ಸುಳ್ಯ ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ಅನುದಾನ ಮಂಜೂರು -ಸಚಿವ ಎಸ್.ಅಂಗಾರ : ಪಾಲ್ತಾಡಿ-ಮಾಡಾವು-ಸಿದ್ದಮೂಲೆ ರಸ್ತೆಗೆ 40 ಲಕ್ಷ ,ಬಲ್ಯ ದೇರಾಜೆ ರಸ್ತೆಗೆ 25 ಲಕ್ಷ ,ಕುಟ್ರುಪ್ಪಾಡಿ ಕಾರ್ಕಳ ರಸ್ತೆಗೆ 15 ಲಕ್ಷ,ಪೆರಾಬೆಯ ಇಡಾಳ ಕುಂಟ್ಯಾನ ರಸ್ತೆಗೆ 30 ಲಕ್ಷ ಅನುದಾನ ಮಂಜೂರು

0


ಸವಣೂರು : 2022-23 ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ರಡಿ ಸುಳ್ಯ ವಿಧಾನಸಭಾ ಕ್ಷೇತ್ರದ ಲೋಕೋಪಯೋಗಿ ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒಟ್ಟು 50 ಕೋಟಿ ಅನುದಾನ ಮಂಜೂರಾಗಿದೆ.
ಇದರಲ್ಲಿ 45 ಕೋಟಿ ರೂ ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಅನುದಾನದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಹಾಗು ಕಡಬ ತಾಲೂಕಿನಲ್ಲಿ ಒಟ್ಟು 184 ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. 5 ಕೋಟಿ ರೂ ವೆಚ್ಚದಲ್ಲಿ ಸುಳ್ಯ ಕ್ಷೇತ್ರದ 9 ಲೋಕೋಪಯೋಗಿ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು  ತಿಳಿಸಿದ್ದಾರೆ.
ಅಭಿವೃದ್ಧಿಯಾಗುವ ಲೋಕೋಪಯೋಗಿ ರಸ್ತೆಗಳು:
ಕಡಬ ತಾಲೂಕಿನ  ಪಾಲ್ತಾಡಿ-ಮಾಡಾವು -ಸಿದ್ಧಮೂಲೆ ರಸ್ತೆಗೆ 40 ಲಕ್ಷ, ಬಲ್ಯ ಗ್ರಾಮದ ದೇರಾಜೆ ರಸ್ತೆಗೆ 25 ಲಕ್ಷ, ಕುಟ್ರಪ್ಪಾಡಿ ಗ್ರಾಮದ ಕಾರ್ಕಳ ರಸ್ತೆಗೆ 15 ಲಕ್ಷ, ಪೆರಾಬೆ ಗ್ರಾಮದ ಇಡಾಳ ಕುಂಟ್ಯಾನ ರಸ್ತೆಗೆ 30 ಲಕ್ಷ, ಸುಳ್ಯ ತಾಲೂಕಿನ ಆಲೆಟ್ಟಿ-ಬಡ್ಡಡ್ಕ ರಸ್ತೆಗೆ 1.40 ಕೋಟಿ, ಅರಂತೋಡು- ಎಲಿಮಲೆ ರಸ್ತೆಗೆ 1 ಕೋಟಿ, ಮಲೆಯಾಳ ಐನೆಕಿದು ಹರಿಹರ ರಸ್ತೆಗೆ 50 ಲಕ್ಷ, ಹರಿಹರ-ಬಾಳುಗೋಡು ರಸ್ತೆಗೆ 50 ಲಕ್ಷ, ತೊಡಿಕಾನ ಗ್ರಾಮದ ಅಡ್ಯಡ್ಕ-ಚಾಂಬಾಡು ರಸ್ತೆಗೆ 50 ಲಕ್ಷ  ಅನುದಾನ ಮೀಸಲಿರಿಸಲಾಗಿದೆ.
ಗ್ರಾಮೀಣ ರಸ್ತೆ ವಿಭಾಗದಲ್ಲಿ ಸುಳ್ಯ ತಾಲೂಕಿನಲ್ಲಿ 24.35 ಕೋಟಿ ವೆಚ್ಚದಲ್ಲಿ 97 ರಸ್ತೆಗಳ ಅಭಿವೃದ್ಧಿ ಮತ್ತು ಕಡಬ ತಾಲೂಕಿನಲ್ಲಿ 20.65 ಕೋಟಿ ವೆಚ್ಚದಲ್ಲಿ 87 ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. 
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ. ಲೋಕೋಪಯೋಗಿ ರಸ್ತೆಗಳ ಅಭಿವೃದ್ಧಿಗೆ ಸದ್ಯದಲ್ಲಿಯೇ ಆಡಳಿತಾತ್ಮಕ ಮಂಜೂರಾತಿ ದೊರಕಲಿದೆ ಎಂದು ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here