ಪತ್ರಕರ್ತರ ಸಂಘದಿಂದ ಉಪಾಧ್ಯಕ್ಷ ಅನೀಶ್ ಉಚ್ಚಾಟನೆ ಪ್ರಕರಣ: ಅನೀಶ್‌ರವರ ಅವ್ಯವಹಾರಗಳಿಗೆ ತಡೆ ನೀಡಿದ ಅಧ್ಯಕ್ಷ ಶ್ರವಣ್

0

  • ಅಧ್ಯಕ್ಷರ ಆದೇಶ ಧಿಕ್ಕರಿಸಿ ಪ್ರೆಸ್‌ಕ್ಲಬ್‌ನಲ್ಲಿ ದಂಧೆ ಮುಂದುವರಿಸಿದ ಅನೀಶ್
  • ಹಲವರಿಂದ ಅಧ್ಯಕ್ಷ ಶ್ರವಣ್‌ರಿಗೆ ಬೆಂಬಲ; ಕೆಲವರಿಂದ ಅನೀಶ್‌ಗೆ ಪ್ರೋತ್ಸಾಹ

ಪುತ್ತೂರು: ಪುತ್ತೂರು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್‌ರವರು ಉಪಾಧ್ಯಕ್ಷ ಅನೀಶ್ ಕುಮಾರ್‌ರವರನ್ನು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಸದಸ್ಯ ಸ್ಥಾನದಿಂದಲೂ ಬಿಡುಗಡೆಗೊಳಿಸಿರುವ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸ ಒದಗಿಸಿದೆ.

ಅನೀಶ್ ಕುಮಾರ್‌ರವರ ಅವ್ಯವಹಾರ ಮತ್ತು ಅನೈತಿಕ ಚಟುವಟಿಕೆಗಳಿಗೆ ತಡೆ ಒಡ್ಡಲು ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರು ಕೈಗೊಂಡಿರುವ ಕಾನೂನು ಕ್ರಮಕ್ಕೆ ಪತ್ರಕರ್ತರ ಸಂಘದ ಹಲವು ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಪತ್ರಿಕಾ ಭವನದ ಪಾವಿತ್ರ್ಯತೆಯನ್ನು ಉಳಿಸಲು ಸಂಘದ ಅಧ್ಯಕ್ಷರು ಮಾಡಿರುವ ಆದೇಶವನ್ನು ಉಲ್ಲಂಸಿ ಮತ್ತೆ ಅದೇ ಚಾಳಿಯನ್ನು ಮುಂದುವರಿಸಿರುವ ಅನೀಶ್ ಕುಮಾರ್‌ರವರಿಗೆ ಅವರ ಅವ್ಯವಹಾರಕ್ಕೆ ಬೆಂಬಲವಾಗಿ ನಿಂತಿರುವ ಕೆಲವು ಸದಸ್ಯರು ಬೆಂಬಲ ಸೂಚಿಸಿ ಅಧ್ಯಕ್ಷರ ನಿಲುವನ್ನು ವಿರೋಽಸಿದ್ದಾರೆ. ಇನ್ನು ಕೆಲವು ಸದಸ್ಯರು ತಟಸ್ಥ ಧೋರಣೆ ಅನುಸರಿಸಿದ್ದಾರೆ. ಸಂಘದ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಜೂನ್ ೧೫ರಂದು ಪತ್ರಿಕಾ ಭವನದಲ್ಲಿ ಪತ್ರಕರ್ತರ ಸಂಘದ ತುರ್ತು ಸಭೆ ಕರೆಯಲಾಗಿದ್ದು  ಅನೀಶ್ ಪ್ರಕರಣದ ವಿಚಾರ ಚರ್ಚೆಗೆ ಬಂದರೆ ಪತ್ರಕರ್ತರ ಘನತೆ, ಗೌರವ ಉಳಿಸಲು ಶ್ರವಣ್ ಕುಮಾರ್ ಕೈಗೊಂಡಿರುವ ನಿರ್ಣಯಕ್ಕೆ ಜಯವಾಗುವುದೇ ಅಥವಾ ಅನೀಶ್‌ರವರ ಅವ್ಯವಹಾರಕ್ಕೆ ಗೆಲುವು ಆಗುವುದೇ ಎಂದು ಭಾರೀ ಕುತೂಹಲ ಸೃಷ್ಠಿಸಿದೆ.

