ಪುತ್ತೂರು: ಇಲ್ಲಿನ ಅಬ್ಸಲ್ಯೂಟ್ ಲರ್ನಿಂಗ್ ಅಕಾಡೆಮಿ ವತಿಯಿಂದ, ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕೋರ್ಸುಗಳ ಪ್ರವೇಶ ಪರೀಕ್ಷೆಗಳಾದ ಸಿಇಟಿ, ಜೆಇಇ ಮತ್ತು ನೀಟ್ಗೆ ಸಂಬಂಧಿಸಿದಂತೆ ಒಂದು ದಿನದ ಉಚಿತ ವಿಶೇಷ ತರಬೇತಿಯನ್ನು ಆಸಕ್ತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಜೂ.26ರಂದು ಬೆಳಿಗ್ಗೆ 9ರಿಂದ ಪುತ್ತೂರು ಎಪಿಎಂಸಿ ರಸ್ತೆಯ, ಬರೆಕರೆ ವೆಂಕಟ್ರಮಣ ಸಮುದಾಯ ಭವನದ ಕಾನ್ವಾಯ್ ಕೋಚಿಂಗ್ ಆವರಣದಲ್ಲಿ ನಡೆಯಲಿದೆ. ನುರಿತ ಪ್ರಾಧ್ಯಾಪಕರ ಉಪನ್ಯಾಸ ಮತ್ತು ವಿದ್ಯಾರ್ಥಿಗಳಿಗೆ ಅವಶ್ಯಕ ಪೂರ್ವ ತಯಾರಿಯ ಮಾರ್ಗದರ್ಶನವನ್ನು ಹೊಂದಿರುತ್ತದೆ. ಆಸಕ್ತರು 9535622839, 9902740569ನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.