ನೆಹರೂನಗರ:ಬೈಕ್-ಸ್ಕೂಟರ್ ಡಿಕ್ಕಿ ಸ್ಕೂಟರ್ ಸವಾರ ರವೀಂದ್ರ ಸಾವು

0

ಪುತ್ತೂರು:ಇಲ್ಲಿನ ನೆಹರೂನಗರ ರಕ್ತೇಶ್ವರಿ ವಠಾರ ತಿರುವು ರಸ್ತೆಯಲ್ಲಿ ಸ್ಕೂಟರ್ ಮತ್ತು ಬೈಕೊಂದರ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಸಾವಿಗೀಡಾಗಿರುವ ಘಟನೆ ನಡೆದಿದೆ.

ಇಲ್ಲಿನ ಎಂ.ಟಿ.ರಸ್ತೆಯಲ್ಲಿ ಗ್ಯಾಸ್ ಸ್ಟವ್ ಮತ್ತು ಗಠೋರ್ ಸ್ಪ್ರೇಯರ್ ಪಂಪುಗಳ ರಿಪೇರಿ ಕಾಯಕದಲ್ಲಿ ಚಿರಪರಿಚಿತರಾಗಿದ್ದ, ಆರ್ಯಾಪು ಗ್ರಾಮದ ದೇವಸ್ಯ ನಿವಾಸಿ ರವೀಂದ್ರ(೬೦ವ.)ಮೃತಪಟ್ಟಿದ್ದಾರೆ.ಅವರು ರಾತ್ರಿ ಕೆಲಸ ಮುಗಿಸಿ ಅಂಗಡಿ ಬಾಗಿಲು ಬಂದ್ ಮಾಡಿ ಕಾರ್ಯನಿಮಿತ್ತ ಸ್ಕೂಟರ್‌ನಲ್ಲಿ ರಕ್ತೇಶ್ವರಿ ವಠಾರಕ್ಕೆಂದು ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಕೆಟಿಎಂ ಬೈಕ್ ಮತ್ತು ಅವರ ಸ್ಕೂಟರ್ ಮಧ್ಯೆ ಅಪಘಾತ ಸಂಭವಿಸಿದೆ.ಗಂಭೀರ ಗಾಯಗೊಂಡಿದ್ದ ರವೀಂದ್ರ ಅವರನ್ನು ಪ್ರಗತಿ ಆಸ್ಪತ್ರೆಗೆ ಕರೆ ತರಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.

ಚಿರಪರಿಚಿತ:

ಸಾಧು ಸ್ವಭಾವದವರಾಗಿದ್ದು ಗ್ಯಾಸ್ ಸ್ಟವ್, ಗಠೋರ್ ಸ್ಪ್ರೇಯರ್, ಟಾರ್ಚ್ ಲೈಟ್‌ಗಳ ರಿಪೇರಿ ಹಾಗೂ ಅಽಕೃತವಾಗಿ ವಾಹನಗಳ ಸಹಿತ ವಿವಿಧ ಕೀಗಳನ್ನು ನಕಲಿಯಾಗಿ ಮಾಡಿಕೊಡುತ್ತಿದ್ದ ರವೀಂದ್ರರವರು ಚಿರಪರಿಚಿತರಾಗಿದ್ದರು.ಹಲವು ವರ್ಷಗಳ ಕಾಲ ಮಹಮ್ಮಾಯಿ ದೇವಸ್ಥಾನದ ಬಳಿಯ ಬಸ್ ತಂಗುದಾಣ ಸಮೀಪ ಸಣ್ಣ ಅಂಗಡಿಯೊಂದನ್ನು ಹೊಂದಿ ಕಾರ್ಯನಿರ್ವಹಿಸುತ್ತಿದ್ದ ಅವರು ಕಳೆದ ಕೆಲವು ವರ್ಷಗಳಿಂದ ಮಹಾಲಿಂಗೇಶ್ವರ ಗ್ಯಾಸ್ ಏಜೆನ್ಸಿ ಎದುರಿರುವ ಕಟ್ಟಡದಲ್ಲಿ ಅಂಗಡಿ ಹೊಂದಿ ಕಾರ್ಯನಿರ್ವಹಿಸುತ್ತಿದ್ದರು.

LEAVE A REPLY

Please enter your comment!
Please enter your name here