ಅಧ್ಯಕ್ಷ ಶ್ರವಣ್‌ರಿಂದ ಅನೀಶ್‌ರವರ ಉಚ್ಛಾಟನೆ ಆದೇಶ-ಪ್ರತಿ ವೈರಲ್:

ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರು ತಮ್ಮ ಸಂಘದ ಸದಸ್ಯರ ಗಮನಕ್ಕಾಗಿ ಮೇ 30ರಂದು ಹೊರಡಿಸಿದ್ದ ಪ್ರಕಟಣೆಯಲ್ಲಿ ‘ಆತ್ಮೀಯ ಪುತ್ತೂರು ಪ್ರೆಸ್‌ಕ್ಲಬ್ ಸದಸ್ಯರೇ…. ಕಳೆದ 25 ವರ್ಷಗಳಿಂದ ಪುತ್ತೂರು ತಾಲೂಕು ಪತ್ರಕರ್ತರ ಸಂಘವು ಹಿರಿಯ ಸದಸ್ಯ ಪತ್ರಕರ್ತರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದು ವಾರ್ತಾ ಇಲಾಖೆಯ ಕಟ್ಟಡದಲ್ಲಿ ಕಳೆದ ೧೬-೧೭ ವರ್ಷಗಳಿಂದ ಪ್ರೆಸ್‌ಕ್ಲಬ್ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಕೆಲವು ಸದಸ್ಯರು ಪ್ರೆಸ್‌ಕ್ಲಬ್ ಕಟ್ಟಡವನ್ನು ದುರ್ಬಳಕೆ ಮಾಡುತ್ತಿದ್ದು ಹಲವು ಬಾರಿ ಎಚ್ಚರಿಕೆ ನೀಡಿದರೂ ಯಥಾವತ್ತಾಗಿ ದುರ್ಬಳಕೆಯಾಗುತ್ತಿದೆ. ಮಾನ್ಯ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ, ಜಿಲ್ಲಾ ವಾರ್ತಾ ಅಽಕಾರಿಗಳು ವಾರ್ತಾ ಇಲಾಖೆಯ ಕಟ್ಟಡ ದುರ್ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನವನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಜಾರಿ ಬರುವಂತೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಅನೀಶ್ ಕುಮಾರ್ ಅವರ ಉಪಾಧ್ಯಕ್ಷ ಸ್ಥಾನವನ್ನು ಬರ್ಖಾಸ್ತ್‌ಗೊಳಿಸಿ, ಪುತ್ತೂರು ತಾಲೂಕು ಪತ್ರಕರ್ತರ ಸಂಘ(ರಿ.)ದ ಸದಸ್ಯ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ. ಮುಂದಿನ ಆದೇಶದವರೆಗೂ ಪತ್ರಕರ್ತ ಅನೀಶ್ ಕುಮಾರ್ ಅವರಿಗೂ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರು/ಸಾರ್ವಜನಿಕರು ಪತ್ರಕರ್ತ ಅನೀಶ್ ಕುಮಾರ್ ಜೊತೆ ಸಂಘದ ಹೆಸರಿನಲ್ಲಿ ಯಾವುದೇ ವ್ಯವಹಾರ ಹೊಂದಿದರೆ ಅದಕ್ಕೆ ಸಂಘ ಜವಾಬ್ದಾರರಲ್ಲ. ಪತ್ರಕರ್ತ ಎಂಬ ನೆಲೆಯಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಽನದ ಪ್ರೆಸ್‌ಕ್ಲಬ್‌ನಲ್ಲಿ ನಡೆಯುವ ಸುದ್ದಿಗೋಷ್ಠಿ ಕಾರ್ಯಕ್ರಮಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಮುಂದೆ ನಡೆಯಲಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸಭೆಯವರೆಗೆ ಪತ್ರಕರ್ತ ಅನಿಶ್ ಕುಮಾರ್ ಅವರು ಪ್ರೆಸ್‌ಕ್ಲಬ್‌ನ್ನು ಯಾವುದೇ ರೀತಿಯಲ್ಲಿ ಬಳಸದಂತೆ ಸೂಚಿಸಿದೆ. ತಪ್ಪಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಪುತ್ತೂರು ತಾಲೂಕು ಪತ್ರಕರ್ತರ ಸಂಘ(ರಿ.) ನಿರ್ಧರಿಸಿದೆ’ ಎಂದು ತಿಳಿಸಿದ್ದರು. ಅಲ್ಲದೆ, ಅನೀಶ್ ಕುಮಾರ್‌ರವರನ್ನು ಉಪಾಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿ ಸದಸ್ಯ ಸ್ಥಾನದಿಂದ ಬಿಡುಗಡೆಗೊಳಿಸಿರುವ ಕುರಿತು ಶ್ರವಣ್ ಕುಮಾರ್ ನಾಳರವರು ಸಹಾಯಕ ಆಯುಕ್ತರು, ವಾರ್ತಾ ಇಲಾಖೆ/ಜಿಲ್ಲಾ ವಾರ್ತಾ ಅಽಕಾರಿಗಳು ಮಂಗಳೂರು, ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು, ಪುತ್ತೂರು ತಾಲೂಕು ಪತ್ರಕರ್ತರ ಸಂಘ, ಅಧ್ಯಕ್ಷರು, ಕಾರ್ಯದರ್ಶಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ಭವನ ಮಂಗಳೂರು, ಪಿಆರ್‌ಓ/ಮೆನೇಜರ್ ಪತ್ರಿಕಾ ಭವನ ಪುತ್ತೂರು, ಜಿಲ್ಲಾಽಕಾರಿಗಳು ದ.ಕ. ಮಂಗಳೂರು ಮತ್ತು ಎಸ್‌ಪಿ/ಡಿವೈಎಸ್‌ಪಿ ಪೊಲೀಸ್ ಇಲಾಖೆ ದ.ಕ. ಇವರಿಗೆ ಯಥಾ ಪ್ರತಿ ಕಳುಹಿಸಿದ್ದರು.

