ಕೊಂಬೆಟ್ಟು ಶಾಲಾ ಮಂತ್ರಿ ಮಂಡಲ ರಚನೆ – ಇವಿಎಮ್‌ನಲ್ಲಿ ಮತ ಚಲಾವಣೆ: ವಾಸ್ತವಿ ಶಾಲಾ ನಾಯಕಿ, ಅಂಕಿತ್ ಶಾಲಾ ನಾಯಕ

0

ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ 202-23 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಪ್ರಜಾಪ್ರಭುತ್ವ ಮಾದರಿಯ ಮತದಾನದ ಮೂಲಕ ನಡೆಯಿತು. ಹತ್ತನೇ ತರಗತಿಯ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಸಂಸ್ಥೆಯ 682 ವಿದ್ಯಾರ್ಥಿಗಳು “ಇವಿಎಮ್” ಮೂಲಕ ಮತಚಲಾಯಿಸಿದರು. ಅತ್ಯಧಿಕ ಮತಗಳಿಸಿದ 10ನೇ ತರಗತಿಯ ವಾಸ್ತವಿ ಶಾಲಾ ನಾಯಕಿಯಾಗಿ ಹಾಗೂ 10ನೇ ತರಗತಿಯ ಅಂಕಿತ್ ಶಾಲಾ ನಾಯಕನಾಗಿ ಆಯ್ಕೆಗೊಂಡಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ತೇಜಸ್ ಎ.ಏ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಅಶ್ವಿತಾ ಆಯ್ಕೆಯಾಗಿದ್ದಾರೆ. ಸಾಂಸ್ಕೃತಿಕ ಖಾತೆ ಮಂತ್ರಿ ಯಾಗಿ ಜೀವನ್ ಮತ್ತು ಭವಿತಾ, ಆಹಾರ ಖಾತೆ ಸುಶೀಲ್ ಮತ್ತು ರಕ್ಷಿತಾ , ಕ್ರೀಡಾ ಖಾತೆ ಹವಿನ್ ಮತ್ತು ಮಮತಾ, ಶಿಸ್ತು ಪಾಲನ ಖಾತೆ ಪ್ರದೀಪ್ ಮತ್ತು ಮೋಕ್ಷಿತ, ತೋಟಗಾರಿಕಾ ಖಾತೆ ಜೋಸ್ಟಮ್ ಮತ್ತು ಸನ್ವಿತ ವಾರ್ತಾ ಖಾತೆ ತೇಜಸ್ ಮತ್ತು ಪ್ರಜ್ಞಾ, ನೀರಾವರಿ ಖಾತೆ ನಿರಂಜನ್ ಮತ್ತು ರಿತಿಕಾ, ಸ್ಪೀಕರ್ ಶ್ರೇಯ ಕಾರ್ಯದರ್ಶಿ ಕನ್ನಿಕಾ ಗೌರಿ, ಆರೋಗ್ಯ ಖಾತೆ ದೀಪಕ್ ಮತ್ತು ನಿರೀಕ್ಷಾ, ಸ್ವಚ್ಛತಾ ಖಾತೆ ಅಶ್ವಥ್ ಮತ್ತು ಶಾಹಿದಾರಿದಾ ಆಯ್ಕೆಯಾದರು. ಚುನಾವಣಾಧಿಕಾರಿ ಗಳಾಗಿ ಶಿಕ್ಷಕಿ ಶ್ರೀಮತಿ ಮರ್ಸಿ ಮಮತಾ ಮೋನಿಸ್ ಮತ್ತು ಜಾನ್ ವಾಲ್ಡರ್ ಸಹಕರಿಸಿದರು. ಉಪಪ್ರಾಂಶುಪಾಲರಾದ ವಸಂತ ಮೂಲ್ಯರವರು ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕ ವರ್ಗ ಸಹಕರಿಸಿದರು.

LEAVE A REPLY

Please enter your comment!
Please enter your name here