ಪುತ್ತೂರು : ಇಲ್ಲಿನ ಮುಖ್ಯರಸ್ತೆಯಲ್ಲಿರುವ ಎಲ್.ಟಿ.ಟ್ರೇಡರ್ಸ್ ಮಾಲಕ, ಸಾಮಾಜಿಕ ಧಾರ್ಮಿಕ ಮುಖಂಡ ಕೂರ್ನಡ್ಕ ನಿವಾಸಿ ಎಲ್.ಟಿ.ಹಸೈನಾರ್ ಹಾಜಿ (75ವ.)ರವರು ಅಸೌಖ್ಯದಿಂದ ಜೂ.14ರಂದು ನಿಧನರಾದರು.
ಎಲ್.ಟಿ.ಹಸೈನಾರ್ ಹಾಜಿಯವರು ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಸದಸ್ಯ ಮತ್ತು ಅನ್ಸಾರುದ್ದೀನ್ ಯತೀಂ ಖಾನದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮೊಟ್ಟೆತ್ತಡ್ಕ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, ಪುತ್ರರಾದ ಎಪಿಎಂಸಿ ರಸ್ತೆಯಲ್ಲಿರುವ ಎಲ್ಟಿ ಟ್ರೇಡರ್ಸ್ ಮಾಲಕ ಎಲ್ಟಿ ಉಮ್ಮರ್ ಫಾರೂಕ್, ಮಹಮ್ಮದ್ ರಪೀಕ್, ಸಂಶುದ್ದೀನ್, ಸಮೀರ್ರವರನ್ನು ಅಗಲಿದ್ದಾರೆ.