ಅನೀಶ್‌ರ ಉಚ್ಚಾಟನೆಗೆ ಕಾರಣ:

ಮೇ 29ರಂದು ರಾತ್ರಿ 9.30ರ ವೇಳೆಗೆ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್‌ರವರು ಪುತ್ತೂರು ಪತ್ರಿಕಾ ಭವನಕ್ಕೆ ಬಂದಿದ್ದ ವೇಳೆ ಪತ್ರಿಕಾ ಭವನದ ಒಳಗಡೆ ಪತ್ರಿಕಾಗೋಷ್ಠಿ ನಡೆಯುವ ಕೊಠಡಿಯಲ್ಲಿ ಲೈಟ್, ಆನ್ ಮತ್ತು ಎ.ಸಿ. ಹಾಕಿ ಕುಡಿದು ಟೈಟ್ ಆಗಿ ಅನೀಶ್ ಕುಮಾರ್‌ರವರು ಮಲಗಿರುವುದು ಕಂಡು ಬಂದಿತ್ತು. ಪತ್ರಕರ್ತನ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುವುದು, ಬೆದರಿಸುವುದು, ಹಣ ವಸೂಲಿ ಮಾಡುವುದು, ಪತ್ರಿಕಾ ಭವನದಲ್ಲಿ ಕುಡಿದು ಮಲಗುವುದು, ಕುಡಿದ ಮತ್ತಿನಲ್ಲಿ ತನಗಾಗದವರಿಗೆ ದೂರವಾಣಿ ಕರೆ ಮಾಡಿ ಕಿರಿಕಿರಿ ಮಾಡುವುದು, ಪತ್ರಿಕಾ ಭವನದ ಒಳಗೆಯೇ ಬೀಡಾ, ಗುಟ್ಕಾ ತಿಂದು ಉಗುಳುವುದು, ಗೃಹರಕ್ಷಕ ದಳದ ಸಿಬ್ಬಂದಿಯಾಗಿರುವ ಮಹಿಳೆಯೊಬ್ಬರನ್ನು ಪತ್ರಿಕಾ ಭವನಕ್ಕೆ ರಾತ್ರಿ ವೇಳೆ ಕರೆದುಕೊಂಡು ಬಂದಿರುವುದು ಮುಂತಾದ ಆರೋಪಗಳು ಕೇಳಿ ಬರುತ್ತಿರುವ ಬಗ್ಗೆ ಶ್ರವಣ್ ಕುಮಾರ್‌ರವರ ಗಮನಕ್ಕೆ ಕೆಲವರು ತಂದಿದ್ದರು. ಅದನ್ನು ಅವರು ಇತರ ಸದಸ್ಯರ ಗಮನಕ್ಕೆ ತಂದಿದ್ದರು. ಪತ್ರಕರ್ತರ ಘನತೆಗೆ, ಗೌರವಕ್ಕೆ ಮತ್ತು ಪತ್ರಿಕಾ ಭವನದ ಪಾವಿತ್ರ್ಯಕ್ಕೆ ಧಕ್ಕೆ ಆಗುತ್ತಿರುವ ಬಗ್ಗೆ ಶ್ರವಣ್‌ರವರು ಸದಸ್ಯರಿಗೆ ತಿಳಿಸಿದ್ದಾಗ ಕೆಲವು ಸದಸ್ಯರು ಕಾನೂನು ಕ್ರಮಕೈಗೊಳ್ಳುವಂತೆ ತಿಳಿಸಿದ್ದರು. ಪ್ರತಿಷ್ಠಿತ ಪತ್ರಕರ್ತರ ಸಂಘವಾಗಿ ಗುರುತಿಸಿಕೊಂಡು ಸಾರ್ವಜನಿಕರ ಗೌರವಾದರಗಳಿಗೆ ಪಾತ್ರವಾಗಿರುವ ನಮ್ಮ ಪತ್ರಕರ್ತರ ಸಂಘಕ್ಕೆ ಕೆಟ್ಟ ಹೆಸರು ಬರುತ್ತಿರುವುದರಿಂದ ಕೂಡಲೇ ಅನೀಶ್ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚಿನ ಸದಸ್ಯರು ಒತ್ತಾಯಿಸಿದ್ದರು. ಆದರೆ, ಅನೀಶ್ ಕುಮಾರ್‌ರವರ ಅವ್ಯವಹಾರ, ಅನೈತಿಕ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತಿರುವ ಹಾಗೂ ಅವರೊಂದಿಗೆ ರಾತ್ರಿ ವೇಳೆಗೂ ಪತ್ರಿಕಾ ಭವನದಲ್ಲಿ ಇರುವ ಕೆಲವು ಸದಸ್ಯರು ಅನೀಶ್ ವಿರುದ್ಧದ ಆರೋಪಗಳಿಗೆ ಸಾಕ್ಷಿ ಏನುಂಟು ಎಂದು ಕೇಳಿದ್ದರು. ಮೇ 29ರಂದು ರಾತ್ರಿ ಶ್ರವಣ್‌ರವರು ಪತ್ರಿಕಾ ಭವನಕ್ಕೆ ಬಂದಾಗ ಅನೀಶ್ ಕುಡಿದು ಟೈಟಾಗಿ ಮಲಗಿರುವುದನ್ನು ನೋಡಿ ಇತರ ಸದಸ್ಯರ ಗಮನಕ್ಕೆ ತಂದಿದ್ದರಲ್ಲದೆ ಸಾಕ್ಷಿ ಒದಗಿಸಿದ್ದರು. ಮರುದಿನ ಅನೀಶ್ ಅವರನ್ನು ಉಚ್ಚಾಟಿಸಿ ಆದೇಶ ಹೊರಡಿಸಿದ್ದರು. ಸಂಘದಿಂದ ಉಚ್ಚಾಟಿಸಲ್ಪಟ್ಟ ವಿಚಾರ ವಾಟ್ಸಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವೆಬ್‌ಸೈಟ್ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು. ಬಳಿಕ ಒಂದೆರೆಡು ದಿನ ಅನೀಶ್ ಕುಮಾರ್ ಪತ್ರಿಕಾ ಭವನದಿಂದ ದೂರವಾಗಿದ್ದರು. ಅನೀಶ್‌ರವರ ಅವ್ಯವಹಾರದಲ್ಲಿ ಪಾಲುದಾರರಾಗಿರುವ ಇತರ ಕೆಲವು ಸದಸ್ಯರ ಬೆಂಬಲದಿಂದ ಮತ್ತೆ ಪತ್ರಿಕಾ ಭವನಕ್ಕೆ ಬರಲಾರಂಭಿಸಿರುವ ಅನೀಶ್ ಈಗಲೂ ಕಾನೂನು ಮೀರಿ ಪತ್ರಿಕಾ ಭವನದಲ್ಲಿ ರಾತ್ರಿ ವೇಳೆ ಠಿಕಾಣಿ ಹೂಡುತ್ತಿರುವುದಾಗಿ ಮಾಹಿತಿ ಲಭಿಸಿದೆ. ಉಚ್ಚಾಟನೆ ಪ್ರಕರಣಕ್ಕೆ ಸಂಬಂಽಸಿ ಅಭಿಪ್ರಾಯ ಸಂಗ್ರಹಿಸಿದಾಗ ಸಂಘದ ಕೆಲವು ಸದಸ್ಯರು ಪತ್ರಕರ್ತರ ಸಂಘದಿಂದ ಅನೀಶ್‌ರವರನ್ನು ಉಚ್ಚಾಟಿಸಲು ಅಧ್ಯಕ್ಷರಿಗೆ ಏನು ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಅನೀಶ್‌ರವರ ತಪ್ಪು ಇದೆ, ಆದರೆ ಅಧ್ಯಕ್ಷರು ಸಂಘದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿತ್ತು ಎಂದಿದ್ದಾರೆ. ಕೆಲವರು ಅಧ್ಯಕ್ಷರದ್ದು, ಅನೀಶರದ್ದು ತಪ್ಪು ಇದೆ ಎಂದಿದ್ದಾರೆ. ಹೆಚ್ಚಿನವರು ಅಧ್ಯಕ್ಷರ ನಿರ್ಧಾರವನ್ನು ಸಮರ್ಥಿಸಿದ್ದಾರೆ. ಕೆಲವರು ತಟಸ್ಥರಾಗಿದ್ದಾರೆ.

