- ಅಧ್ಯಕ್ಷ: ಚಂದ್ರ ಜಿ ಕುಂಬ್ರ, ಕಾರ್ಯದರ್ಶಿ: ರಾಜೇಶ್ ಎಂ
ಪುತ್ತೂರು: ವರ್ಣಕುಂಚ ಕಮರ್ಷಿಯಲ್ ಆರ್ಟಿಸ್ಟ್ ಎಸೋಸಿಯೇಶನ್ ಪುತ್ತೂರು ಇದರ ಮಹಾಸಭೆಯು ನಿಕಟಪೂರ್ವ ಅಧ್ಯಕ್ಷ ಶೇಖರ್ ಮೊಟ್ಟೆತ್ತಡ್ಕರವರ ಅಧ್ಯಕ್ಷತೆಯಲ್ಲಿ ಜೂ.೧೪ ರಂದು ಮುಕ್ರಂಪಾಡಿಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಪದ್ಮ ಆರ್ಟ್ಸ್ನ ಪದ್ಮಯ್ಯ ಗೌಡ, ಅಧ್ಯಕ್ಷರಾಗಿ ಕುಂಬ್ರ ಉದಯ್ ಆರ್ಟ್ಸ್ನ ಚಂದ್ರ ಜಿ.ಕುಂಬ್ರ, ಕಾರ್ಯದರ್ಶಿಯಾಗಿ ನಗರದ ಶ್ರೀಮಾತ ಆರ್ಟ್ಸ್ನ ರಾಜೇಶ್ ಎಂ, ಉಪಾಧ್ಯಕ್ಷರಾಗಿ ಭಾವನಾ ಕಲಾ ಆರ್ಟ್ಸ್ನ ವಿಘ್ನೇಶ್ ವಿಶ್ವಕರ್ಮ, ಜತೆ ಕಾರ್ಯದರ್ಶಿಯಾಗಿ ರಾಬರ್ಟ್ಸ್ ಆರ್ಟ್ಸ್ನ ರೀವನ್, ಕೋಶಾಧಿಕಾರಿಯಾಗಿ ಗಣೇಶ್ ಎಂ.ಎನ್, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಶಾಂತಿ ಆರ್ಟ್ಸ್ನ ಸುರೇಶ್, ಸಲಹೆ ಸಮಿತಿ ಸದಸ್ಯರುಗಳಾಗಿ ರಾಬರ್ಟ್, ಹರೀಶ್, ಇಮ್ತಿಯಾಜ್ರವರುಗಳನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಸೀಮಾದ ರಾಜೇಶ್, ಗಿರಿ ಆರ್ಟ್ಸ್ನ ಗಿರೀಶ್, ನಾಗ್ ಆರ್ಟ್ಸ್ನ ನಾಗಪ್ಪ, ಶೇಖರ್ ಮೊಟ್ಟೆತ್ತಡ್ಕ, ಗಣೇಶ್ ಎಂ.ಎನ್, ಪ್ರಸಾದ್ ಕೊಲ, ಮಹೇಶ್ ಪೂಜಾ, ತಾರಾ ಆರ್ಟ್ಸ್ನ ತಾರಾನಾಥರವರುಗಳನ್ನು ಆಯ್ಕೆ ಮಾಡಲಾಯಿತು. ನಾಗಪ್ಪ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.