ಪುತ್ತೂರು ಬಾಟ ಸ್ಟೋರ್ ಗೆ ಅತ್ಯುತ್ತಮ ಬಿಸಿನೆಸ್ ಪಾರ್ಟ್ನರ್ ಪ್ರಶಸ್ತಿ

0

ಪುತ್ತೂರು: ಇತ್ತೀಚೆಗೆ ಬೆಂಗಳೂರಿನ ಗೋಲ್ಡ್ ಪಿಂಚ್ ಹೋಟೆಲ್‌ನಲ್ಲಿ ನಡೆದ ಬಾಟ ಕಂಪೆನಿಯ ಸೌತ್ ಇಂಡಿಯಾ (ಕರ್ನಾಟಕ ಮತ್ತು ಕೇರಳ) ಬಿಸಿನೆಸ್ ಪಾರ್ಟ್ನರ್‌ಗಳ ಸಮಾವೇಶದಲ್ಲಿ ಪುತ್ತೂರಿನ ಮಹಾವೀರ ಮಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಟ ಸ್ಟೋರ್ 2020-21 ನೇ ಸಾಲಿನ ಅತ್ಯುತ್ತಮ ಬಿಸಿನೆಸ್ ಪಾರ್ಟ್ನರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಪ್ರಶಸ್ತಿಯನ್ನು ಪುತ್ತೂರು ಬಾಟ ಸ್ಟೋರ್‌ನ ಮಾಲಕಿ ಸೌಮ್ಯ ಪ್ರಸನ್ನ ಕುಮಾರ್‌ರವರು ಬಾಟ ಕಂಪೆನಿಯ ಜನರಲ್ ಮ್ಯಾನೇಜರ್ ಆಕಾಶ್ ಕೋಪರ್‌ಕರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಬಾಟ ಕಂಪೆನಿಯ ಹಿರಿಯ ಅಽಕಾರಿಗಳ ಜೊತೆಗೆ ಸೌತ್ ಇಂಡಿಯಾ ಬಿಸಿನೆಸ್ ಪಾರ್ಟ್ನರ್ ಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಈ ಕುರಿತು ‘ಸುದ್ದಿ’ಯೊಂದಿಗೆ ಮಾತನಾಡಿದ ಮಾಲಕರಾದ ಪ್ರಸನ್ನ ಕುಮಾರ್ ’ನಮ್ಮ ಬಾಟಾ ಶೋರೂಂ 2020ರಲ್ಲಿ ಶುಭಾರಂಭಗೊಂಡು ಗ್ರಾಹಕರ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೇ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು ಇದಕ್ಕೆ ಕೈಗನ್ನಡಿಯೆಂಬಂತೆ ಬಾಟ ಕಂಪೆನಿಯ ಸೌತ್ ಇಂಡಿಯಾ ಸೌತ್ ಇಂಡಿಯಾ ಬಿಸಿನೆಸ್ ಪಾರ್ಟ್ನರ್‌ಗಳ ಸಮಾವೇಶದಲ್ಲಿ ಅತ್ಯುತ್ತಮ ಬಿಸಿನೆಸ್ ಪಾರ್ಟ್ನರ್ ಪ್ರಶಸ್ತಿಯು ನಮ್ಮ ಸಂಸ್ಥೆಗೆ ಬಂದಿದೆ.ಈ ಪ್ರಶಸ್ತಿಗೆ ನಮ್ಮ ಗ್ರಾಹಕರ ಸಹಕಾರವೇ ಕಾರಣ.ಕೊರೋನಾ ಸಮಯದಲ್ಲಿ ನಾವು ಈ ಸ್ಟೋರ್ ಪ್ರಾರಂಭಿಸಿದ್ದೆವು ಆ ಸಂದರ್ಭದಲ್ಲಿ ಗ್ರಾಹಕರ ಸಹಕಾರದಿಂದ ನಾವು ಈ ಸಾಧನೆ ಮಾಡುವಂತಾಗಿದೆ ಈ ಸಮಾವೇಶದಲ್ಲಿ ಬಾಟ ಸಂಸ್ಥೆಯ 30ಕ್ಕೂ ಹೆಚ್ಚು ಡಿಸೈನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಈ ಹೊಸ ಡಿಸೈನ್‌ಗಳು ಮುಂದಿನ ದಿನಗಳಲ್ಲಿ ಎಲ್ಲಾ ಬಾಟ ಸ್ಟೋರ್ ಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ ಎಂದರು.

ಪುತ್ತೂರಿನ ಬಾಟ ಸ್ಟೋರ್ ಮಾಲಕಿ ಸೌಮ್ಯ ಪ್ರಸನ್ನ ಕುಮಾರ್ ಮಾತನಾಡಿ ನಮ್ಮ ಸ್ಟೋರ್ ಗೆ ಅವಾರ್ಡ್ ಬಂದಿರುವುದು ಸಂತೋಷದ ವಿಚಾರ,ನಮ್ಮ ಸ್ಟೋರ್ ನಲ್ಲಿ ಎಲ್ಲಾ ಉನ್ನತ ಬ್ರ್ಯಾಂಡ್‌ಗಳ ಲೇಡಿಸ್ ಹಾಗೂ ಮೆನ್ಸ್‌ವೆರ್‌ಗಳು ಲಭ್ಯವಿದೆ.ಬಾಟದ ಮೂವತ್ತು ಹೊಸ ವಿನ್ಯಾಸದ ಪಾದರಕ್ಷೆಗಳು ಕೂಡ ಕೆಲವೇ ದಿನಗಳಲ್ಲಿ ನಮ್ಮ ಸ್ಟೋರ್‌ಗಳಲ್ಲೂ ಲಭ್ಯವಾಗಲಿದೆ.ನಮ್ಮ ಸ್ಟೋರ್‌ನಲ್ಲಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ವಿವಿಧ ಆಫರ್‌ಗಳು ಲಭ್ಯವಿರುತ್ತದೆ. ಪ್ರಸ್ತುತ ಶಾಲಾ ಮಕ್ಕಳಿಗಾಗಿ ಆಫರ್ ಲಭ್ಯವಿದೆ.ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

LEAVE A REPLY

Please enter your comment!
Please enter your name here