ಹಿಂದೆಯೇ ದೂರು ನೀಡಲಾಗಿತ್ತು;

ಪುತ್ತೂರು ಪತ್ರಿಕಾ ಭವನವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಈ ಹಿಂದೆಯೇ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪುತ್ತೂರು ಪತ್ರಿಕಾ ಭವನದಲ್ಲಿ ಅನಽಕೃತ ವರದಿಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ, ಪತ್ರಿಕಾ ಭವನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಅಲ್ಲಿ ಅವ್ಯವಹಾರ ನಡೆಸಲಾಗುತ್ತಿದೆ. ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ವತಿಯಿಂದ ದ.ಕ. ಜಿಲ್ಲಾಽಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಮತ್ತು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲಾಗಿತ್ತು. ಅಲ್ಲದೆ, ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ ಎಂದು ಸಹಕಾರಿ ಇಲಾಖೆಯ ಉಪನಿಬಂಧಕರಿಗೆ ದೂರು ಸಲ್ಲಿಸಲಾಗಿತ್ತು. ಪುತ್ತೂರು ತಾಲೂಕು ಪತ್ರಕರ್ತರ ಸಂಘವು ಸರಿಯಾಗಿ ಆಡಿಟ್ ನಡೆಸುತ್ತಿಲ್ಲ. ಖರ್ಚು ವೆಚ್ಚಗಳ ಲೆಕ್ಕಾಚಾರ ಸರಿ ಇಲ್ಲ ಎಂದು ಜಂಟಿ ನಿಬಂಧಕರ ಕಛೇರಿ ಮೂಲಕ ನಡೆಸಲಾಗಿದ್ದ ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಲೋಪ ದೋಷಗಳನ್ನು ಸರಿಪಡಿಸಲು ಶ್ರವಣ್ ಕುಮಾರ್ ಬಹಳಷ್ಟು ಪ್ರಯತ್ನ ಪಟ್ಟಿದ್ದರು.

ಅನೀಶ್ ಕುಮಾರ್‌ರವರು ಈ ಹಿಂದೆ ಪತ್ರಿಕಾ ಭವನದಲ್ಲಿನ ತನ್ನ ಸ್ಥಾನಮಾನವನ್ನು ದುರುಪಯೋಗ ಪಡಿಸಿಕೊಂಡು ಸುದ್ದಿ ಬಳಗದವರ ವಿರುದ್ಧ ಸುಳ್ಳು ಕೇಸು ದಾಖಲಿಸುವ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು. ಸುದ್ದಿ ಬಿಡುಗಡೆ ಪತ್ರಿಕಾ ಬಳಗ ನಡೆಸುವ ಜನಾಂದೋಲನವನ್ನು ಸಹಿಸದೆ ವಾಟ್ಸಪ್, -ಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸುದ್ದಿ ಬಳಗದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದುದನ್ನು ಸುದ್ದಿ ಬಳಗ ವಿಚಾರಿಸಿದ್ದ ವೇಳೆ ನಡೆದ ಮಾತಿನ ಚಕಮಕಿಗೆ ಸಂಬಂಧಿಸಿ ಯುವಭಾರತ್ ವಾಟ್ಸಪ್ ಗ್ರೂಪ್‌ನ ಚಿನ್ಮಯಕೃಷ್ಣರವರು ಸುದ್ದಿ ಬಳಗದ ಏಳು ಮಂದಿಯ ವಿರುದ್ಧ ಕೇಸು ದಾಖಲಿಸಿದ್ದಾಗ ಪತ್ರಿಕಾ ಸಂಘದ ಸದಸ್ಯರಾಗಿದ್ದ ಅನೀಶ್ ಕುಮಾರ್, ಕೃಷ್ಣಪ್ರಸಾದ್ ಬಲ್ನಾಡು ಮತ್ತು ಪ್ರವೀಣ್ ಕುಮಾರ್ ಸುಳ್ಳು ಸಾಕ್ಷಿ ಹಾಕಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿ ಯುವಭಾರತ್ ವಾಟ್ಸಪ್ ಗ್ರೂಪ್‌ನ ಪ್ರದೀಪ್ ಕುಮಾರ್ ಶೆಟ್ಟಿಯವರು ಸುದ್ದಿ ಬಳಗದ 26 ಮಂದಿಯ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾಗ ಇದೇ ಅನೀಶ್ ಕುಮಾರ್, ಕೃಷ್ಣಪ್ರಸಾದ್ ಬಲ್ನಾಡು ಮತ್ತು ಇತರ ಸದಸ್ಯರು ಸುಳ್ಳು ಸಾಕ್ಷಿ ಹಾಕಿದ್ದರು. ಸುದ್ದಿ ಬಳಗದ ಮಹಿಳಾ ಸಿಬ್ಬಂದಿಗಳ ಬಗ್ಗೆಯೂ ಅಪಪ್ರಚಾರ ನಡೆಸುವುದಲ್ಲದೆ ಸುಳ್ಳು ಕೇಸು ಹಾಕಿ ಹಿಂಸೆ ನಡೆಸುತ್ತಿರುವುದನ್ನು ವಿರೋಧಿಸಿ ಸುದ್ದಿ ಬಿಡುಗಡೆ ವರದಿಗಾರರು ಪತ್ರಿಕಾ ಭವನದ ಬಳಿ ಪ್ರತಿಭಟನೆ ನಡೆಸಿದಾಗ ಪತ್ರಕರ್ತರ ಸಂಘದ ಕೃಷ್ಣಪ್ರಸಾದ್ ಬಲ್ನಾಡುರವರು ಸುಳ್ಳು ಕೇಸ್ ನೀಡಿದ್ದರು. ಆಗಲೂ ಅನೀಶ್ ಕುಮಾರ್ ಸುಳ್ಳು ಸಾಕ್ಷಿ ಹಾಕಿದ್ದರು. ಪದೇ ಪದೇ ಸುಳ್ಳು ಕೇಸ್‌ಗಳಿಗೆ ಸುಳ್ಳು ಸಾಕ್ಷಿ ಹಾಕುತ್ತಿರುವ ಅನೀಶ್ ಕುಮಾರ್‌ರವರು ಸುಳ್ಳು ಸಾಕ್ಷಿ ಹಾಕುವಾಗ ತಾನು ವಿ೪ ಚಾನೆಲ್ ವರದಿಗಾರನೆಂದೂ, ನಮ್ಮ ಟಿ.ವಿ. ಚಾನೆಲ್ ವರದಿಗಾರನೆಂದೂ, ಪಬ್ಲಿಕ್ ಟಿ.ವಿ. ವರದಿಗಾರನೆಂದೂ ಹೇಳಿಕೊಂಡಿದ್ದಾರೆ. ಆದರೆ, ಆ ಸಂಸ್ಥೆಯವರು ನಮಗೂ ಅನೀಶ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಅನೀಶ್ ಕುಮಾರ್ ಮತ್ತು ಅವರ ತಂಡದವರು ಸುಳ್ಳು ಕೇಸು ದಾಖಲಿಸಿ ಹಿಂಸೆ ಕೊಡುತ್ತಿರುವುದನ್ನು ಸರಿ ಪಡಿಸಬೇಕು ಎಂದು ಸುದ್ದಿ ಬಿಡುಗಡೆ ಬಳಗದವರು ಹಲವು ಬಾರಿ ಪತ್ರಕರ್ತರ ಸಂಘದ ಸಭೆಯಲ್ಲಿ ಮನವಿ ಮಾಡಿದ್ದರೂ ನ್ಯಾಯ ದೊರಕದೇ ಇದ್ದುದರಿಂದ ಪತ್ರಕರ್ತರ ಸಂಘಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಶ್ರವಣ್ ಕುಮಾರ್‌ರವರು ಸಂಘದ ಅಧ್ಯಕ್ಷರಾದ ಬಳಿಕ ಪತ್ರಕರ್ತರೊಳಗಿನ ಭಿನ್ನಮತವನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ.

