ಕೊಡಿಪ್ಪಾಡಿ ಬಾಲಮೇಳದಲ್ಲಿ ಲಂಚ, ಭ್ರಷ್ಟಾಚಾರದ‌ ವಿರುದ್ಧ ಘೋಷಣೆ, ಪತಿಜ್ಞಾ ಸ್ವೀಕಾರ

0

ಪುತ್ತೂರು; ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ‌ ವೇದಿಕೆಯಿಂದ ನಡೆಯುತ್ತಿರುವ ಜನಾಂದೋಲನ ಬೆಂಬಲಿಸಿ ಜೂ.17ರಂದು ಕೊಡಿಪ್ಪಾಡಿ ಗ್ರಾ.ಪಂ ಸಭಾಂಗಣದಲ್ಲಿ ಚೇತನಾ ಮಹಿಳಾ ಮಂಡಲಗಳ ಸಹಯೋಗದಲ್ಲಿ ನಡೆದ ಅಂಗನವಾಡಿಗಳ ಬಾಲಮೇಳದಲ್ಲಿ ಘೋಷಣೆ ಕೂಗಿ, ಪ್ರತಿಜ್ಞೆ ಸ್ವೀಕರಿಸಿದರು.

ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ, ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ. ಹೆಗಡೆ ಪ್ರತಿಜ್ಞಾ ವಿಧಿ ಬೋಧಿಸಿದರು. ಚೇತನಾ ಮಹಿಳಾ ಮಂಡಲದ ಅಧ್ಯಕ್ಷೆ ಅನಿತಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ, ಅಂಗನವಾಡಿ ಮೇಲ್ವಿಚಾರಕಿ ಸುಜಾತ, ನಿವೃತ್ತ ಪ್ರಾಂಶುಪಾಲ ರಾಧಾಕೃಷ್ಣ ಭಟ್, ಕೊಡಿಪ್ಪಾಡಿ ಗ್ರಾ.ಪಂ ಸದಸ್ಯರಾದ ಸ್ಮಿತಾ, ಚಂದ್ರಾವತಿ, ಕಿರಿಯ ಆರೋಗ್ಯ ಸಹಾಯಕಿ ತೇಜಾಕ್ಷಿ, ಸಮುದಾಯ ಆರೋಗ್ಯಾಧಿಕಾರಿ ರಾಧಾ ಪಾಟೀಲ್, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಪೋಷಕರು ಪ್ರತಿಜ್ಞೆ ಸ್ವೀಕರಿಸಿದರು.

LEAVE A REPLY

Please enter your comment!
Please enter your name here