ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್. ಎಲ್.ಸಿ. ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

0

  • ಜೀವನವನ್ನು ಚಾಲೆಂಜ್ ಆಗಿ ತೆಗೆದುಕೊಡರೆ ಯಶಸ್ಸು ಸಾಧ್ಯ: ಪ್ರಹಲ್ಲಾದ್ ಜೆ.ಶೆಟ್ಟಿ
  • ಸಮಾಜದಲ್ಲಿ ನೀವು ಬದುಕುವ ರೀತಿ ಸಂಸ್ಥೆಯ ಹೆಸರನ್ನು ಇಮ್ಮುಡಿಗೊಳಿಸ ಬಲ್ಲದು: ರವೀಂದ್ರ ಡಿ.

 


ವಿಟ್ಲ: ಜೀವನವನ್ನು ಚಾಲೆಂಜ್ ಆಗಿ ತೆಗೆದುಕೊಂಡು ಮುಂದುವರಿದರೆ ಯಶಸ್ಸು ಸಾಧ್ಯ. ಶಿಕ್ಷಕರ ಪ್ರಯತ್ನಕ್ಕೆ ಸಹಕಾರ ನೀಡುವ ಕೆಲಸ ಹೆತ್ತವರಿಂದ ಆಗಬೇಕಾಗಿದೆ. ಸನ್ಮಾನ ಇರುವುದು ಸಾಧನೆಗಾಗಿ. ಇಂದಿನ ಈ ಅಭಿನಂದನಾ ಸಮಾರಂಭ ಮುಂದಿನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವಾಗಿದೆ ಎಂದು ಮಾಣಿ ಬಾಲವಿಕಾಸ ಟ್ರಸ್ಟ್ ನ ಸಂಚಾಲಕರಾದ ಪ್ರಹಲ್ಲಾದ್ ಜೆ. ಶೆಟ್ಟಿರವರು ಹೇಳಿದರು.

ಅವರು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ರಜತರಶ್ಮಿ ವೇದಿಕೆಯಲ್ಲಿ ನಡೆದ ಪ್ರಸ್ತುತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸಮನಾಗಿ ಸಾಗಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಸಂಸ್ಥೆಯ‌ ಯಶಸ್ಸಿನಲ್ಲಿ ವಿದ್ಯಾರ್ಥಿಗಳ ಪಾಲು ಬಹಳಷ್ಠಿದೆ. ಪ್ರಯತ್ನ ಪಟ್ಟರೆ ಏನನ್ನು ಸಾಧಿಸಬಹುದು. ಶ್ರದ್ಧೆಯಿಂದ ಕಲಿತು ಸತ್ಪ್ರಜೆಗಳಾಗಿ ಬಾಳಿ ಎಂದು ಅವರು ಶುಭಹಾರೈಸಿದರು.

 

 

ಶಾಲಾ ಆಡಳಿತಾಧಿಕಾರಿ ರವೀಂದ್ರ ಡಿ.ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ನೀವು ಎಸ್. ಎಸ್. ಎಲ್.ಸಿ.ಯಲ್ಲಿ ಪಡೆದ ಅಂಕಗಳು ನಿಮ್ಮ ಯಶಸ್ಸಿನ ಒಂದು ಮೆಟ್ಟಿಲಾಗಿರುತ್ತದೆ. ನಮ್ಮ ಪ್ರಯತ್ಮ ಕ್ಕೆ ಇದೀಗ ತಕ್ಕ ಪ್ರತಿಫಲ ಸಿಕ್ಕಿದೆ. ಓರ್ವ ವಿದ್ಯಾರ್ಥಿ ಸಮಾಜದಲ್ಲಿ ಸತ್ಪ್ರಜೆಯಾಗಿ‌ ಹೇಗೆ ಬಾಳಬೇಕೆಂಬ ಬಗ್ಗೆ ಸಂಸ್ಥೆಯಿಂದ ಕಲಿಸಿಕೊಡಲಾಗಿದೆ. ನಾವೆಲ್ಲರೂ ಕುಶಿಪಡುವ ಕ್ಷಣ ಇದಾಗಿದೆ. ನಮ್ಮ ಕುಶಿಗೆ ನೀರೆರೆಯುವ ಕೆಲಸ ಸಂಸ್ಥೆಯ ಮಕ್ಕಳಿಂದ ಆಗಿದೆ. ನಿಮ್ಮ ಗುರಿಯನ್ನು ತಲುಪುವ ಪ್ರಯತ್ನ ಸದಾ ನಿಮ್ಮಲ್ಲಿರಲಿ. ಪ್ರತಿಯೊಂದು ವಿಚಾರವನ್ನು‌ ಚಾಲೆಂಜ್ ಆಗಿ ತೆಗೆದುಕೊಳ್ಳುವ ಗುಣ ನಿಮ್ಮಲ್ಲಿರಲಿ.
ಈ ಒಂದು ಅಭಿನಂದನೆ ಕಾರ್ಯಕ್ರಮ ವಿದ್ಯಾರ್ಥಿಗಳು ಇನ್ನೊಂದು ಯಶಶ್ಸಿನ ಗರೆದಾಟಲು ಒಂದು ಸಣ್ಣ ಪ್ರೋತ್ಸಾಹ ವಾಗಿದೆ. ನೀವು ಸಮಾಜಕ್ಕೆ ನೀಡುವ ಕೊಡುಗೆ ಜೀವನದಲ್ಲಿ ಅತೀ ಮುಖ್ಯವಾದುದು. ಸಮಾಜದಲ್ಲಿ ನೀವು ಬದುಕುವ ರೀತಿ ಸಂಸ್ಥೆಯ ಹೆಸರನ್ನು ಇನ್ನಷ್ಟು ಇಮ್ಮುಡಿಗೊಳಿಸ ಬಲ್ಲದು ಎಂದರು

ಈ ಸಂದರ್ಭ ಎಸ್.ಎಸ್.ಎಲ್.ಸಿ.ಯಲ್ಲಿ 624 ಅಂಕ ಪಡೆದ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ತಿರುಮಲೇಶ್ವರ ಭಟ್, ಆಶಾ ಕೆ. ದಂಪತಿ ಪುತ್ರ ಅಬಿರಾಮ್ ಕೆ. ರವರನ್ನು ಸನ್ಮಾನಿಸಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 43 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಎಸ್. ನಾಯಕ್ ಹಾಗೂ ಸದಸ್ಯರಾದ ಪುಷ್ಪರಾಜ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ. ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿಯರದಾ ಮಂಜುಳಾ ಗೌಡ, ಸುದಾ ರಾವ್ ಸನ್ಮಾನಿತರ ಪಟ್ಟಿ ವಾಚಿಸಿದರು.
ಶಿಕ್ಷಕಿಯರಾದ ರಶ್ಮಿ ಫೆರ್ನಾಂಡಿಸ್ , ಯಜ್ಞೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶೋಭ ಎಂ. ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here