ಗೆಜ್ಜೆಗಿರಿಯ ಕಾರ್ಣಿಕ ಶಕ್ತಿಯನ್ನು ಸ್ತುತಿಸುವ ಭಾಗ್ಯದ ತುಡರ್ ಭಕ್ತಿಗೀತೆ ಲೋಕಾರ್ಪಣೆ

0

ಬಡಗನ್ನೂರುಃ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕಾರ್ಣಿಕ ಶಕ್ತಿಯನ್ನು ಸ್ತುತಿಸುವ ಭಾಗ್ಯದ ತುಡರ್ ಭಕ್ತಿಗೀತೆಯು ಸಂಕ್ರಾಂತಿಯ ದಿನ ಪುಣ್ಯ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಲೋಕಾರ್ಪಣೆ ಗೊಂಡಿತು.

 ಭದ್ರಾಕ್ಷಿ ಬೆಂಜನಪದವುರವರ ಸುಶ್ರಾವ್ಯ ಕಂಠದಿಂದ ಮೂಡಿರುವ  ಸಂಪತ್ ಪೂಜಾರಿ ಮೂಡಬಿದ್ರೆ ನಿರ್ಮಾಣದ ಹಾಡು ಹೆಚ್ಚು ಜನರು ವೀಕ್ಷಿಸುವಂತಾಗಿ ಜನಮನ್ನಣೆ ಯನ್ನು ಪಡೆಯಲಿ ಎಂದು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಕ್ಷೇತ್ರದ ಶಕ್ತಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ  ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಮೊಕ್ತೇಸರರಾದ ಶ್ರೀಧರ ಪೂಜಾರಿ, ಕ್ಷೇತ್ರದ ಪ್ರಧಾನ ಅರ್ಚಕರಾದ ಶಿವಾನಂದ ಶಾಂತಿ, ಕ್ಷೇತ್ರವಕ್ತಾರ ರಾಜೇಂದ್ರ ಚಿಲಿಂಬಿ, ಶೇಖರ್ ಬಂಗೇರ, ನಾರಾಯಣ ಮಚ್ಚಿನ, ಕ್ಷೇತ್ರದ ಮೆನೇಜರ್ ದೀಪಕ್ ಕೋಟ್ಯಾನ್ ಮತ್ತು ಸಿಬ್ಬಂದಿ ವರ್ಗ ಹಾಗೂ ರಮೇಶ್ ಬಿ. ಧರ್ಮದರ್ಶಿಗಳು ಭದ್ರಕಾಳಿ ದೇವಸ್ಥಾನ ಬೆಂಜನಪದವು, ಯಶು ಸ್ನೇಹಗಿರಿ,ಗಾಯತ್ರಿ ರಾಜೀವ್, ನಿತಿನ್ ಅಮೀನ್ ಕಲ್ಲಡ್ಕ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here