ಬಡಗನ್ನೂರು: 45 ನೇ ಸೀನಿಯರ್ ರಾಷ್ಟ್ರೀಯ ತ್ರೋಬಾಲ್ ತರಬೇತಿ ಶಿಬಿರ

0

ಬಡಗನ್ನೂರು: ತ್ರೋಬಾಲ್ ಅಸೋಸಿಯೇಶನ್ ಆಫ್ ಕರ್ನಾಟಕ ರಾಜ್ಯ ತಂಡದ 45 ನೇ ಸೀನಿಯರ್ ರಾಷ್ಟ್ರೀಯ ತ್ರೋಬಾಲ್ ತರಬೇತಿ ಶಿಬಿರವು ಜೂ 16 ರಂದು ಪಟ್ಟೆ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ  ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ    ವೇಣುಗೋಪಾಲ್ ಪಿ ರವರ  ಅಧ್ಯಕ್ಷತೆಯಲ್ಲಿ ನಡೆಯಿತು. ವಿದ್ಯಾಸಂಸ್ಥೆಗಳ ಸಂಚಾಲಕ ಪಿ.ನಾರಾಯಣ ಭಟ್‌, ಬೀರ್ನೋಡಿ ಉದ್ಘಾಟನೆ ನೆರವೇರಿಸಿ  ಶುಭ  ಹಾರೈಸಿದರು .

ಮುಖ್ಯ ಅತಿಥಿಗಳಾಗಿ   ಪುತ್ತೂರು ಜನ್ಮ ಫೌಂಡೇಶನ್ (ರಿ) ನ ಅಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವು, ಮಾತನಾಡಿ  ಪುತ್ತೂರು ಜನ್ಮ ಫೌಂಡೇಶನ್‌ನ ಅಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವು, ಗ್ರಾಮೀಣ ಕ್ರೀಡಾಪಟುಗಳನ್ನು ಬೆಳೆಸುವ ನಿಟ್ಟಿನಲ್ಲಿ ಅರ್ಥಪೂರ್ಣ ಶಿಬಿರ ಇದು. ಆ ಮೂಲಕ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಉದಯವಾಗಬೇಕು ಎಂದರು.

ವಿದ್ಯಾಮಾತಾ ಅಕಾಡೆಮಿ ಆಡಳಿತ ನಿರ್ದೇಶಕ ಭಾಗ್ಯಶ್ ರೈ ಮಾತನಾಡಿ, ಕ್ರೀಡೆಯು ದೈಹಿಕ ಬಲದೊಂದಿಗೆ ಮಾನಸಿಕ ಶಕ್ತಿ, ಆತ್ಮಸ್ಥೈರ್ಯ ತುಂಬುತ್ತದೆ, ಪಟ್ಟೆ ವಿದ್ಯಾಸಂಸ್ಥೆಯು ಹಲವು ವರ್ಷಗಳಿಂದ ಶಿಕ್ಷಣದೊಂದಿಗೆ ಕ್ರೀಡೆಗೆ ಸಂಬಂಧಪಟ್ಟಂತೆ ಸಾಕಷ್ಟು ಸಾಧನೆ ಮಾಡಿ ಗುರುತಿಸಿಕೊಂಡಿದೆ. ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಕ್ರೀಡಾಪಟುಗಳಿಗೆ ವಿವಿಧ ಇಲಾಖೆ, ಹುದ್ದೆಗಳಲ್ಲಿ ಕ್ರೀಡಾ ಕೋಟದ ಅವಕಾಶ ಲಭಿಸುತ್ತಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರ, ಮಾತನಾಡಿ  ಪಟ್ಟೆ ವಿದ್ಯಾಸಂಸ್ಥೆಯು ಮಕ್ಕಳಿಗೆ  ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಇಲ್ಲಿನ ಮಕ್ಕಳು ಕ್ರೀಡಾ ರಂಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರುಗಲಿಸುವಲ್ಲಿ ಇಲ್ಲಿನ ಅಡಳಿತ ಮಂಡಳಿ ಸಹಕಾರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಸಾರ್ ರವರ ಶ್ರಮದ ಫಲ. ಉತ್ತಮ ತರಭೇತಿ  ಪಡೆದು ರಾಷ್ಟ್ರದ ಪಂದ್ಯಾಟದಲ್ಲಿ ಹೆಸರು ಬರುವಂತಾಗಲಿ ಎಂದು ಹಾರೈಸಿದರು.
ನಿವೃತ್ತ ಮುಖ್ಯ ಶಿಕ್ಷಕ ವೈ ಕೃಷ್ಣ ನಾಯ್ಕ ಪಟ್ಟೆ ಮಾತನಾಡಿ ಶಿಕ್ಷಣ ಒಂದು ಶಕ್ತಿ, ಮನುಷ್ಯ ಅರೋಗ್ಯವಂತಾರಾಗಿದ್ದಾಗ ಮಾತ್ರ ಯಾವುದೇ ಕೆಲಸವನ್ನು ಧೈರ್ಯದಿಂದ ಎದುರಿಸಲು ಸಾಧ್ಯ ಈ ನಿಟ್ಟಿನಲ್ಲಿ ಮಕ್ಕಳ  ಕ್ರೀಡೆ ಪ್ರೋತ್ಸಾಹ ನೀಡಬೇಕು. ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಬಯಸುತ್ತೇವೆ  ಕ್ರೀಡಾ ತರಬೇತು ಪಡೆದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.

