ದ್ವಿತೀಯ ಪಿಯುಸಿ ಪರೀಕ್ಷೆ: ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಶೇ. 100 ಫಲಿತಾಂಶ 

0

ಪುತ್ತೂರು:  2021-22ನೇ ಶೈಕ್ಷಣಿಕ ವರ್ಷದಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಶೇ.100ರ ಅತ್ಯುತ್ತಮ ಫಲಿತಾಂಶವನ್ನು ತಮ್ಮದಾಗಿಸಿಕೊಂಡಿರುತ್ತಾರೆ.

 


ಪರೀಕ್ಷೆ ಬರೆದ 94 ವಿದ್ಯಾರ್ಥಿಗಳಲ್ಲಿ , 43 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ , 50 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ. ಶ್ರೀಹರ್ಷ ಮೊಗ್ರ 586 ಅಂಕ-ಪ್ರಥಮ ಹಾಗೂ ನಿಹಾರ್ ಎಮ್ ಶೆಟ್ಟಿ 583 ಅಂಕ-ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗಣಿತಶಾಸ್ತ್ರ ವಿಷಯದಲ್ಲಿ – ಒಂಭತ್ತು ವಿದ್ಯಾರ್ಥಿಗಳು, ಗಣಕವಿಜ್ಞಾನ ವಿಷಯದಲ್ಲಿ–ಆರು ವಿದ್ಯಾರ್ಥಿಗಳು, ಭೌತಶಾಸ್ತ್ರ ವಿಷಯದಲ್ಲಿ– ಮೂರು ವಿದ್ಯಾರ್ಥಿಗಳು,ರಸಾಯನಶಾಸ್ತ್ರ   ವಿಷಯದಲ್ಲಿ – ಒಬ್ಬ ವಿದ್ಯಾರ್ಥಿ ಹಾಗೂ ಜೀವಶಾಸ್ತ್ರ ವಿಷಯದಲ್ಲಿ–ಒಬ್ಬ ವಿದ್ಯಾರ್ಥಿ ಪೂರ್ಣ ಅಂಕಗಳನ್ನು ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here