ದರ್ಬೆತ್ತಡ್ಕ ಸರಕಾರಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಭೆ, ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷ: ತಾರಾನಾಥ ರೈ , ಅಧ್ಯಕ್ಷ: ವಸಂತ ಶೆಟ್ಟಿ, ಕಾರ್ಯದರ್ಶಿ: ಪ್ರದೀಪ್ ಎಸ್.

ಪುತ್ತೂರು: ದರ್ಬೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆಯು ಜೂ.11 ರಂದು ಸಂಘದ ಅಧ್ಯಕ್ಷ ರಮೇಶ್ ಸುವರ್ಣರವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಂಘದ ಜೊತೆ ಕಾರ್ಯದರ್ಶಿ ಇಂದಿರಾ ಡಿ.ರವರು ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಕೆ.ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಎಸ್.ಸೇರ್ತಾಜೆ, ಉಪಾಧ್ಯಕ್ಷರುಗಳಾಗಿ ಬಾಬು ಡಿ ದರ್ಬೆತ್ತಡ್ಕ ಹಾಗೂ ವಿಠಲ ಪೂಜಾರಿ ಅಜಲಡ್ಕ, ಜೊತೆ ಕಾರ್ಯದರ್ಶಿಯಾಗಿ ಸುಧಾಕರ ಆಳ್ವ ಕೆ.ಕಲ್ಲಡ್ಕ, ಕೋಶಾಧಿಕಾರಿಗಳಾಗಿ ಬಾಬು ಪೂಜಾರಿ ದರ್ಬೆತ್ತಡ್ಕ ಹಾಗೂ ಶಾಲಾ ಮುಖ್ಯಗುರು ಯು.ಬಿ.ಚರುಂಬಿ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸತೀಶ್ ಕೊಪ್ಪಳ, ಕ್ರೀಡಾ ಕಾರ್ಯದರ್ಶಿಯಾಗಿ ರವೀಂದ್ರ ಡಿ, ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಸುವರ್ಣರವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ತಿಮ್ಮಪ್ಪ ನಾಯ್ಕ ಬೈರಮೂಲೆ, ಕಮಲಾಕ್ಷಿ ಸುರುಳಿಮೂಲೆ, ಕೊರಗಪ್ಪ ನಾಯ್ಕ ಮಾವಿಲಕೊಚ್ಚಿ, ಗುರುಪ್ರಸಾದ್ ದರ್ಬೆತ್ತಡ್ಕ, ಸದಾನಂದ ಮಣಿಯಾಣಿ ಕುರಿಂಜಮೂಲೆ, ವೆಂಕಪ್ಪ ಪೂಜಾರಿ ಬಪ್ಪಮೂಲೆ, ಚಿನ್ನಯ್ಯ ಆಚಾರ್ಯ ಮುಡಾಲ, ಚೈತ್ರಾ ಮಾವಿಲಕೊಚ್ಚಿ, ರೇಷ್ಮಾ ದರ್ಬೆತ್ತಡ್ಕ, ರಾಮಕೃಷ್ಣ ಮುಡಾಲಮೂಲೆರವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ತಾರಾನಾಥ ರೈ ಸೇರ್ತಾಜೆ, ಬಾಲಕೃಷ್ಣ ರೈ ಗೋವಿಂದಮೂಲೆ, ಮಾರ್ಗದರ್ಶಕರಾಗಿ ಬಾಲಕೃಷ್ಣ ರೈ ಸೇರ್ತಾಜೆ, ಸುಧಾಕರ ರೈ ಸೇರ್ತಾಜೆ ಆಯ್ಕೆಯಾದರು.

ನೂತನ ಸಮಿತಿಗೆ ನಿಕಟಪೂರ್ವ ಅಧ್ಯಕ್ಷ ರಮೇಶ್ ಸುವರ್ಣ ಹಾಗೂ ಗೌರವಾಧ್ಯಕ್ಷ ತಾರಾನಾಥ ರೈ ಸೇರ್ತಾಜೆ ಅಧಿಕಾರ ಹಸ್ತಾಂತರಿಸಿದರು. ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೊರಗಪ್ಪ ನಾಯ್ಕ ಮಾವಿಲಕೊಚ್ಚಿ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯ ಪ್ರದೀಪ್ ಎಸ್, ಅರಿಯಡ್ಕ ಗ್ರಾಪಂ ಸದಸ್ಯ ಸದಾನಂದ ಮಣಿಯಾಣಿ,ನೂತನ ಅಧ್ಯಕ್ಷ ವಸಂತ ಶೆಟ್ಟಿ ಕೆ ಕಲ್ಲಡ್ಕ, ಶಾಲಾ ಸಹಶಿಕ್ಷಕಿ ಶೋಭಾ ಕುಮಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ಮೃತಿ ಕೆ ಪ್ರಾರ್ಥಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರ ಡಿ ಸ್ವಾಗತಿಸಿದರು. ಸಮಿತಿ ಸದಸ್ಯ ಸದಾನಂದ ಮಣಿಯಾಣಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪದವೀಧರ ಶಿಕ್ಷಕ ರಾಜು ಎಸ್.ಟಿ, ಅತಿಥಿ ಶಿಕ್ಷಕಿ ನಳಿನಿ ಬಿ, ಗೌರವ ಶಿಕ್ಷಕಿ ಯೋಗಿನಿ ಆರ್ ಸಹಕರಿಸಿದ್ದರು.
ಚಿತ್ರ: ಸಭೆ, ತಾರಾನಾಥ ರೈ, ವಸಂತ ಶೆಟ್ಟಿ, ಪ್ರದೀಪ್ ಎಸ್

LEAVE A REPLY

Please enter your comment!
Please enter your name here