 ಅರಿಯಡ್ಕ ಅರಣ್ಯ ಸಮಿತಿ ಅಧ್ಯಕ್ಷ ಲೋಕೇಶ್ ರೈ, ಅಮೈ  ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ಕೊರತೆ ಇದೆ,ಇದರಿಂದ ಅದೆಷ್ಟೋ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕುವಲ್ಲಿ ವಂಚಿತರಾಗಿದ್ದಾರೆ  ಗ್ರಾಮ ಮಟ್ಟದಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ಕೇಂದ್ರ ಮಾಡುವ ಬಗ್ಗೆ ಚಿಂತನೆ ಮಾಡಬೇಕಾಗಿದೆ  ಪಟ್ಟೆ ವಿದ್ಯಾಸಂಸ್ಥೆಗಳ ಅಡಳತ ಮಂಡಳಿ ಹಾಗೂ ಅಧ್ಯಾಪಕ ವೃಂದದವರು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ ಅವರು ರಾಷ್ಟ್ರ ಮಟ್ಟದ ಕ್ರೀಡಾ ಕೂಟಕ್ಕೆ ಬಾಗವಹಿಸುವ ಸಂದರ್ಭದಲ್ಲಿ ಕ್ರೀಡಾ ಪಟುಗಳಿಗೆ ಟಿ ಶರ್ಟ್ ನೀಡುವ ಬಗ್ಗೆ ಬರವಸೆ ವ್ಯಕ್ತಪಡಿಸಿದರು.

 

ಕೆಯ್ಯೂರು ಕೆ.ಪಿಎಸ್ ಮುಖ್ಯ ಶಿಕ್ಷಕ ಬಾಬು  ಎಸ್ ಮಾತನಾಡಿ , ಪಟ್ಟೆ ವಿದ್ಯಾಸಂಸ್ಥೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಹರಡಿದೆ.ಸುಮಾರು 40 ವರ್ಷಗಳಿಂದ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ತರಭೇತಿ ನೀಡಿಪ್ರೋತ್ಸಾಹಿಸಿ ಸಮಾಜಕ್ಕೆ ನೀಡಿದೆ. ಸಂಸ್ಥೆಯು ಮಕ್ಕಳಿಗೆ ಅತ್ಮ ಸ್ಥೈರ್ಯ ಮಾಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

 

ವೇದಿಕೆಯಲ್ಲಿಪ್ರಗತಿ ಪರ ಕೃಷಿಕ  ಹರೀಶ್ ರೈ ದೇರ್ಲ ಉಪಸ್ಥಿತರಿದ್ದರು. ಸಭೆಯಲ್ಲಿ  ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಅಯ್ಕೆಯಾದ ಕ್ರೀಡಾಪಟುಗಳು  ಹಾಗೂ ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಭಟ್ ಸ್ವಾಗತಿಸಿದರು, ದೈಹಿಕ ಶಿಕ್ಷಣ ಶಿಕ್ಷಣ ಮೋನಪ್ಪ ಎಂ ಸ್ವಾಗತಿಸಿದರು.ಸಹ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ, ಹಾಗೂ ಉಪ್ಪಿನಂಗಡಿ ಪ್ರೌಢಶಾಲಾ ಶಿಕ್ಷಕ ವಿಜೇತ್  ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಪಟುಗಳಾದ ದೀಕ್ಷಿತ ಮತ್ತು ಅನುಷಾ ಪ್ರಾರ್ಥಿಸಿದರು.
ಪುತ್ತೂರು ತಾಲೂಕಿನಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ತ್ರೋಬಾಲ್ ತರಬೇತಿ ಶಿಬಿರವು ಗ್ರಾಮೀಣ ಭಾಗದ ಪಟ್ಟೆವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. 15 ಸದಸ್ಯರ  ಭಾರತ ತ್ರೋಬಾಲ್ ತಂಡದ ಸದಸ್ಯೆ ದೈ.ಶಿ. ಶಿಕ್ಷಕಿ ಪೂರ್ಣಿಮಾ ಹಾಗೂ ದೈ.ಶಿ. ಶಿಕ್ಷಕ ವಿಜೇತ್ ಮಾರ್ಗದರ್ಶನದಲ್ಲಿ ಶಿಬಿರ ನಡೆಯುತ್ತಿದ್ದು, ರಾಜ್ಯ ಮಟ್ಟದ ತ್ರೋಬಾಲ್ ತರಬೇತುದಾರ ಪಟ್ಟೆ ವಿದ್ಯಾಸಂಸ್ಥೆಯ ದೈ.ಶಿ. ಶಿಕ್ಷಕ ಎಂ. ಮೋನಪ್ಪ ಶಿಬಿರದ ನೇತೃತ್ವ ವಹಿಸಿದ್ದಾರೆ. ಪಂದ್ಯಾಟವು ರಾಜಸ್ಥಾನದಲ್ಲಿ ನಡೆಯಲಿದೆ

LEAVE A REPLY

Please enter your comment!
Please enter your name here