ಜೂ.26: ವಿದ್ಯಾಮಾತಾ ಅಕಾಡೆಮಿಯಲ್ಲಿ ಭಾರತೀಯ ಸೇನೆಗಳ ನೇಮಕಾತಿಯ ಉಚಿತ ಮಾಹಿತಿ ಕಾರ್ಯಾಗಾರ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೆಸರಾಗಿರುವ ಎಪಿಎಂಸಿ ರಸ್ತೆಯ ಹಿಂದೂಸ್ತಾನ್ ಕಾಂಪ್ಲೆಕ್ಸ್‌ನಲ್ಲಿರುವ ವಿದ್ಯಾಮಾತಾ ಅಕಾಡೆಮಿ ಹಾಗೂ ದ.ಕ ಜಿಲ್ಲಾ ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ಭಾರತೀಯ ಸೇನೆಗಳಾದ ಭೂಸೇನೆ, ವಾಯುಸೇನೆ, ನೌಕಾಸೇನೆಗಳ ವಿವಿಧ ಸ್ಥರಗಳ ನೇಮಕಾತಿಗಳ ಕುರಿತು ನಿವೃತ್ತ ಮೇಜರ್ ಜನರಲ್, ನಿವೃತ್ತ ಏರ್‌ವೈಸ್ ಮಾರ್ಷಲ್, ಕರ್ನಲ್‌ರವರ ಮುಖಾಂತರ ಉಚಿತ ಮಾಹಿತಿ ಕಾರ್ಯಾಗಾರವು ಜೂ.26ರಂದು ವಿದ್ಯಾಮಾತ ಅಕಾಡೆಮಿಯಲ್ಲಿ ನಡೆಯಲಿದೆ ಎಂದು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ತಿಳಿಸಿದರು.


ವಿದ್ಯಾಮಾತಾ ಅಕಾಡೆಮಿಯ ಕಚೇರಿಯಲ್ಲಿ ಜೂ.17ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾವಂತ ಯುವ ಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ೨೦೧೭ರಲ್ಲಿ ಉದ್ಯೋಗ ಮೇಳ ನಡೆಸಿ ಯಶಸ್ವಿಯಾಗಿದೆ. ಕಳೆದ ಎರಡು ವರ್ಷಗಳಿಂದ ಖಾಸಗಿ ಉದ್ಯೋಗಗಳ ಜೊತೆಗೆ ಜನತೆಗೆ ಸರಕಾರಿ ಉದ್ಯೋಗ ಒದಗಿಸಬೇಕೆಂಬ ದೂರದೃಷ್ಠಿಯಿಂದ ಉತ್ತಮ ರೀತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಿ ಉದ್ಯೋಗ ಲಭಿಸುವಲ್ಲಿ ಯಶಸ್ವಿಯಾಗಿದ್ದು ಸಂಸ್ಥೆಯಲ್ಲಿ ತರಬೇತಿ ಪಡೆದ 12 ಮಂದಿ ಸರಕಾರಿ ಉದ್ಯೋಗಕ್ಕೆ ನೇಮಕವಾಗಿದ್ದಾರೆ. ತರಬೇತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡುವ ಉದ್ದೇಶದಿಂದ ಸೇನೆಗೆ ಸೇರ ಬಯಸುವ ಆಸಕ್ತರಿಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ನಿವೃತ್ತ ಮೇಜರ್ ಜನರಲ್ ಎಮ್.ವಿ ಭಟ್ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ನಿವೃತ್ತ ಏರ್‌ವೈಸ್ ಮಾರ್ಷಲ್ ಕೆ.ರಮೇಶ್ ಕಾರ್ಣಿಕ್, ನಿವೃತ್ತ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಮತ್ತು ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಸಂಪನ್ಮೂಲಗಳಾಗಿ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಯಲ್ಲಿರುವ ವಿವಿಧ ಸ್ತರಗಳ ನೇಮಕಾತಿಗಳ ಕುರಿತು ಮಾಹಿತಿ ನೀಡಲಿದ್ದಾರೆ. ಜೊತೆಗೆ ಎಮ್.ಎಸ್ ಪದವೀದರರಾಗಿ ಅಮೇರಿಕಾದಲ್ಲಿ ಉನ್ನತ ಉದ್ಯೋಗವನ್ನು ತ್ಯಜಿಸಿ ನೂತನವಾಗಿ ಭಾರತೀಯ ಸೇನಾ ಲೆಫ್ಟಿನೆಂಟ್‌ಆಗಿ ಆಯ್ಕೆಯಾಗಿರುವ ಬೆಳ್ತಂಗಡಿಯ ಸಾತ್ವಿಕ್ ಕುಳಮರ್ವರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡು ವಿಶೇಷ ಸಂವಾದ ನಡೆಸಲಿದ್ದಾರೆ. ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ರಾಮಚಂದ್ರ ಪುಚ್ಚೇರಿ, ಕಾರ್ಯದರ್ಶಿ ನಾಗಪ್ಪ ಗೌಡ, ಮಾಹಿತಿ ಕಾರ್ಯಾಗಾರ ಸಂಯೋಜಕ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಹಾಗೂ ಸಹ ಸಂಯೋಜಕ ಸಂದೇಶ್ ರೈ ಕಾರ್ಯಕ್ರಮದಲ್ಲಿ ಭಾಗವಹಿಸಿಲಿದ್ದಾರೆ ಎಂದರು.

