ಆಟೋ ರಿಕ್ಷಾದಲ್ಲಿ ಬಂದು ಜನರೇಟರ್ ಬ್ಯಾಟರಿ ಕಳವು -ದರ್ಬೆ ಹಿತ ಅಸ್ಪತ್ರೆ ವಠಾರದಲ್ಲಿ ಹಾಡಹಗಲೇ ನಡೆದ ಘಟನೆ

0

ಪುತ್ತೂರು: ಅಟೋ ರಿಕ್ಷಾವೊಂದರಲ್ಲಿ ಬಂದು ಜನರೇಟರ್ ಬ್ಯಾಟರಿ ಕಳವು ಮಾಡಿದ ಘಟನೆ ದರ್ಬೆ ಹಿತ ಆಸ್ಪತ್ರೆಯ ವಠಾರದಲ್ಲಿ ಜೂ.೧೪ರ ಮಧ್ಯಾಹ್ನದ ವೇಳೆ ನಡೆದಿದೆ.

ಹಿತ ಅಸ್ಪತ್ರೆಯ ವಠಾರದಲ್ಲಿರುವ ಆಸ್ಪತ್ರೆಯ ವಿದ್ಯುತ್ ಪೂರೈಕೆಗೆ ಇರಿಸಲಾಗಿದ್ದ ಜನರೇಟರ್‌ವೊಂದರ ಬಳಿ ಮಧ್ಯಾಹ್ನ ಬಂದ ವ್ಯಕ್ತಿ ಜನರೇಟರ್ ಬಾಗಿಲು ತೆರೆದು ಜನರೇಟರ್ ಚಾಲು ಮಾಡಲು ಇರಿಸಲಾಗಿರುವ ಬ್ಯಾಟರಿ ಸಂಪರ್ಕವನ್ನು ಕಳಚಿದ್ದಾನೆ. ಬಳಿಕ ಆತನ ಬಳಿಗೆ ಬಂದ ಆಟೋ ರಿಕ್ಷಾದಲ್ಲಿ ಬ್ಯಾಟರಿಯನ್ನು ಕದ್ದೊಯ್ಯಲಾಗಿದೆ. ಈ ಕುರಿತು ಆಸ್ಪತ್ರೆಯ ಸಿಸಿ ಕ್ಯಾಮರದಲ್ಲಿ ಬ್ಯಾಟರಿ ಕಳವಿನ ದೃಶ್ಯ ಸರೆಯಾಗಿದೆ. ಘಟನೆ ಕುರಿತು ಆಸ್ಪತ್ರೆಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಲಾಗಿದೆ.

LEAVE A REPLY

Please enter your comment!
Please enter your name here