ಹಜ್ ಯಾತ್ರೆ ಕೈಗೊಳ್ಳಲಿರುವ ಬಿ.ಎಂ ಅಬೂಬಕ್ಕರ್ ಮುಸ್ಲಿಯಾರ್‌ರವರಿಗೆ ಎಸ್‌ವೈಎಸ್ ಈಸ್ಟ್ ಜಿಲ್ಲಾ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ

0

ಪುತ್ತೂರು: ತನ್ನ ಪತ್ನಿಯೊಂದಿಗೆ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಸದಸ್ಯರಾದ ಬಿ.ಎಂ ಅಬೂಬಕ್ಕರ್ ಮುಸ್ಲಿಯಾರ್ ನೀರಕಟ್ಟೆರವರನ್ನು ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಇತ್ತೀಚೆಗೆ ಉಪ್ಪಿನಂಗಡಿ ಜೋಗಿಬೆಟ್ಟುವಿನಲ್ಲಿ ನಡೆದ ಜಿಲ್ಲಾ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಗೌರವಿಸಿ ಬೀಳ್ಕೊಡಲಾಯಿತು.

ಈಸ್ಟ್ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಸಅದಿ ಮಜೂರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಂಇಯತುಲ್ ಉಲಮಾ ನಾಯಕರಾದ ಮುಹಮ್ಮದ್ ಸಅದಿ ವಳವೂರು ಹಾಗೂ ಖಾಸಿಂ ಮದನಿ ಕರಾಯ ಆಶೀರ್ವದಿಸಿದರು. ಎಸ್‌ಎಂಎ ತಂಙಳ್ ಉಜಿರೆ, ಸಲಾಂ ತಂಙಳ್ ಬೆಳ್ತಂಗಡಿ, ಸಾದಾತ್ ತಂಙಳ್ ಕರ್ವೇಲ್, ಎಸ್‌ವೈಎಸ್ ರಾಜ್ಯ ಸಾಮಾಜಿಕ ಕಾರ್ಯದರ್ಶಿ ಕಾಸಿಂ ಪದ್ಮುಂಜ, ರಾಜ್ಯ ಇಸಾಬಾ ಡೈರೆಕ್ಟರ್ ಇಕ್ಬಾಲ್ ಬಪ್ಪಳಿಗೆ, ಜಿಲ್ಲಾ ಕೋಶಾಧಿಕಾರಿ ಜಿ. ಮುಹಮ್ಮದ್ ಕುಂಞಿ, ದಅವಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಿಳಪದವು, ಸಾಮಾಜಿಕ ಕಾರ್ಯದರ್ಶಿ ಅಬ್ಬಾಸ್ ಮದನಿ, ಸಾಂತ್ವನ ಕಾರ್ಯದರ್ಶಿ ಸ್ವಾಲಿಹ್ ಮುರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು ಸ್ವಾಗತಿಸಿದರು. ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರು ವಂದಿಸಿದರು.

LEAVE A REPLY

Please enter your comment!
Please enter your name here