ಕಾಣಿಯೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಳ್ಳತನ-ಸಮರ್ಪಕ ಸಿ.ಸಿ ಕ್ಯಾಮರಾ ಅಳವಡಿಕೆಗೆ ನಿರ್ಧಾರ

0

ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ತಕರ ಸಭೆಯು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾಣಿಯೂರಿನ ಸಭಾಂಗಣದಲ್ಲಿ ಜೂ ೧೬ರಂದು ನಡೆಯಿತು. ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ದರ್ಖಾಸು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷರೂ ಆಗಿರುವ ವರ್ತಕರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ಈಗಾಗಲೇ ಕಾಣಿಯೂರಿನಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ. ಪೇಟೆಯಲ್ಲಿರುವ ಸಿ.ಸಿ ಕ್ಯಾಮರ ಕೆಟ್ಟು ಹೋಗಿರುವ ಕಾರಣ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕಾಣಿಯೂರಿನಲ್ಲಿ ಸಮರ್ಪಕ ಸಿಸಿ ಕ್ಯಾಮರಾ ಅಳವಡಿಕೆ ಅವಶ್ಯಕತೆಯಿದೆ. ಕಾಣಿಯೂರು ಪೇಟೆಗೆ ಒಟ್ಟು ಮೂರು ಸಿ.ಸಿ ಕ್ಯಾಮರದ ಅವಶ್ಯಕತೆಯಿದೆ. ಪೇಟೆಯಲ್ಲಿ ಕೆಟ್ಟು ಹೋಗಿರುವ ಸಿ.ಸಿ ಕ್ಯಾಮರವನ್ನು ದುರಸ್ತಿಗೊಳಿಸಲಾಗುವುದು. ಗ್ರಾ.ಪಂ. ಮತ್ತು ವರ್ತಕರ ಸಹಕಾರದೊಂದಿಗೆ ಹೊಸ ಸಿ.ಸಿ ಕ್ಯಾಮರಾ ಅಳವಡಿಸುವ ಬಗ್ಗೆ ಕ್ರಮಕೈಗೊಳ್ಳಲಿದ್ದು, ವರ್ತಕರ ಅಭಿಪ್ರಾಯದ ಮೂಲಕ ನಿರ್ಧಾರ ತಗೆದುಕೊಳ್ಳಬೇಕಾಗಿದೆ ಎಂದರು. ಬೆಳ್ಳಾರೆ ಪೋಲಿಸ್ ಠಾಣೆಯ ಎಸ್.ಐ. ರುಕ್ಮ ನಾಯ್ಕ್ ಮಾತನಾಡಿ ಕಾಣಿಯೂರು ಬೆಳೆಯುತ್ತಿರುವ ಪೇಟೆ. ಈಗಾಗಲೇ ಹಲವಾರು ಬಾರಿ ಕಾಣಿಯೂರಿನಲ್ಲಿ ಕಳ್ಳತನಗಳು ನಡೆದಿದೆ. ಕಳ್ಳರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಾಣಿಯೂರಿನಲ್ಲಿ ಸಮರ್ಪಕ ಸಿ.ಸಿ ಕ್ಯಾಮರ ಮತ್ತು ಬೀದಿ ದೀಪಗಳ ಅವಶ್ಯಕತೆಯಿದೆ. ಕಳವು ಪ್ರಕರಣ ನಡೆದಾಗ ಪತ್ತೆ ಕಾರ್ಯಕ್ಕೆ ಉಪಯೋಗ ಆಗುತ್ತದೆ. ಈ ನಿಟ್ಟಿನಲ್ಲಿ ವರ್ತಕರ ಸಹಕಾರ ಅತೀ ಅಗತ್ಯ ಎಂದರು.

