ಎಲ್ಲೆಂದರಲ್ಲಿ ಕಸ ಬಿಸಾಡಿ ತಲೆಮರೆಸಿಕೊಂಡರೂ ಕಸ ಬಿಸಾಡಿದವರನ್ನು ಪತ್ತೆ ಮಾಡಿದ ನಗರಸಭೆ ಅಧಿಕಾರಿಗಳು – ಕಸ ಬಿಸಾಡಿದವರಿಂದ ರೂ. 5ಸಾವಿರ ದಂಡ ನಗರಸಭೆಗೆ ಪಾವತಿ

0

ಪತ್ತೂರು: ನಗರಸಭೆ ವ್ಯಾಪ್ತಿಯ ಪುತ್ತೂರು ಸುಬ್ರಹ್ಮಣ್ಯ ರಸ್ತೆ ಮರೀಲ್ ಬಳಿ ಕಸ ರಾಶಿ ಪದೇ ಪದೇ ಕಾಣುತ್ತಿದ್ದು, ಕಸ ಬೀಸಾಡಿದವರು ಯಾರೆಂದು ತಿಳಿಯುವ ಸಂದರ್ಭದಲ್ಲಿ ಕಸದ ಕಟ್ಟೊಂದನ್ನು ಪರಿಶೀಲಿಸಿ ಅದರಲ್ಲಿರುವ ದಾಖಲೆ ಪತ್ರದ ಆಧಾರದಲ್ಲಿ ಕಸ ಬಿಸಾಡಿದವರನ್ನು ಪತ್ತೆ ಮಾಡಿ ಕಸ ಬಿಸಾಡಿದವರಿಗೆ ರೂ. 5ಸಾವಿರ ದಂಡ ವಿಧಿಸುವ ಮೂಲಕ ಪುತ್ತೂರು ನಗರಸಭೆ ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆ ಯಶಸ್ವಿಯಾಗಿದೆ.

ನರಿಮೊಗರು ಗ್ರಾಮದ ಪುರುಷರಕಟ್ಟೆ ಪಿ.ಕೆ ರೆಸಿಡೆನ್ಸಿಯ ನಸೀರಾ ಎಂಬವರು ಕಸ ಬೀಸಾಡಿದಕ್ಕೆ ನಗರಸಭೆಗೆ ರೂ. 5ಸಾವಿರ ದಂಡ ಪಾವತಿಸಿದವರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮರೀಲು ಸಮೀಪ ರಸ್ತೆ ಬದಿ ಕಸದ ರಾಶಿ ಇರುವುದನ್ನು ಗಮನಿಸಿ ಸ್ವಚ್ಛತೆ ಮಾಡಿದ್ದರು. ಆದರೆ ಮರುದಿನ ಪುನಃ ಅಲ್ಲಿ ಕಸದ ರಾಶಿ ಇರುವುದನ್ನು ಗಮನಿಸಿ ಕಸದ ಕಟ್ಟು ಬಿಚ್ಚಿಸಿ ಪರಿಶೀಲಿಸಿದರು. ಕಸದ ರಾಶಿಯಲ್ಲಿ ಸಿಕ್ಕಿದ ಹರಿದಿರುವ ದಾಖಲೆಯನ್ನಾಧರಿಸಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಅವರು ಕಸ ಬೀಸಾಡಿದವರನ್ನು ಸಂಪರ್ಕಿಸಿದರು. ಕಸ ಬಿಸಾಡಿದ ನಸೀರಾ ಅವರು ಈ ಕುರಿತು ದಂಡ ಪಾವತಿಸುವುದಾಗಿ ತಿಳಿಸಿದ್ದರು. ಆದರೆ ಅವರು ನಗರಸಭೆಗೆ ಬಂದು ದಂಡ ಪಾವತಿಸದ ಹಿನ್ನಲೆಯಲ್ಲಿ ನಗರಭೆಯಿಂದ ದಂಡದ ನೋಟೀಸ್ ನೀಡಿದಾಗ ತಕ್ಷಣ ನಗರಸಭೆ ಕಚೇರಿಗೆ ಬಂದು ರೂ. 5ಸಾವಿರ ದಂಡ ಪಾವತಿಸಿದ್ದಾರೆ.

 

ಕಸದಲ್ಲಿ ಸಿಕ್ಕಿದ ದಾಖಲೆ

 

ದಂಡ ಪಾವತಿಸಿದ ರಶೀದಿ

LEAVE A REPLY

Please enter your comment!
Please enter your name here