ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಕೊಠಡಿ ಉದ್ಘಾಟನೆ

0

ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆಯಲ್ಲಿ ಅಮೇರಿಕ ಹಾಗೂ ದುಬೈಯಲ್ಲಿ ಪ್ರಸಿದ್ದ ಉದ್ಯಮಿಯಾಗಿರುವ ಶ್ರೀಯುತ ಮೈಕಲ್ ಡಿಸೋಜ ರವರು ಕೊಡುಗೆಯಾಗಿ ನೀಡಿದ ಹತ್ತುಲಕ್ಷವೆಚ್ಚದ ಏಕ ಕಾಲದಲ್ಲಿ 56 ವಿಧ್ಯಾರ್ಥಿಗಳು ಕುಳಿತು ಕಲಿಯುವ ಎರಡು ಸುಸಜ್ಜಿತ ಕಂಪ್ಯೂಟರ್ ಕೊಠಡಿಯ ಉದ್ಘಾಟನೆಯು, ಬೆಥನಿ ಶಿಕ್ಷಣ ಮಂಡಳಿಯ ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ಭಗಿನಿ. ಶುಭ. ಬಿ. ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಂಪ್ಯೂಟರ್ ಉದ್ಘಾಟನೆಯನ್ನು ಕೊಡುಗೈ ದಾನಿಗಳಾದ ಮೈಕಲ್ ಡಿಸೋಜ ನೆರವೇರಿಸಿದರು. ಬಳಿಕ ವೇದಿಕೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮೈಕಲ್ ಡಿಸೋಜರವರನ್ನು ಶಾಲಾವತಿಯಿಂದ ಸನ್ಮಾನಿಲಾಯಿತು. ವೇದಿಕೆಯಲ್ಲಿ ಮೈಕಲ್ ಡಿಸೋಜ ಟ್ರಸ್ಟ್ ಸದಸ್ಯರಾದ ವಂದನೀಯ ಫಾದರ್ ವಲೇರಿಯನ್, ಸ್ಟೀಫನ್, ಒಸ್ವಲ್ಡ್ ರೊಡ್ರಿಗಸ್, ನಾಸಿರ್, ನೂತನ ಸಂಚಾಲಕರಾದ ಭಗಿನಿ. ಪ್ರಶಾಂತಿ ಬಿ.ಎಸ್,ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಘುನಾಥ್ ರೈ, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಭಟ್ , ಶಾಲಾ ಮುಖ್ಯ ಶಿಕ್ಷಕಿ ಭಗಿನಿ. ವೇನಿಶಾ ಬಿ. ಎಸ್ ಉಪಸ್ಥಿತರಿದ್ದರು.ಸಂಚಾಲಕರಾದ ಭಗಿನಿ. ಪ್ರಶಾಂತಿ. ಬಿ. ಎಸ್ ಸ್ವಾಗತಿಸಿ, ಭಗಿನಿ ಶುಭ. ಬಿ. ಎಸ್ ವಂದಿಸಿ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here