ಸೇನೆಗೆ ನೇಮಕ ಮಾಡುವ ಕೇಂದ್ರ ಸರಕಾರದ ನೂತನ ಯೋಜನೆಯಾದ ಅಗ್ನಿಪಥದಲ್ಲಿ ನೇರವಾಗಿ ನೇಮಕ ಮಾಡಿಕೊಳ್ಳುವುದಿಲ್ಲ. ಸೇನೆಗೆ ಆವಶ್ಯಕವಾದ ದೈಹಿಕ ಕ್ಷಮತೆ, ಮಾನಸಿಕ ಸಾಮರ್ಥ್ಯ ಮೊದಲಾದ ನಿಯಮಗಳನ್ನು ಪಾಲಿಸಿಕೊಂಡು ನೇಮಕ ಮಾಡಲಿದ್ದಾರೆ. ಇವುಗಳನ್ನು ಯುವ ಜನತೆ ಮನದಟ್ಟುಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಅಡ್ಡದಾರಿಗಳ ಮೂಲಕ ನೇಮಕ ನಡೆಯುವುದಿಲ್ಲ. ಅರ್ಹತೆ ಪಡೆದವರು ಮಾತ್ರ ನೇಮಕವಾಗುತ್ತಾರೆ. ಇದಕ್ಕೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳೇ ಸಾಕ್ಷಿ. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬ್ಯಾಂಕಿಂಗ್, ಕೆಎಂಎಫ್ ಸೇರಿದಂತೆ ಹಲವು ಇಲಾಖೆಗಳಿಗೆ ವಿದ್ಯಾಮಾತ ಅಕಾಡೆಮಿಯಲ್ಲಿ ತರಬೇತಿ ಪಡೆದ ಪರೀಕ್ಷೆ ಬರೆದ ವಿದ್ಯಾರ್ಥಿಗಳು ನೇಮಕಗೊಂಡಿರುತ್ತಾರೆ ಎಂದು ಅವರು ತಿಳಿಸಿದರು.

ಪೋಷಕರಿಗೂ ಅವಕಾಶ:
ತರಬೇತಿಯು ಮೂರು ಹಂತದಲ್ಲಿ ನಡೆಯಲಿದ್ದು ಪ್ರಥಮವಾಗಿ ಮಾಹಿತಿ ಕಾರ್ಯಗಾರ ಬಳಿಕ ಕೌನ್ಸೆಲಿಂಗ್ ಆದ ನಂತರ ಅರ್ಹತೆ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ಕಾರ್ಯಗಾರವು ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧.೩೦ರ ತನಕ ನಡೆಯಲಿದೆ. ಕಾರ್ಯಾಗಾರವು ಸಂಪೂರ್ಣ ಉಚಿತವಾಗಿದೆ. ಆಸಕ್ತರು ಜೂ.೨೪ರ ಒಳಗಾಗಿ 8590773486/9148935808 ನಂಬರ್‌ಗೆ ಕರೆಮಾಡಿ ನೋಂದಾಯಿಸಿಕೊಳ್ಳಬಹುದು. ಈ ಕಾರ್ಯಾಗಾರವು ಎಲ್ಲರಿಗೂ ಮುಕ್ತವಾಗಿದ್ದು ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪೋಷಕರಿಗೂ ಭಾಗವಹಿಸಲು ಅವಕಾಶವಿದೆ ಎಂದು ಭಾಗ್ಯೇಶ್ ರೈ ತಿಳಿಸಿದರು.
ವಿದ್ಯಾಮಾತಾ ಅಕಾಡೆಮಿಯ ತರಬೇತುದಾರ ಚಂದ್ರಶೇಖರ, ಸಿಬಂದಿಗಳಾದ ಮಿಲನ ಹಾಗೂ ಹರ್ಷಿತಾ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.