ಶಾಖೆಪುರ: ಯೋಗ ದಿನಾಚರಣೆ-ಯೋಗಾಭ್ಯಾಸ

0

ಹಿರೆಬಂಡಾಡಿ: ಶಾಖೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗಾಭ್ಯಾಸ ಜೂ.17ರಂದು ಸಂಜೀವಿನಿ ಸಭಾಭವನದಲ್ಲಿ ನಡೆಯಿತು.

 

ಸಂಘದ ಕಾರ್ಯದರ್ಶಿ ಅನಿತಾ ಸರೋಳಿ ಯೋಗ ನಡೆಸಿಕೊಟ್ಟರು. ಸಂಘದ ಅಧ್ಯಕ್ಷೆ ರಶ್ಮಿ ಖಂಡಿಗ, ನಿರ್ದೇಶಕರಾದ ಕೋಮಲ ಸರೋಳಿ, ಲೀಲಾವತಿ ಸರೋಳಿ, ನಳಿನಿ ಕೆದಗೆದಡಿ, ಜಾನಕಿ ಕೆದಗೆದಡಿ, ಜಾನಕಿ ಲಾವತ್ತಡಿ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಅನಿತಾ ಸರೋಳಿ ಸ್ವಾಗತಿಸಿ, ವಂದಿಸಿದರು. ಹಾಲು ಪರೀಕ್ಷಕಿ ಮಮತ ನೆಹರುತೋಟ ಸಹಕರಿಸಿದರು.

LEAVE A REPLY

Please enter your comment!
Please enter your name here