ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ 2022-23ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಜೂ.15 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಶಾಲೆ ಎಂದರೆ ವಿವಿಧ ರೀತಿಯ ಜವಾಬ್ದಾರಿಗಳು ಇದೆ. ಈ ಜವಾಬ್ದಾರಿಗಳನ್ನು ಸುಸೂತ್ರವಾಗಿ ನಡೆಸಲು ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ಮಕ್ಕಳು ಸಹಕರಿಸಿದರೆ ಮಾತ್ರ ಶಾಲೆ ಉತ್ತಮ ರೀತಿಯಲ್ಲಿ ನಡೆಯುತ್ತದೆ. ಎಲ್ಲರೂ ಅವರವರ ಪಾತ್ರ ಸರಿಯಾಗಿ ನಿರ್ವಹಿಸಬೇಕು. ಶಾಲೆಯ ಕೇಂದ್ರ ಬಿಂದು ಮಕ್ಕಳು, ನಮ್ಮ ಮಕ್ಕಳೇ ನಮ್ಮ ಸಂಪತ್ತು, ಉತ್ತಮ ವ್ಯಕ್ತಿತ್ವ, ಮನೋಸ್ಥೆöÊರ್ಯ, ಶ್ರೀಮಂತ ಹೃದಯವಂತಿಕೆ ವಿದ್ಯಾರ್ಥಿಗಳಲ್ಲಿ ಬೆಳೆಯಲು ನಾವೆಲ್ಲಾ ಒಟ್ಟುಗೂಡಿ ಪ್ರಯತ್ನಿಸಬೇಕು. ದೇವರ ಭಯವನ್ನು ಮಕ್ಕಳಲ್ಲಿ ನಾವು ಬೆಳೆಸಲು ಪವಿತ್ರ ಗ್ರಂಥಗಳನ್ನು ಓದಲು ಪ್ರೇರೆಪಿಸಬೇಕು. ಸಮಸ್ಯೆಗಳನ್ನು ಎದುರಿಸುವ ಆತ್ಮಸ್ಥೆöÊರ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಪ್ರಯತ್ನವನ್ನು ಪೋಷಕರು ಮಾಡಬೇಕು ಎಂದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೋಸಲಿನ್ ಲೋಬೊರವರು ಮಾತನಾಡಿ, ವಿದ್ಯಾರ್ಥಿಗಳೇ ನಮ್ಮ ಸಂಪತ್ತು. ಶಾಲೆಗೆ ಬರುವಾಗ ಅವರು ಭಕ್ತಿಭಾವದಿಂದ ಬರಬೇಕು. ಶಾಲೆ ಎಂಬುದು ಜ್ಞಾನ ದೇಗುಲವಿದ್ದಂತೆ. ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿ ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನದ ಹಾಗೂ ಹಾಜರಾತಿಯ ಬಗ್ಗೆ, ಪೋಷಕರು ಗಮನದಲ್ಲಿಡಬೇಕಾದ ಕೆಲವು ಶಾಲಾ ನಿಯಮಗಳ ಬಗ್ಗೆ ಅವರಿಗೆ ತಿಳಿ ಹೇಳಿದರು. ಮಗುವಿನ ಬೆಳವಣಿಗೆಗೆ ತಂದೆ ಹಾಗೂ ತಾಯಿ ಇಬ್ಬರ ಸಹಕಾರ ಅಗತ್ಯ. ಮಕ್ಕಳು ಮೊಬೈಲ್ ಬಳಸುವುದರಿಂದ ಆಗುವ ಅನಾಹುತಗಳ ಕುರಿತು ಪೋಷಕರಿಗೆ ಅವರು ಮನವರಿಕೆ ಮಾಡಿದರು.

ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಬಿ.ರವರು ಮಾತನಾಡಿ, ಈ ಸಂಸ್ಥೆ ಉತ್ತಮ ವಿದ್ಯಾಭ್ಯಾಸ ನೀಡುತ್ತಾ ಬಂದಿದೆ. ಮಕ್ಕಳಿಗೆ ಪ್ರಾಪಂಚಿಕ ಜ್ಞಾನವನ್ನು ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಲು ಈ ಶಾಲೆ ಪೂರ್ಣ ಸಹಕಾರ ನೀಡಿದೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಶಿಕ್ಷಕಿ ಶ್ರೀಮತಿ ಭವ್ಯರವರು 2021-22ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯ ಹಾಗೂ 2022-23ನೇ ಸಾಲಿನ ಶೈಕ್ಷಣಿಕೆ ಚಟುವಟಿಕೆಗಳ ವರದಿಯನ್ನು ವಾಚಿಸಿದರು. ಶಿಕ್ಷಕಿ ಶ್ರೀಮತಿ ರೂಪ ಡಿಕೋಸ್ಟಾರವರು ಜಮೆ ಮತ್ತು ಖರ್ಚಿನ ವಿವರಗಳನ್ನು ಮಂಡಿಸಿದರು. ರಕ್ಷಕ-ಶಿಕ್ಷಕ ಸಂಘದ ಪ್ರಸ್ತುತ ವರ್ಷದ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಯನ್ನು ನಡೆಸಲಾಯಿತು. ಶಾಲಾ ಶಿಕ್ಷಕಿ ಶ್ರೀಮತಿ ಶೈಲಾ ಮಸ್ಕರೇನ್ಹಸ್ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಲೆನಿಟಾ ಮೊರಾಸ್ ವಂದಿಸಿದರು, ಶಿಕ್ಷಕಿ ಶ್ರೀಮತಿ ರೀನಾ ರೆಬೆಲ್ಲೊ ಹಾಗೂ ಬಳಗ ಪ್ರಾರ್ಥಿಸಿದರು. ಶಿಕ್ಷಕ ಇನಾಸ್ ಗೊನ್ಸಾಲ್ವಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here