ಮುಖ್ಯಮಂತ್ರಿ ಹಂಸಿಕಾ, ಉಪ ಮುಖ್ಯಮಂತ್ರಿ ಶ್ರೇಯ
ಕಾಣಿಯೂರು: ನಾಣಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2022-23ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು. ವಿದ್ಯಾರ್ಥಿಗಳೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಹಂಸಿಕಾ ಮತ್ತು ಉಪ ಮುಖ್ಯಮಂತ್ರಿಯಾಗಿ 6ನೇ ತರಗತಿಯ ಶ್ರೇಯರವರು ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಶಾಲಾ ಮುಖ್ಯಗುರು ಪದ್ಮಯ್ಯ ಗೌಡ ಕಾರ್ಯನಿರ್ವಹಿಸಿದರು. ಮತಗಟ್ಟೆ ಅಧಿಕಾರಿಗಳಾಗಿ ಸಹ ಶಿಕ್ಷಕಿ ಲೀನಾ ಲಸ್ರಾದೋ, ವಾಣಿ, ಶ್ವೇತಾ, ಪ್ರೀಯಾ ಹಾಗೂ ಸುರೇಖಾರವರು ಕಾರ್ಯನಿರ್ವಹಿಸಿದರು. ಆಯ್ಕೆಯಾದ ನೂತನ ಶಾಲಾ ಮಂತ್ರಿ ಮಂಡಲದ ಸದಸ್ಯರಿಗೆ ಮುಖ್ಯಗುರು ಪದ್ಮಯ್ಯ ಗೌಡ ಪ್ರಮಾಣ ವಚನ ಬೋಧಿಸಿದರು.