ಉಪ್ಪಿನಂಗಡಿ ನೆರೆ ಮುಂಜಾಗ್ರತಾ ಸಭೆ

0

  • ಇಲಾಖಾಧಿಕಾರಿಗಳು ವಿಶೇಷ ಎಚ್ಚರಿಕೆ ವಹಿಸಲು ಶಾಸಕರ ಸೂಚನೆ
 ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಅಲ್ಲಲ್ಲಿ ಚರಂಡಿಗಳು ಮುಚ್ಚಲ್ಪಟ್ಟಿದ್ದು, ಹೀಗಾಗಿ ಕೃತಕ ನೆರೆ ಭೀತಿ ಉಪ್ಪಿನಂಗಡಿ ಸುತ್ತಮುತ್ತಲಿನ ಪ್ರದೇಶವನ್ನು ಕಾಡಲಿದ್ದು, ಹೆದ್ದಾರಿ ಇಲಾಖೆ, ಮೆಸ್ಕಾಂ, ಅಗ್ನಿಶಾಮಕ ದಳ ಸಹಿತ ಎಲ್ಲಾ ಇಲಾಖಾಧಿಕಾರಿಗಳು ವಿಶೇಷ ಎಚ್ಚರಿಕೆಯನ್ನು ವಹಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಸೂಚನೆ ನೀಡಿದರು.
 
ಅವರು ಜೂನ್ 16ರಂದು ಉಪ್ಪಿನಂಗಡಿಯಲ್ಲಿ ಕರೆಯಲಾದ ನೆರೆ ಮುಂಜಾಗ್ರತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮೆಸ್ಕಾಂ ಇಲಾಖೆಯಲ್ಲಿನ ಸಿಬ್ಬಂದಿಗಳ ಕೊರತೆ ನೀಗಿಸಿ ದಿನದ ಎಲ್ಲಾ ಸಮಯದಲ್ಲೂ ಸಮರ್ಪಕ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು, ಹೆದ್ದಾರಿ ಪಾರ್ಶ್ವದ ಚರಂಡಿಗಳು ಸುಸ್ಥಿತಿಯಲ್ಲಿರಿಸುವುದು, ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಸಹಾಯವಾಣಿ ತೆರೆದು ಎಲ್ಲಾ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಸಮಸ್ಯೆಗೆ ಸ್ಪಂದನ ತೋರುವುದು, ಸಾಂಕ್ರಾಮಿಕ ರೋಗ ತಡೆಗಟ್ಟಲು  ಆರೋಗ್ಯ ಇಲಾಖೆ ಸದಾ ಕಾರ್ಯೋನ್ಮುಖವಾಗಬೇಕು, ಆಸ್ಪತ್ರೆಯಲ್ಲಿ ಖಾಯಂ ವೈದ್ಯರ ನೇಮಕಾತಿಗೆ ಕ್ರಮ ಜರುಗಿಸಬೇಕು, ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆ ಮೊದಲಾದ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಸಹಾಯಕ ಕಮಿಷನರ್ ಗಿರೀಶ್ ನಂದನ್, ತಹಶೀಲ್ದಾರ್ ರಮೇಶ್ ಬಾಬು, ಪುತ್ತೂರು ನಗರ ಸಭಾ ಆಯುಕ್ತ ಮಧು ಕುಮಾರ್, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಉಷಾ ಚಂದ್ರ ಮುಳಿಯ, ೩೪-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.   ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯ ಜಯಂತ ಪೊರೋಳಿ, ಮಾಜಿ ಸದಸ್ಯ ಡಾ. ರಾಜಾರಾಮ್ ಕೆ.ಬಿ., ವರ್ತಕ ಸಂಘದ ಅಧ್ಯಕ್ಷ  ಪ್ರಶಾಂತ್ ಡಿ’ಕೋಸ್ತ, ಕಾರ್‍ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಯು.ಟಿ. ತೌಸೀಫ್,  ಸುರೇಶ್ ಅತ್ರಮಜಲು, ರಶೀದ್ ಮಠ, ಯು.ಕೆ. ಇಸುಬು, ಜಯಪ್ರಕಾಶ್ ಬದಿನಾರು, ಕೈಲಾರ್ ರಾಜಗೋಪಾಲ ಭಟ್, ಆನಂದ ಕುಂಟಿನಿ ಮತ್ತಿತರರು ಉಪಸ್ಥಿತರಿದ್ದರು.  ಉಪ ತಹಸೀಲ್ದಾರ್ ಚೆನ್ನಪ್ಪ ಗೌಡ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here