ಮಾನ್ಯತೆ ಕಳೆದುಕೊಂಡ ಪತ್ರಕರ್ತರು:

ಅಂದು ಪುತ್ತೂರು ಪತ್ರಕರ್ತರ ಸಂಘಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದ ಪುತ್ತೂರು ಸುದ್ದಿ ಬಿಡುಗಡೆ ವರದಿಗಾರರು ಈಗ ದ.ಕ. ಜಿಲ್ಲಾ ಕಾರ‍್ಯನಿರತ ಪತ್ರಕರ್ತರ ಸಂಘದಲ್ಲಿ   ಸದಸ್ಯರಾಗಿದ್ದಾರೆ.  ಅಂದು ಸುದ್ದಿ ವಿರುದ್ಧ ಸುಳ್ಳು ಸಾಕ್ಷಿ ನೀಡಿದ್ದ ಅನೀಶ್ ಕುಮಾರ್, ಪ್ರಸಾದ್ ಬಲ್ನಾಡು, ಪ್ರವೀಣ್ ಕುಮಾರ್‌ರಿಗೆ ಅವರು ವರದಿಗಾರರು ಎಂದು ಹೇಳಿಕೊಳ್ಳುತ್ತಿರುವ ಮಾಧ್ಯಮದವರು ಮಾನ್ಯತೆ ನೀಡಲು ನಿರಾಕರಿಸಿರುವುದರಿಂದ ದ.ಕ. ಜಿಲ್ಲಾ ಕಾರ‍್ಯನಿರತ ಪತ್ರಕರ್ತರ ಸಂಘದ ಸದಸ್ಯತನ ನಿರಾಕರಿಸಲ್ಪಟ್ಟಿದೆ ಎಂದು ತಿಳಿದು ಬಂದಿದೆ.

