ರಾಮಕುಂಜ: ‘ಶ್ರೀ ರಾಮಕುಂಜೇಶ್ವರ ಸೌಧ’ ವಾಣಿಜ್ಯ ಸಂಕೀರ್ಣ, ಇಜ್ಜಾವು ಸುಬ್ರಾಯ ಸಭಾಂಗಣ ಶುಭಾರಂಭ

  • ದೇಶದ ಅಭಿವೃದ್ಧಿಯಲ್ಲಿ ಉದಯೋನ್ಮುಖ ಉದ್ಯಮಿಗಳ ಕೊಡುಗೆಯೂ ಇದೆ: ಸುಬ್ರಹ್ಮಣ್ಯ ಶ್ರೀ

ರಾಮಕುಂಜ: ರಾಮಕುಂಜ ಮಹಾವಿದ್ಯಾಲಯದ ಮುಂಭಾಗ ನಿರ್ಮಾಣಗೊಂಡಿರುವ ‘ಶ್ರೀ ರಾಮಕುಂಜೇಶ್ವರ ಸೌಧ’ ವಾಣಿಜ್ಯ ಸಂಕೀರ್ಣ ಹಾಗೂ ಇಜ್ಜಾವು ಸುಬ್ರಾಯ ಸಭಾಂಗಣದ ಉದ್ಘಾಟನೆ ಜೂ.17ರಂದು ಬೆಳಿಗ್ಗೆ ನಡೆಯಿತು.

ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಆರ್ಥಿಕ ಸಂಪನ್ಮೂಲವೇ ಬಹು ಮುಖ್ಯ ಕಾರಣವಾಗಿದೆ. ಇದರಲ್ಲಿ ಪ್ರಜೆಗಳ ಪಾತ್ರವೂ ಇದೆ. ಸ್ವಾವಲಂಬಿಗಳಾಗಿ ಮೇಡ್ ಇನ್ ಮೀಡಿಯಾ, ಮೇಕ್ ಇನ್ ಇಂಡಿಯಾ ಘೋಷ ವಾಕ್ಯದೊಂದಿಗೆ ದೇಶದ ಅಭಿವೃದ್ಧಿಗೆ ಉದಯೋನ್ಮುಖ ಉದ್ಯಮಿಗಳು ಕೊಡುಗೆ ನೀಡುತ್ತಿದ್ದಾರೆ. ಅವರ ಸ್ಪೂರ್ತಿ, ಸ್ವಾಭಿಮಾನದ ಸಂಕೇತವಾಗಿ ದೇಶ ಅಭಿವೃದ್ಧಿ ಹೊಂದುತ್ತಿದೆ ಎಂದು ನುಡಿದರು. ಯುವ ಉದ್ಯಮಿ ಶಿವಪ್ರಸಾದ್ ಇಜ್ಜಾವುರವರು ಸ್ವಾವಲಂಬಿಯಾಗಿ, ಸ್ವಯಂ ಉದ್ಯಮಿಯಾಗಿ ಒಂದಷ್ಟೂ ಮಂದಿಗೆ ಉದ್ಯೋಗ ನೀಡಿದ್ದಾರೆ. ಕೃಷಿ, ರಿಯಲ್ ಎಸ್ಟೇಟ್, ಮೋಟಾರು ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಅವರು ಈಗ ವಾಣಿಜ್ಯ ಸಂಕೀರ್ಣ, ಸಭಾಂಗಣ ನಿರ್ಮಾಣದ ಮೂಲಕ ಊರಿನ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅವರದ್ದು ಬಹುಮುಖ ಪ್ರತಿಭೆ, ಅವರ ತಂದೆ, ತಾಯಿ ಹಾಗೂ ಅಜ್ಜ ಇಜ್ಜಾವು ಸುಬ್ರಾಯರವರ ಪ್ರಭಾವವೂ ಅವರ ಮೇಲಿದೆ. ತಾನು ಬೆಳೆಯುವುದರೊಂದಿಗೆ ಇತರರೂ ಬೆಳೆಯಬೇಕೆಂಬ ಸದಾಶಯದೊಂದಿಗೆ ರಾಮಕುಂಜೇಶ್ವರನ ಪರಿಸರದಲ್ಲಿ ಲೋಕಾರ್ಪಣೆಗೊಂಡಿರುವ ಈ ವಾಣಿಜ್ಯ ಸಂಕೀರ್ಣ, ಸಭಾಂಗಣದಿಂದ ಜನಸಾಮಾನ್ಯರಿಗೆ ಪ್ರಯೋಜನ ಸಿಗುವಂತೆ ಆಗಲಿ ಎಂದು ಹೇಳಿ ಸ್ವಾಮೀಜಿ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಸೇಸಪ್ಪ ರೈಯವರು ಮಾತನಾಡಿ, ರಾಮಕುಂಜ ದೇವಸ್ಥಾನ ಹಾಗೂ ಶಾಲೆಯ ಅಭಿವೃದ್ಧಿಯಲ್ಲಿ ದಿ.ಇಜ್ಜಾವು ಸುಬ್ರಾಯ ಆಚಾರ್‌ರವರ ಪಾತ್ರ ಬಹಳಷ್ಟಿದೆ. ಅವರೊಬ್ಬ ಭಾವನಾತ್ಮಕ ಜೀವಿ. ಈಗ ಅವರ ಹೆಸರು ಉಳಿಸಿಕೊಳ್ಳುವ ಕೆಲಸ ಅವರ ಮೊಮ್ಮಗ ಶಿವಪ್ರಸಾದ್ ಇಜ್ಜಾವು ಅವರಿಂದ ಆಗಿದೆ. ಊರಿನಲ್ಲಿಯೇ ವಾಣಿಜ್ಯ ಸಂಕೀರ್ಣ, ಸಭಾಂಗಣ ನಿರ್ಮಿಸುವ ಮೂಲಕ ಊರಿನ ಅಭಿವೃದ್ಧಿಗೆ ಅವರು ಕೊಡುಗೆ ನೀಡಿದ್ದಾರೆ ಎಂದರು. ಇನ್ನೋರ್ವ ಅತಿಥಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಕುವೆಚ್ಚಾರು ಮಾತನಾಡಿ, ರಾಮಕುಂಜದಲ್ಲಿನ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತಿವೆ. ಇದಕ್ಕೆ ಪೂರಕವಾಗಿ ಮಹಾವಿದ್ಯಾಲಯದ ಮುಂಭಾಗದಲ್ಲಿಯೇ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದೆ. ರಾಮಕುಂಜ ದೇವಸ್ಥಾನ, ಶಿಕ್ಷಣ ಸಂಸ್ಥೆಗಳ ಪರಿಸರ ಬೆಳವಣಿಗೆಗೆ ಆಗುತ್ತಿದೆ ಎಂದರು. ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಮಾತನಾಡಿ, ಶ್ರೀ ರಾಮಕುಂಜೇಶ್ವರ ಸೌಧ ವಾಣಿಜ್ಯ ಸಂಕೀರ್ಣ ಹಾಗೂ ಇಜ್ಜಾವು ಸುಬ್ರಾಯ ಸಭಾಂಗಣ ಯಶಸ್ವಿಯಾಗಿ ಮುನ್ನಡೆಯಲಿದೆ. ಈ ಮೂಲಕ ರಾಮಕುಂಜದ ಅಭಿವೃದ್ಧಿಗೆ ಕೊಡುಗೆ ನೀಡಿದ್ದ ಇಜ್ಜಾವು ಸುಬ್ರಾಯ ಆಚಾರ್‌ರವರ ಕನಸು ನನಸು ಆಗಲಿ ಎಂದರು.

ಮಾಧವ ಆಚಾರ್ಯ ಇಜ್ಜಾವು ಸ್ವಾಗತಿಸಿ, ಶಿವಪ್ರಸಾದ ಇಜ್ಜಾವು ವಂದಿಸಿದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್ ರಾಮಕುಂಜ ನಿರೂಪಿಸಿದರು. ಶ್ರೀಮತಿ ಬಿ.ಲಕ್ಷ್ಮೀ, ಶಶಿಕಲಾ ಮಾಧವ ಆಚಾರ್ಯ, ಕವಿತಾ ಶಿವಪ್ರಸಾದ್, ಪ್ರೇಮ್‌ಚಂದ್, ಯುಷ್ಮಾ ಹಾಗೂ ಇಜ್ಜಾವು ಕುಟುಂಬಸ್ಥರು, ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನರಹರಿ ಉಪಾಧ್ಯಾಯ ಇರ್ಕಿ ಮಠ ಇವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.