ಬಲ್ನಾಡು: ಮನೆಯಿಂದ ಚಿನ್ನಾಭರಣ ಕಳವು-ಓರ್ವ ಆರೋಪಿಗೆ ಜಾಮೀನು

0

ಪುತ್ತೂರು:ಬಲ್ನಾಡು ಗ್ರಾಮದ ಉಜ್ರುಪಾದೆ ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಆರೋಪಿಗಳಿಬ್ಬರ ಪೈಕಿ ಓರ್ವನಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಫೆ.26ರಂದು ರಾತ್ರಿ ಬಲ್ನಾಡು ಉಜ್ರುಪಾದೆ ಶಿವಪ್ರಸಾದ್ ಭಟ್ ಅವರ ಮನೆಯ ಬೀಗವನ್ನು ಮುರಿದು ಸುಮಾರು 160 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿತ್ತು.ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ದಿ.ಮೊಯಿದ್ದೀನ್ ಅವರ ಪುತ್ರ ಮಹಮ್ಮದ್ ಅಶ್ರಫ್ ಯಾನೆ ತಾರಿಗುಡ್ಡೆ ಅಶ್ರಫ್ ಯಾನೆ ಮನ್ಸೂರ್ ಯಾನೆ ಕಳ್ಳ ಆಶ್ರಫ್(42ವ) ಮತ್ತು ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಕೆರೆಮೂಲೆ ನಿವಾಸಿ ಪ್ರಸ್ತುತ ಗುಂಪಕಲ್ಲು ನಿವಾಸಿ ಯೂಸೂಫ್ ಅವರ ಪುತ್ರ ಕೆ.ಮೊಹಮ್ಮದ್ ಸಲಾಂ ಬಂಧಿತ ಆರೋಪಿಗಳು. ಘಟನೆ ನಡೆದ ಒಂದು ತಿಂಗಳೊಳಗೆ ಆರೋಪಿಗಳನ್ನು ಸಂಪ್ಯ ಪೊಲೀಸರು ಬಂಧಿಸಿ, ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು.ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.ಈ ಪೈಕಿ ತಾರಿಗುಡ್ಡೆ ಮಹಮ್ಮದ್ ಅಶ್ರಫ್ ಯಾನೆ ತಾರಿಗುಡ್ಡೆ ಅಶ್ರಫ್ ಯಾನೆ ಮನ್ಸೂರ್ ಯಾನೆ ಕಳ್ಳ ಆಶ್ರಫ್‌ ಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲರಾದ ದೇವಾನಂದ ಕೆ, ಜಯರಾಮ್ ರೈ, ಹರಿಣಿ ವಾದಿಸಿದರು.

LEAVE A REPLY

Please enter your comment!
Please enter your name here