ನಿವೃತ್ತ ಎಸ್.ಬಿ.ಎಂ ಬ್ಯಾಂಕ್ ಉದ್ಯೋಗಿ ಜ್ಯುಲಿಯಾನಾ ಡಿ’ಸೋಜ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ದಿ.ಇಗ್ನೇಶಿಯಸ್ ಡಿ’ಸೋಜ ಹಾಗೂ ದಿ.ಅನ್ನಾ ಪಿರೇರಾರವರ ಪುತ್ರಿ ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲಾ ಬಳಿಯ ನಿವಾಸಿ ಜ್ಯುಲಿಯಾನಾ ಡಿ’ಸೋಜ(71ವ.)ರವರು ಅಲ್ಪಕಾಲದ ಅಸೌಖ್ಯದಿಂದ ಜೂ.17 ರಂದು ಪ್ರಸ್ತುತ ವಾಸವಿದ್ದ ಸುರತ್ಕಲ್ ಕಾನ ಸುಪ್ರೀಮ್ ಲೇಔಟ್ ನ ‘ಮಡೋನ್ನಾ’ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

ಮೃತ ಜ್ಯುಲಿಯಾನಾ ಡಿ’ಸೋಜರವರು ಮೊದಲಿಗೆ ಮಂಗಳೂರಿನ ಉರ್ವಾ ಲೇಡಿಹಿಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿಯನ್ನು ಆರಂಭಿಸಿದ್ದರು. ಬಳಿಕ ಅವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ ನಲ್ಲಿ ಸೇವೆಗೆ ಸೇರಿ ನಿವೃತ್ತರಾಗಿದ್ದರು. ಮೃತ ಜ್ಯುಲಿಯಾನಾ ಡಿ’ಸೋಜರವರು ನಿವೃತ್ತಿ ಬಳಿಕ ಕೆಲವು ವರ್ಷಗಳಿಂದ ಪತಿ, ಪುತ್ರ, ಸೊಸೆಯೊಂದಿಗೆ ಸುರತ್ಕಲ್ ಕಾನದಲ್ಲಿ ನೆಲೆಸಿದ್ದರು. ಮೃತರು ಪತಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ನಿವೃತ್ತ ಉದ್ಯೋಗಿ ಫ್ರಾನ್ಸಿಸ್ ವರ್ಗೀಸ್, ಪುತ್ರ ಮಂಗಳೂರು ಹಂಪನಕಟ್ಟೆ ಇಂಡಿಯನ್ ಬ್ಯಾಂಕ್ ಉದ್ಯೋಗಿ ಜೇಸನ್ ವರ್ಗೀಸ್, ಸೊಸೆ ಫಾ.ಮುಲ್ಲರ್ಸ್ ಆಸ್ಪತ್ರೆಯಲ್ಲಿ ಮೆಡಿಕಲ್ ಕೌನ್ಸಿಲರ್ ಆಗಿರುವ ವಂದನಾ ಕರ್ವಾಲೊರವರನ್ನು ಅಗಲಿದ್ದಾರೆ.

ನಾಳೆ ಅಂತ್ಯಕ್ರಿಯೆ.. ಮೃತ ಜ್ಯುಲಿಯಾನಾ ಡಿ’ಸೋಜರವರ ಅಂತಿಮ ಕ್ರಿಯೆಯನ್ನು ಅವರ ಇಚ್ಛೆಯಂತೆ ಸುರತ್ಕಲ್ ಸೆಕ್ರೇಡ್ ಹಾರ್ಟ್ ಚರ್ಚ್ ನಲ್ಲಿ ‌ಜೂ.19 ರಂದು ಅಪರಾಹ್ನ 3.30 ಗಂಟೆಗೆ ನೆರವೇರಿಸಲಾಗುತ್ತದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.