ವಳತ್ತಡ್ಕ: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ

0

  • ಕಲಿಸುವಿಕೆಯು ಸ್ನೇಹ ಮತ್ತು ಪ್ರೋತ್ಸಾಹ ಪೂರಕವಾಗಿರಲಿ- ಎ.ಎಸ್.ಕೌಸರಿ ವಳತ್ತಡ್ಕ

ಪುತ್ತೂರು: ಬದ್ರೀಯಾ ಜುಮಾ ಮಸೀದಿ ವಳತ್ತಡ್ಕ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಹಿದಾಯತುಲ್ ಇಸ್ಲಾಂ ಮದ್ರಸ ಇದರ ವಿಧ್ಯಾರ್ಥಿ ಸಂಘಟನೆಯಾದ SKSBV ಯ ಸಾರಥ್ಯದಲ್ಲಿ ಹಾಗೂ ರಿಯಾಝ್ ವಳತಡ್ಕ ಇವರ ಆರ್ಥಿಕ ಸಹಾಯ ಮತ್ತು ಉತ್ತೇಜನೆಯ ಸಲುವಾಗಿ SSLC ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಮಕ್ಕಳನ್ನು ಕಲಿಕೆಯತ್ತ ಹೆಚ್ಚು ಗಮನ ಕೊಡಿಸುವಿಕೆಯ ಭಾಗವಾಗಿ SSLC ಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿನಿಗಳಾದ (595) ಸಫಾ ರೈಹಾನ(ಅಬ್ದುಲ್ ರಝ್ಜಾರ್ ಬಳ್ಳೇರಿ) ಹಾಗೂ (501)ಅಝ್ವೀನಾ (ಅಬ್ದುಲ್ ಅಝೀಝ್ ಪಂಜ)ರವರಿಗೆ ಪುರಸ್ಕಾರ ನೀಡಿ ಬಹುಮಾನ ವಿತರಿಸಿ ಗೌರವಿಸಲಾಯಿತು. ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾದ ಮುಹಮ್ಮದ್ ಸ್ವಾಲಿಹ್, ರಿಯಾನ್ ರಾಝ್, ಮುಹಮ್ಮದ್ ಮುಝಮ್ಮಿಲ್, ಶಾಝಿಲ್ ಹಸನ್ ವಿಧ್ಯಾರ್ಥಿಗಳಿಗೆ ಕಿರು ಕಾಣಿಕೆ ನೀಡಲಾಯಿತು.

ಉಧ್ಘಾಟನೆಯನ್ನು ಪಿ.ಕೆ ಇಬ್ರಾಹೀಂ ಮುಸ್ಲಿಯಾರ್ ಉರುವಾಲಪದವು ನೆರವೇರಿಸಿದರು. ಬದ್ರೀಯಾ ಜುಮಾ ಮಸೀದಿ ಖತೀಬರಾದ ಉಸ್ತಾದ್ ಎ.ಎಸ್.ಕೌಸರಿರವರು ಪ್ರಾಸ್ತಾವಿಕವಾಗಿ ಮಾತನಾಡಿ “ಕಲಿಸುವಿಕೆಯು ಸ್ನೇಹ ಮತ್ತು ಪ್ರೋತ್ಸಾಹ ಪೂರಕವಾಗಿರಲಿ, ಸಮರ್ಥರು, ಬುದ್ಧಿವಂತರು ಜ್ಞಾನವನ್ನು ಮುಂದುವರಿಸುತ್ತಾರೆ. ವಿಧ್ಯೆಯಿರುವವರೇ ಶ್ರೇಷ್ಠರೂ, ವಿಧ್ಯೆ ಹೀನಂ ಪಶು ಸಮಾನಂ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರೀಯಾ ಜಮಾ ಮಸೀದಿ ಅಧ್ಯಕ್ಷರಾದ ಅಹ್ಮದ್ ಹಾಜಿರವರು ವಹಿಸಿದ್ದರು.

SKSBV ಅಧ್ಯಕ್ಷರಾದ ಮುಹಮ್ಮದ್ ಸ್ವಾಲಿಹ್ ಸ್ವಾಗತಿಸಿ, SKSBV ಪ್ರಧಾನ ಕಾರ್ಯದರ್ಶಿ ಸಯ್ಯದ್ ಮಹ್ದೀ ವಂದಿಸಿ, SKSBV ಕೋಶಾಧಿಕಾರಿಯಾದ ಮುಹಮ್ಮದ್ ಸಾನಿಲ್ ಹಸನ್ ನಿರೂಪಿಸಿದರು. ಗೌರವಾಧ್ಯಕ್ಷರಾದ ಸುಲೈಮಾನ್ ಬಳ್ಳೇರಿ, ಅಬ್ಬಾಸ್ ಹಾಜಿ ಬಳ್ಳೇರಿ, ಉಪಾಧ್ಯಕ್ಷರಾದ ಇಸ್ಮಾಯಿಲ್ ಡೆಂಜಿಬಾಗಿಲು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝ್ಝಾಕ್ ಬಳ್ಳೇರಿ, ಕೋಶಾಧಿಕಾರಿ ಹಾಗೂ ಮಾರ್ಗದರ್ಶಕರಾದ ಅಬ್ದುಲ್ ಮಜೀದ್ ಹಾಗೂ ರಕ್ಷಕರು ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here