ಪತ್ರಿಕಾಭವನವನ್ನು, ಸಂಘವನ್ನು ದುರುಪಯೋಗ ಪಡಿಸಿರುವುದಕ್ಕೆ

ನನ್ನ ವಿರೋಧ ಇದೆ -ಶ್ರವಣ್ ಕುಮಾರ್ ನಾಳ

ಉಚ್ಚಾಟನೆ ಪ್ರಕರಣದ ಬಗ್ಗೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರನ್ನು ಸಂಪರ್ಕಿಸಿದಾಗ ‘ಈ ವಿಚಾರದಲ್ಲಿ ಯಾವುದೇ ವೈಯುಕ್ತಿಕ ಹಿತಾಸಕ್ತಿ ಇಲ್ಲ. ಪತ್ರಕರ್ತರ ಗೌರವ, ಪತ್ರಿಕಾ ಭವನದ ಪಾವಿತ್ರ್ಯತೆ ಕಾಪಾಡಲು ಈ ಹಿಂದೆಯೇ ಕ್ರಮ ಕೈಗೊಳ್ಳಬೇಕಿತ್ತು. ಅಪಾರ ದೂರು ಇದ್ದರೂ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಆಧಾರ ಲಭ್ಯವಾಗಿದ್ದು ಅನಿವಾರ್ಯವಾಗಿ ಕ್ರಮ ಕೈಗೊಳ್ಳಲಾಗಿದೆ. ಸರಿಯಾಗಿ ವಿಚಾರಣೆ ನಡೆದರೆ ನ್ಯೂಸ್ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುವುದು, ಕುಡಿದು ಮಲಗಿರುವುದು, ಪತ್ರಿಕಾ ಭವನವನ್ನು ದುರ್ಬಳಕೆ ಮಾಡಿಕೊಂಡಿರುವುದು, ಹಣದ ಅವ್ಯವಹಾರ ಸಹಿತ ಎಲ್ಲವೂ ಬೆಳಕಿಗೆ ಬರಬಹುದು. ನಾನು ಕೈಗೊಂಡಿರುವ ನಿರ್ಣಯಕ್ಕೆ ಬದ್ಧನಾಗಿದ್ದೇನೆ. ೩ ತಿಂಗಳ ಅವಽಗೆ ಸಂಘದಿಂದ ಉಚ್ಚಾಟಿಸಲಾಗಿದ್ದು ಅದನ್ನು ಪ್ರಶ್ನಿಸಲು ಅವರಿಗೆ ಅವಕಾಶ ಇದೆ. ಇನ್ನೂ ಅವರು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ತಾನು ಮಾಡುವುದೇ ಸರಿ ಎಂದು ಹೇಳಿಕೊಂಡು, ಪತ್ರಿಕಾಭವನವನ್ನು ದುರುಪಯೋಗ ಮಾಡಿಕೊಂಡು, ಕಾನೂನಿನ ವಿರುದ್ಧ ಹೋಗುವುದಕ್ಕೆ ನನ್ನ ವಿರೋಧ ಇದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯೆ ನೀಡಲು ನಿರಾಕರಿಸಿ ‘ನಾನೇನು ಕಳ್ಳನಾ’ ಎಂದ ಅನೀಶ್

ಪತ್ರಕರ್ತರ ಸಂಘದಿಂದ ಉಚ್ಚಾಟಿಸಲ್ಪಟ್ಟಿರುವ ಕುರಿತು ಅನೀಶ್ ಕುಮಾರ್‌ರವರಲ್ಲಿ ಪ್ರತಿಕ್ರಿಯೆ ಕೇಳಿದಾಗ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಕುಡಿದು ಮಲಗಿರುವ ಬಗ್ಗೆ, ಉಚ್ಚಾಟಿಸಲ್ಪಟ್ಟಿದ್ದರೂ ಸಂಜೆ ಹೊತ್ತಿಗೂ ಪತ್ರಿಕಾ ಭವನದಲ್ಲಿಯೇ ಇರುವ ಕುರಿತು ಪತ್ರಕರ್ತರು ಕೇಳಿದಾಗ ಕುಳಿತಲ್ಲಿಂದ ಎದ್ದು ಹೋದ ಅನಿಶ್‌ರವರು ಯಾರಲ್ಲಿಯೋ ಮೊಬೈಲ್ -ನ್‌ನಲ್ಲಿ ಮಾತನಾಡುತ್ತಾ ಪ್ರತಿಕ್ರಿಯೆ ಕೇಳಿದ ಪತ್ರಕರ್ತರತ್ತ ನೋಡಿ ‘ನನ್ನನ್ನು ಕಳ್ಳನಂತೆ ನೋಡುವುದು ಯಾಕೆ’ ಎಂದು ಪ್ರಶ್ನಿಸಿದ್ದಾರೆ. ಇದರ ಸಂಪೂರ್ಣ ವಿಡಿಯೋವನ್ನು ಪತ್ರಕರ್ತರ ಸಂಘದ ಕೋಶಾಽಕಾರಿ ಕೃಷ್ಣಪ್ರಸಾದ್ ಬಲ್ನಾಡುರವರು ಚಿತ್ರೀಕರಿಸಿದ್ದಾರೆ. ಇತರರ ವಿಡಿಯೋ ಚಿತ್ರೀಕರಣ ಮಾಡುವ ಅನೀಶ್‌ರವರು ತನ್ನ ವೀಡಿಯೋವನ್ನು ಇತರರು ಮಾಡುವುದನ್ನು ವಿರೋಽಸುವುದು, ತನ್ನ ಅವ್ಯವಹಾರದ ಬಗ್ಗೆ ಏನೂ ಮಾತನಾಡದೇ ಇರುವುದು, ಕೇಸು ಮಾಡುತ್ತೇನೆ ಎಂದು ಹೆದರಿಸುವುದು ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತಿದೆ.

