಬಳಕ್ಕೆ ದುಡಿಯುವ ಇವರ ಬದುಕಿನ ಬಗ್ಗೆ ಕಾಳಜಿ ಇಲ್ಲದ ಸರಕಾರ ಎಂಬುದು 60 ವರ್ಷ ತನಕ ದುಡಿಸಿ ತರುವಾಯ ಯಾವ ಪರಿಹಾರವನ್ನೂ ನೀಡದೆ ಮನೆಗೆ ಕಳಿಸಿದ ದೋರಣೆಯಿಂದ ಮನದಟ್ಟಾಗಿದೆ ಎಂದರು. ಜೀವನ ಪೂರ್ತಿ ಸಂಸ್ಥೆಗಾಗಿ ದುಡಿದ, ಭಾವಿ ಜನಾಂಗದ ಮಕ್ಕಳಿಗೆ ಊಟ ತಯಾರಿಸಿ ಬಡಿಸಿ ಅವರು ಮಾಡಿದ ಸೇವೆಯನ್ನು ಸಮಾಜ ಮರೆಯಬಾರದು. ಈಗ ಮೃತ ಪಟ್ಟ ಪ್ರಮೀಳಾ ಅವರಿಗೆ ಸೂಕ್ತ ಪರಿಹಾರ ಒದಗಿಸಿ ಕುಟುಂಬವನ್ನು ರಕ್ಷಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

LEAVE A REPLY

Please enter your comment!
Please enter your name here