ದ್ವಿತೀಯ ಪಿಯುಸಿ ಪರೀಕ್ಷೆ : ವಿದ್ಯಾರಶ್ಮಿ ಸ್ವತಂತ್ರ ಪದವಿಪೂರ್ವ ಕಾಲೇಜಿಗೆ 89% ಫಲಿತಾಂಶ

0

 ಪುತ್ತೂರು:   ಈ ಸಾಲಿನ ದ್ವಿತೀಯ ಪಿ.ಯು.ಸಿ. ಅಂತಿಮ ಪರೀಕ್ಷೆಯಲ್ಲಿ ವಿದ್ಯಾರಶ್ಮಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 83% ಮತ್ತು ವಿಜ್ಞಾನ ವಿಭಾಗದಲ್ಲಿ 89% ಫಲಿತಾಂಶ ಬಂದಿದೆ.

 

ವಾಣಿಜ್ಯ ವಿಭಾಗದಲ್ಲಿ ಒಟ್ಟು 41 ವಿದ್ಯಾರ್ಥಿಗಳು ಹಾಜರಾಗಿದ್ದು 34 ಮಂದಿ ತೇರ್ಗಡೆಯಾಗಿದ್ದಾರೆ. 8 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 18 ಮಂದಿ ಪ್ರಥಮ ದರ್ಜೆಯಲ್ಲಿ, 7 ಮಂದಿ ದ್ವಿತೀಯ ದರ್ಜೆಯಲ್ಲಿ ಮತ್ತು 1 ವಿದ್ಯಾರ್ಥಿ ಸಾಮಾನ್ಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 17 ವಿದ್ಯಾರ್ಥಿಗಳು ಹಾಜರಾಗಿದ್ದು 15 ಮಂದಿ ತೇರ್ಗಡೆಯಾಗಿದ್ದಾರೆ. 4 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 11 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 566 ಅಂಕಗಳೊಂದಿಗೆ ಆಶಾ ಬಿ. (D/o ನಾರಾಯಣ ಗೌಡ ಮತ್ತು ರಾಜೀವಿ, ಚಾರ್ವಾಕ, ಕಡಬ.) ಪ್ರಥಮ ಸ್ಥಾನಿಯಾಗಿದ್ದಾರೆ. ಉಳಿದಂತೆ ಚೈತನ್ಯ ರೈ ವಿ. – 564 ಅಂಕಗಳು (D/o ಎಂ. ವಿಶ್ವನಾಥ ರೈ ಮತ್ತು ಸುಚಿತ್ರಾ ವಿ. ರೈ, ಕಾಣಿಯೂರು, ಕಡಬ), ಪ್ರಜ್ಞಾ ಕೆ. – 562 ಅಂಕಗಳು (D/o ನಾಗರಾಜ್ ಕೆ. ಮತ್ತು ಉಷಾ ಕೆ., ಕಜೆ, ಪೆರುವಾಜೆ, ಸುಳ್ಯ.), ಸೌಪರ್ಣಿಕಾ ರೈ – 561 ಅಂಕಗಳು (D/o ಪ್ರೇಮನಾಥ ರೈ ಮತ್ತು ಜಯಂತಿ ರೈ, ಪೆರುವಾಜೆ, ಮುಕ್ಕೂರು.), ಮನ್ವಿತ್ ಪಿ.ಜೆ. – 557 ಅಂಕಗಳು (S/o ಜಯರಾಮ ಪಿ. ಮತ್ತು ಸುಲೋಚನಾ ಕೆ., ಐವತ್ತೊಕ್ಲು, ಕರಿಕ್ಕಳ, ಕಡಬ.), ರಜತ ಜೆ.ಎನ್. – 554 ಅಂಕಗಳು (D/o ಜಯರಾಮ ಮತ್ತು ಹರಾವತಿ, ನಾವೂರು, ಬೊಬ್ಬೆಕೇರಿ.), ಸುರಕ್ಷಾ – 541 ಅಂಕಗಳು (D/o ಸೂರಪ್ಪ ಗೌಡ ಮತ್ತು ಹರಿಣಾಕ್ಷಿ, ಹೊಸೊಕ್ಲು, ಕುದ್ಮಾರು, ಕಡಬ) ಮತ್ತು ಶೀತಲ್ ಕೆ.ಡಿ. – 532 ಅಂಕಗಳು (D/o ಕೆ.ಕೆ. ದೊಡ್ಡಯ್ಯ ಗೌಡ ಮತ್ತು ರಾಜೇಶ್ವರಿ, ಚಾರ್ವಾಕ, ಕಡಬ.) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

 

 

ವಿಜ್ಞಾನ ವಿಭಾಗದಲ್ಲಿ 562 ಅಂಕಗಳೊಂದಿಗೆ ಸೌಜನ್ಯಾ ವಿ.ವಿ. (D/o ವೆಂಕಪ್ಪ ವಿ.ಡಿ. ಮತ್ತು ಭವಾನಿ ಬಿ.ಎಸ್., ಸೋಮವಾರಪೇಟೆ.) ಪ್ರಥಮ ಸ್ಥಾನಿಯಾಗಿದ್ದಾರೆ. ಉಳಿದಂತೆ ಸಾಕ್ಷಿ ಕೆ. – 546 ಅಂಕಗಳು (ಆD/o ಕೆ. ಕೊರಗಪ್ಪ ಗೌಡ ಮತ್ತು ತಿರುಮಲೇಶ್ವರಿ ಕೆ., ಕಂಟ್ರಮಜಲು, ಪುತ್ತೂರು.), ಆಶಿತಾ ಬಿ. – 519 ಅಂಕಗಳು (D/o ಹೊನ್ನಪ್ಪ ಗೌಡ ಮತ್ತು ವಾರಿಜಾ, ಬಳ್ಪ, ಕಡಬ.) ಮತ್ತು ಸುಹೈಬತುಲ್ ಅಸ್ಲಾಮಿಯಾ – 515 ಅಂಕಗಳು (D/o ಹಮೀದ್ ಬಿ. ಮತ್ತು ಅನೀಸಾ ಎಸ್., ಕಾಮಣ, ಬೆಳಂದೂರು, ಕಡಬ.) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಉತ್ತಮ ಫಲಿತಾಂಶ ತಂದುಕೊಟ್ಟ ಎಲ್ಲ ವಿದ್ಯಾರ್ಥಿಗಳ ಸಾಧನೆಯನ್ನು ಮತ್ತು ಉಪನ್ಯಾಸಕ ವೃಂದದ ಪ್ರಯತ್ನವನ್ನು ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಮತ್ತು ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿಯವರು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here