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಣಿಯೂರು ಗ್ರಾ.ಪಂ. ಸದಸ್ಯರಾದ ಲೋಕಯ್ಯ ಪರವ, ಪ್ರವೀಣ್‌ಚಂದ್ರ ರೈ ಕುಮೇರು, ತಾರಾನಾಥ ಇಡ್ಯಡ್ಕ, ವರ್ತಕರಾದ ನಾರಾಯಣ ಗೌಡ ಪುಣ್ಚತ್ತಾರು, ಹರಿಪ್ರಸಾದ್ ರೈ ಕಾಣಿಯೂರು, ಚಂದ್ರಶೇಖರ್ ಕಾಣಿಯೂರು, ಶುಭ ಆರ್ ನೋಂಡ, ಮಮತಾ ಅಗಳಿ, ಪರಮೇಶ್ವರ ಅನಿಲ, ಪದ್ಮಾವತಿ, ತೀರ್ಥಕುಮಾರ್ ಪೈಕ, ಸತೀಶ್ ಮರಕ್ಕಡ, ದಿಲೀಪ್ ಅಂಬುಲ, ಪರಮೇಶ್ವರ ಗೌಡ ಇಡ್ಯಡ್ಕ, ಆನಂದ ಭಂಡಾರಿ, ಅಬ್ದುಲ್ ರಝಾಕ್, ನಝೀರ್, ರಾಧಾಕೃಷ್ಣ, ಸುನಿತಾ ಎ.ಸಿ, ಶೀನಪ್ಪ, , ಪುರಂದರ, ಸುರೇಶ್, ಸುಧೀರ್, ಬಾಲಕೃಷ್ಣ ಕೆ, ಯತೀಶ್ ಕೆ, ಬಿ.ಆನಂದ, ನಿತಿನ್ ಕೆ, ಕುಸುಮಾಧರ ಐ, ಕುಸುಮಾಧರ ಮರ್ಲಾಣಿ, ಮಾಲಪ್ಪ ಗೌಡ, ಪುನಿತ್ ಕುಮಾರ್, ಶಿವರಾಮ ಡಿ.ಎಚ್, ಸುಧಾಕರ್ ಕಾಣಿಯೂರು, ರಘುರಾಮ ಉಪಾಧ್ಯಾಯ, ಸೆಲೀಮ್ ಬನಾರಿ, ವಸಂತ ಕೋಡಂದೂರು, ರಾಮಣ್ಣ ಪಿ, ಜನಾರ್ದನ, ದಯಾನಂದ ಕಲ್ಪಡ, ಮಹೇಶ್ ಕಲ್ಪಡ, ವಸಂತ್, ಶಾಫಿ, ಶಾಪಿ ಕೆ.ಎಂ, ವರದಾ, ಶ್ರೀಧರ ಎಚ್, ಫೈಜಲ್ ಕಾಣಿಯೂರು, ಅಬೂಬ್ಬಕ್ಕರ್, ಶಿವರಾಮ ಗೌಡ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು, ಗ್ರಾ.ಪಂ., ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಣಿಯೂರು ಗ್ರಾ.ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ದೇವರಾಜ್ ಸ್ವಾಗತಿಸಿ, ವಂದಿಸಿದರು.

ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಅಂಗಡಿ ಲೈಸನ್ಸ್ ರದ್ದು..: ತಮ್ಮ ತಮ್ಮ ಅಂಗಡಿಗಳ ಸುತ್ತ ಮುತ್ತ ಸ್ವಚ್ಚತೆಯ ಬಗ್ಗೆ ಪ್ರತಿಯೊಬ್ಬರು ಗಮನಹರಿಸಬೇಕು. ಒಂದು ವೇಳೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡದೇ ಇದ್ದಲ್ಲಿ ಅಂಗಡಿ ಪರವಾನಿಗೆಯನ್ನು ರದ್ದುಗೊಳಿಸಲು ಗ್ರಾ.ಪಂನಿಂದ ಕ್ರಮಕೈಗೊಳ್ಳಲಾಗುವುದು. ಎಲ್ಲಾ ಅಂಗಡಿಯವರಿಗೆ ಪಂಚಾಯತ್ ವತಿಯಿಂದ ಕಸದ ತೊಟ್ಟಿ ನೀಡಲು ನಿರ್ಧರಿಸಿದೆ ಎಂದ ಗಣೇಶ್ ಉದನಡ್ಕರವರು ಬೆಳಗ್ಗೆಯಿಂದ ಸಂಜೆಯವರೆಗೆ ವಾಹನ ಪಾರ್ಕಿಂಗ್ ಮಾಡುವವರು ವಾಹನಗಳನ್ನು ಅಂಗಡಿಗಳ ಮುಂದೆ ನಿಲ್ಲಿಸಬಾರದು, ಈ ಬಗ್ಗೆ ಹಲವು ದೂರುಗಳು ಬಂದಿದೆ. ವಾಹನ ಪಾರ್ಕಿಂಗ್ ಮಾಡುವವರಿಗೆ ಅಮ್ಮನವರ ದೇವಸ್ಥಾನದ ಸಮೀಪ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಾರ್ವಜನಿಕ ಶೌಚಾಲಯದಲ್ಲಿ ಶುಚಿತ್ವ ಇಲ್ಲ..: ಕಾಣಿಯೂರಿನಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ಶುಚಿತ್ವ ಇಲ್ಲ. ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ವರ್ತಕ ಸತೀಶ್ ಮರಕ್ಕಡ ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗಣೇಶ್ ಉದನಡ್ಕ, ಕಾಣಿಯೂರಿನಲ್ಲಿ ಶೌಚಾಲಯ ಬೆಳಗ್ಗೆಯಿಂದ ಸಂಜೆಯವರೆಗೆ ಬಾಗಿಲು ತೆರೆದಿರುತ್ತದೆ. ಶೌಚಾಲಯವನ್ನು ಬಳಸುವವರು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಪಂಚಾಯತ್ ಆದಷ್ಟು ಶುಚಿತ್ವಕ್ಕೆ ಆದ್ಯತೆ ನೀಡುತ್ತಿದೆ ಎಂದರು.
ಕಸದ ತೊಟ್ಟಿ ವಿತರಣೆ: ಕಾಣಿಯೂರು ಗ್ರಾ.ಪಂ. ವತಿಯಿಂದ ವರ್ತಕರಿಗೆ ತಾತ್ಕಾಲಿಕವಾಗಿ ಕಸದ ತೊಟ್ಟಿಯನ್ನು ವಿತರಿಸಲಾಯಿತು.

ಕಾಣಿಯೂರು ವರ್ತಕರ ಸಂಘದ ಸಭೆ

ವರ್ತಕರ ಸಹಕಾರದಿಂದ ಕೆಲ ವರ್ಷಗಳ ಹಿಂದೆ ಕಾಣಿಯೂರು ಪೇಟೆಯಲ್ಲಿ ಅಳವಡಿಸಲಾಗಿದ್ದ ಸಿ.ಸಿ ಕ್ಯಾಮರಾವನ್ನು ಪಂಚಾಯತ್‌ಗೆ ಹ್ಯಾಂಡ್‌ಓವರ್ ಮಾಡದ ಹಿನ್ನಲೆಯಲ್ಲಿ ಅದರ ಪಾಸ್ ವರ್ಡ್ ಕೂಡ ಮಾಲಕರು ನೀಡದಿರುವುದರಿಂದ ದುರಸ್ತಿಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಪೋಲಿಸರಿಗೆ ದೂರು ನೀಡಲಾಗಿದೆ.- ಗಣೇಶ್ ಉದನಡ್ಕ, ಉಪಾಧ್ಯಕ್ಷರು, ಗ್ರಾ.ಪಂ. ಕಾಣಿಯೂರು

 

ವರ್ತಕರ ಸಹಕಾರ ಅಗತ್ಯ- ರುಕ್ಮ ನಾಯ್ಕ್

 

LEAVE A REPLY

Please enter your comment!
Please enter your name here