ಐ.ಸಿ.ಎ.ಆರ್ –  ಡಿಸಿಆರ್ ರಿಸರ್ಚ್ ಅಡ್ವೈಸರೀ ಕಮಿಟಿ ಸಭೆ

0

  • ಗೇರು ಬೆಳೆಗೂ ಫಸಲ್ ಭಿಮಾ ಯೋಜನೆ ಅನ್ವಯವಾಗಬೇಕು – ಕಡಮಜಲು ಹಕ್ಕೊತ್ತಾಯ
ಪುತ್ತೂರು: ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ  ರಿಸರ್ಚ್ ಅಡ್ವೈಸರೀ ಕಮಿಟಿ ಸಭೆಯು ಸಮಿತಿಯ ಅಧ್ಯಕ್ಷರಾದ ಡಾ. ಎನ್. ಕೆ. ಕೃಷ್ಣಕುಮಾರ್ ರವರ ಅಧ್ಯಕ್ಷತೆಯಲ್ಲಿ ಜೂ. 7 ರಂದು ಜರಗಿತು. ಸದ್ರಿ ಸಭೆಯಲ್ಲಿ ಭಾಗವಹಿಸಿದ ಅಖಿಲ ಭಾರತ ಗೇರು ಬೆಳೆಗಾರರ ಸಂಘದ ಕೋಶಾಧಿಕಾರಿ ಪ್ರಕೃತ ಡಿ.ಸಿ.ಆರ್ ಐ.ಸಿ.ಎ.ಆರ್ ಇದರ ಐಎಂಸಿ ಮೆಂಬರ್ ಕಡಮಜಲು ಸುಭಾಸ್ ರೈಯವರು ಗೇರು ಬೆಳೆಗಾರರ ವಿಚಾರವನ್ನು ಮಂಡಿಸಿ ಗೇರು ಬೆಳೆಗಾರರು ತುಂಬಾ ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಪ್ರಕೃತಿಯ ಅಸಮತೋಲನ, ಧಾರಣೆ ಕುಸಿತದಿಂದಾಗಿ ಕಂಗಾಲಾಗಿದ್ದಾರೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮನವಿಯನ್ನು ಸಲ್ಲಿಸುವ ಮೂಲಕ ವಿಷಯವನ್ನು ತೀವ್ರವಾಗಿ ಗಮನಕ್ಕೆ ತಂದು ಗೇರುಬೆಳೆಗಾರರ ಹಿತ ರಕ್ಷಣೆಯನ್ನು ಮಾಡಬೇಕಾಗಿದೆ. ಗೇರು ಬೆಳೆಗಾರರಿಗೂ ಪ್ರಧಾನಮಂತ್ರಿಯವರ ಫಸಲ್ ಭಿಮಾ ಯೋಜನೆ, ಬೆಂಬಲ ಬೆಲೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು. ಈಗಾಗಲೇ ಆಮದು ಸುಂಕವನ್ನು ಸಂಪೂರ್ಣ ಕಡಿತಗೊಳಿಸಿರುವುದರಿಂದ ಭಾರತದಲ್ಲಿ ಗೇರುಬೆಳೆಗೆ ಧಾರಣೆ ಕುಸಿತವಾಗಿದೆ. ಕೂಡಲೇ ಆಮದು ಸುಂಕವನ್ನು ಹಾಕುವುದರ ಮೂಲಕ ಭಾರತಕ್ಕೆ ಆಮದು ಆಗುವುದನ್ನು ಕಡಿತಗೊಳಿಸಿ ದೇಶೀಯ ಗೇರುಬೆಳೆಗೆ ಉತ್ತಮ ಬೆಲೆ ಸಿಗುವಂತೆ ಸರಕಾರ ಪ್ರಯತ್ನಿಸಬೇಕಾಗಿದೆ ಎಂದು ಕಡಮಜಲು ಸುಭಾಸ್ ರೈ ಯವರು ಹಕ್ಕೊತ್ತಾಯ ಮಂಡಿಸಿದರು. ಇದಕ್ಕೆ ಇನ್ನೋರ್ವ ರೈತ ಪ್ರತಿನಿಧಿ ಐ.ಎಮ್.ಸಿ. ಮೆಂಬರ್ ಉದಯ ಆಚಾರ್ಯ ರವರು ಧ್ವನಿಗೂಡಿಸಿದರು. ಅಲ್ಲದೇ ಈ ಬಗ್ಗೆ ಭಾರತದ ಸರಕಾರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿಯವರಿಗೂ ಮನವಿ ಪತ್ರ ಕಳುಹಿಸಲಾಗುವುದು ಎಂದು ಸುಭಾಸ್ ರೈ ಹೇಳಿದರು.
ಸದ್ರಿ ವಿಚಾರವನ್ನು ತೀವ್ರವಾಗಿ ಮನಗಂಡ ಸಮಿತಿಯವರು ಕೇಂದ್ರ ಸರಕಾರದ ಸಚಿವರಾದ ಶೋಭಾ ಕರಂದ್ಲಾಜೆಯವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಅಭಿಪ್ರಾಯ ಪಡಲಾಯಿತು. 
ಸಭೆಯಲ್ಲಿ ಅಡ್ವೈಸರಿ‌ ಕಮಿಟಿಯ ಸದಸ್ಯರಾದ ಡಾ. ಜಾರ್ಜ್ ವಿ. ಥೋಮಸ್ , ಡಾ. ಪ್ರಭುಚರಣ್ ಲೆಂಕಾ, ಡಾ. ಆನಂದ ಪ್ರಕಾಶ್, ಡಾ. ಆರ್. ಮುರಳೀಧರ ಪ್ರಸಾದ್, ನಿರ್ದೇಶಕರಾದ ಡಾ. ಟಿ.ಎನ್. ರವಿಪ್ರಸಾದ್, ಡಿಸಿಆರ್ ಹಿರಿಯ ವಿಜ್ಞಾನಿಗಳಾದ ಡಾ. ಜೆ. ದಿನಕರ ಅಡಿಗ, ಡಾ. ಮೋಹನ್, ಡಾ. ಶಂಸುದ್ದೀನ್, ಡಾ. ಸಿದ್ದಣ್ಣ ಸವದಿ, ಡಾ. ಮಂಜೇಶ್ ಜಿ.ಎನ್., ಡಾ. ರಾಜಶೇಖರ ಎಚ್., ಡಾ. ಡಿ. ಬಾಲಸುಬ್ರಮಣಿಯನ್, ಡಾ. ವಿ. ಥೋಂಡೈಮಾನ್  ಭಾಗವಹಿಸಿದರು. 

LEAVE A REPLY

Please enter your comment!
Please enter your name here