ವಿಟ್ಲ : ಅಕ್ರಮವಾಗಿ ಬಾಕ್ಸೆಟ್ ಮಣ್ಣು ಸಾಗಾಟದ ಲಾರಿ ಪೊಲೀಸ್ ವಶಕ್ಕೆ

0

ವಿಟ್ಲ : ಕೇರಳದಿಂದ ಅಕ್ರಮವಾಗಿ ಬರುವ ಬಾಕ್ಸೆಟ್ ಮಣ್ಣು ತುಂಬಿದ ಸುಮಾರು 7 ಲಾರಿಗಳನ್ನು ವಿಟ್ಲ ಠಾಣಾ ಪೊಲೀಸರು ತಡೆದಿದ್ದಾರೆ.

ವಿಟ್ಲ ಮೂಲಕ ಅಕ್ರಮವಾಗಿ ಬಳ್ಳಾರಿ, ಸಂಡೂರಿಗೆ ಬಾಕ್ಸೆಟ್ ಸಾಗಿಸುತ್ತಿದ್ದ ಏಳು ಭಾರೀ ಸರಕು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಕರಾವಳಿಯಲ್ಲಿ ನಡೆಯುವ ಅವ್ಯಾಹತ ದಂಧೆಯ ಪಾಲಿಗೆ ಈಗ ಮಣ್ಣು ಗಣಿ ಗಾರಿಕೆಯೂ ಸೇರ್ಪಡೆಗೊಂಡಿದೆ. ಮರಳುಗಾರಿಕೆಯ ಜೊತೆಗೆ ಮಣ್ಣು ದಂಧೆಯೂ ಭಾರೀ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಬೆಟ್ಟ ಗುಡ್ಡಗಳನ್ನು ಅಗೆದು ಮಣ್ಣನ್ನು ಹೊರ ರಾಜ್ಯಗಳಿಗೆ ರವಾನೆ ಮಾಡಲಾಗುತ್ತಿದೆ ಎಂದು ಮಾಹಿತಿ ಲಭಿಸಿದೆ. ಲಾರಿ ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣವನ್ನು‌ ಗಣಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here