ವಾಟ್ಸಾಪ್ ಗುಂಪಿನಲ್ಲಿ ಚರ್ಚೆ ನಡೆದಿತ್ತು

ಪುತ್ತೂರು ಪತ್ರಕರ್ತರ ಸಂಘದ ವಾಟ್ಸಾಪ್ ಗುಂಪಿನಲ್ಲಿ ಅನೀಶ್ ರವರು ಪತ್ರಕರ್ತರ ಸಂಘವನ್ನು ದುರ್ಬಳಕೆ ಮಾಡಿರುವ ಬಗ್ಗೆ ಅಧ್ಯಕ್ಷರಾದ ಶ್ರವಣ್ ಕುಮಾರ್ ನಾಳ ತಿಳಿಸಿದ್ದರು ಬಳಿಕ ಅವರನ್ನು ವಜಾ ಮಾಡಿರುವ ಪ್ರಕಟಣೆಯುಳ್ಳ ಪ್ರತಿಯನ್ನು ಹಾಕಿದ್ದರು.ಆ ಗುಂಪಿನಲ್ಲಿದ್ದ ಕೆಲವು ಸದಸ್ಯರು ಈ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ. ಬಳಿಕ ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುವುದೆಂದು ನಿರ್ಣಯಿಸಲಾಗಿತ್ತು.ನಾನು ಕಾರ್ಯಕಾರಿಣಿ ಸದಸ್ಯನೂ ಅಲ್ಲದಿರುವುದರಿಂದ ಅಲ್ಲಿನ ಸಭೆಗಳಿಗೂ ಹಾಜರಾಗಿಲ್ಲ ಹಾಗಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ

ಸಿದ್ದೀಕ್ ಕುಂಬ್ರ, ಸದಸ್ಯರು ಪುತ್ತೂರು ಪತ್ರಕರ್ತರ ಸಂಘ

ಅಧ್ಯಕ್ಷರ ನಿರ್ಧಾರವನ್ನು ಅಧ್ಯಕ್ಷರೊಂದಿಗೇ ವಿಚಾರಿಸಿ

ಪುತ್ತೂರು ಪತ್ರಕರ್ತರ ಸಂಘದ ಸದಸ್ಯರಾದ ಮೇಘಾ ಪಾಲೆತ್ತಾಡಿ, ಶಶಿಧರ್.ರೈ ಕುತ್ಯಾಳ ಮತ್ತು ಸಂದೀಪ್‌ರವರಲ್ಲಿ ಪ್ರತಿಕ್ರಿಯೆ ಕೇಳಿದಾಗ ‘ಇದು ಅಧ್ಯಕ್ಷರ ತೀರ್ಮಾನ,ಆದ್ದರಿಂದ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸುತ್ತೇವೆ.ಇದು ಅಧ್ಯಕ್ಷರ ತೀರ್ಮಾನವಾದುದರಿಂದ ಅವರೊಂದಿಗೆ ವಿಚಾರಿಸಿ’ ಎಂದು ಹೇಳಿದರು. ಪತ್ರಕರ್ತ ಅನೀಶ್‌ರವರನ್ನು ಪುತ್ತೂರು ಪತ್ರಕರ್ತದ ಸಂಘದಿಂದ ವಜಾ ಮಾಡಿರುವ ಬಗ್ಗೆ ಪತ್ರಕರ್ತರ ಸಂಘದ ಸದಸ್ಯರೊಂದಿಗೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸಲಾಗಿದ್ದು ಸದಸ್ಯರಾದ ಸುಧಾಕರ ಸುವರ್ಣ, ಸಂಶುದ್ದೀನ್ ಸಂಪ್ಯ,ರಾಜೇಶ್ ಪಟ್ಟೆ, ಸಿದ್ದೀಕ್ ನೀರಾಜೆ, ಹರೀಶ್.ಪಿ, ದೀಪಕ್ ಉಬಾರ್, ಅಜಿತ್ ಕುಮಾರ್, ಉಮಾಶಂಕರ್, ಕೃಷ್ಣಪ್ರಸಾದ್ ಬಲ್ನಾಡು, ಸುಧಾಕರ್ ಪಡೀಲ್, ಪ್ರವೀಣ್ ಕುಮಾರ್, ಸರ್ವೇಶ್ ಉಪ್ಪಿನಂಗಡಿ, ಯು.ಎಲ್ ಉದಯ್ ಕುಮಾರ್ ಮಾತನಾಡಿ ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

LEAVE A REPLY

Please enter your comment!
Please enter your name here