ಉರ್ಲಾಂಡಿ ಹಲ್ಲೆ ಪ್ರಕರಣ-ಆರೋಪಿಗಳಿಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು

0

ಪುತ್ತೂರು:ದಾರಿಯಲ್ಲಿ ಕಾರು ನಿಲ್ಲಿಸಿದ ವಿಚಾರಕ್ಕೆ ಸಂಬಂಧಿಸಿ ನಡೆದ ಎರಡು ಪ್ರತ್ಯೇಕ ಹಲ್ಲೆ ಪ್ರಕರಣದಲ್ಲಿನ ಆರೋಪಿಗಳಿಬ್ಬರಿಗೆ ಪುತ್ತೂರು ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಉರ್ಲಾಂಡಿ ನಿವಾಸಿ ತಿರುಮಲಾಕ್ಷ ಜಿ.ಹೆಗ್ಡೆ ಮತ್ತು ಗೋಪಾಲಕೃಷ್ಣ ಹೆಗ್ಡೆ ಅವರಿಗೆ ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಉರ್ಲಾಂಡಿ ನಿವಾಸಿ ರಕ್ಷಿತ್ ಹೆಗ್ಡೆ ಎಂಬವರು ದಾರಿಯಲ್ಲಿ ಕಾರು ನಿಲ್ಲಿಸಿದ್ದಾರೆಂದು ಆರೋಪಿಸಿ ಸ್ಥಳೀಯ ನಿವಾಸಿ ತಿರುಮಲಾಕ್ಷ ಜಿ ಹೆಗ್ಡೆ ಮತ್ತು ಗೋಪಾಲಕೃಷ್ಣ ಹೆಗ್ಡೆಯವರು ಜೂ.೧೬ರಂದು ರಕ್ಷಿತ್ ಹೆಗ್ಡೆಯವರ ಮನೆಗೆ ಬಂದು ರಕ್ಷಿತ್ ಹೆಗ್ಡೆ ಮತ್ತು ಅವರ ಮನೆಯಲ್ಲಿದ್ದ ಶಿವಪ್ರಸಾದ್ ಅವರಿಗೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದ್ದು, ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅದಾದ ಬಳಿಕ ಜೂ.೧೮ರಂದು ತಿರುಮಲಾಕ್ಷ ಜಿ.ಹೆಗ್ಡೆ ಅವರು ಮತ್ತೆ ರಕ್ಷಿತ್ ಹೆಗ್ಡೆಯವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮನೆಯಲ್ಲಿದ್ದ ರಕ್ಷಾ ಆರ್ ಹೆಗ್ಡೆ ಅವರನ್ನು ಉzಶಿಸಿ ನಿನ್ನ ಅಣ್ಣ ಎಲ್ಲಿ ಎಂದು ಪ್ರಶ್ನಿಸಿದ್ದಲ್ಲದೆ ಹಲ್ಲೆ ನಡೆಸಿದ್ದ ಆರೋಪದಲ್ಲಿ ತಿರುಮಲಾಕ್ಷ ಹೆಗ್ಡೆಯವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು.ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಾದ ತಿರುಮಲಾಕ್ಷ ಹೆಗ್ಡೆ ಮತ್ತು ಗೋಪಾಲಕೃಷ್ಣ ಹೆಗ್ಡೆಯವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡ್, ನಿಶಾ ಕುಮಾರಿ ವಾದಿಸಿದರು.

LEAVE A REPLY

Please enter your comment!
Please enter your name here